ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರತಾಲೂಕಿನ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಮೀಸಲಿಡುವಂತೆ ತಾಲೂಕಿನ ಜನತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಶ್ರೀನಿವಾಸಪುರ ತಾಲೂಕಿನಲ್ಲಿ ಸುಮಾರು ೫೦ ಸಾವಿರ ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗುತ್ತಿದೆ, ಇಲ್ಲಿನ ಜನರ ಜೀವನಾಡಿ ಮಾವು ಬೆಳೆಗೆ ಸಮರ್ಪಕವಾದ ಮಾರುಕಟ್ಟೆ ವ್ಯವಸ್ಥೆ ಇಲ್ಲ, ಜತೆಗೆ ಸರ್ಕಾರಿ ಸಂಸ್ಕರಣಾ ಘಟಕ ಸ್ಥಾಪಿಲ್ಲ.ಸ್ಥಳೀಯವಾಗಿ ಮೂರು ಖಾಸಗಿ ಮಾವು ಸಂಸ್ಕರಣದ ಘಟಕಗಳು ಇವೆ. ಇದರೊಂದಿಗೆ ದೊಡ್ದಮಟ್ಟದ ಸರ್ಕಾರಿ ಮಾವು ಸಂಸ್ಕರಣದ ಘಟಕ ಬೇಕು ಎನ್ನುವ ಕೂಗು ಸಾಕಷ್ಟು ವರ್ಷದಿಂದ ತಾಲೂಕಿನ ಮಾವು ಬೆಳಗಾರರಿಗೆ ನಿರೀಕ್ಷೆ ಇದೆ, ಇದಕ್ಕೆ ಜೀವ ತುಂಬ ಕೆಲಸ ಬಜೆಟ್ ನಲ್ಲಿ ಆಗಬೇಕಿದೆ ಹಾಗೆ ರಾಜಕೀಯ ನಿರಾಶ್ರೀತರ ಶಿಬಿರ ಎನ್ನುವ ಆರೋಪ ಹೊತ್ತಿರುವ ಮಾವು ಮಂಡಳಿಯ ಮುಖ್ಯ ಕಚೇರಿಗೆ ಅಗತ್ಯ ಅನುದಾನ ನೀಡವಂತೆ ಮನವಿ ಮಾಡಿದ್ದಾರೆ.ಎಪಿಎಂಸಿ ಅಭಿವೃದ್ಧಿಪಡಿಸಿ
ಇಲ್ಲಿನ ಕೃಷಿ ಉತ್ಪನ್ನಮಾರುಕಟ್ಟೆ ಅಪ್‌ಗ್ರೇಡ್ ಆಗಬೇಕಿದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ನಿರ್ಮಾಣ ಆಗುವ ಕೆಲಸ ಆಗಬೇಕು, ಆದರೆ ಇದನ್ನು ಯಾರದೋ ಮೂಲಾಜಿಗೆ ಮಾರುಕಟ್ಟೆ ನಡೆಸುವಂತೆ ಇಲ್ಲಿನ ವ್ಯವಸ್ಥೆ ಇದೆ. ವಿಶ್ವದ ಪ್ರಸಿದ್ದ ಮಾವು ಮಾರುಕಟ್ಟೆ ಸ್ಥಾಪನೆಗೆ ಮಾತ್ರ ಜೀವ ತುಂಬುವ ಕೆಲಸ ಆಗುತ್ತಿಲ್ಲ, ಇಕ್ಕಾಟದ ರಸ್ತೆಗಳು ಮೂಲಭೂತ ಸೌಕರ್ಯಗಳ ಕೊರತೆಯಲ್ಲಿ ಮಾರುಕಟ್ಟೆ ಆಡಳಿತ ಸಾಗುತ್ತಿದೆ.ಕಾರ್ಮಿಕರಿಗೆ ಸೌಕರ್ಯಗಳಿಲ್ಲಮಾವು ಸೀಜನ್ ಸಂದರ್ಭದಲ್ಲಿ ಮಾವಿನ ಮಂಡಿಗಳಲ್ಲಿ ಕೆಲಸ ಮಾಡಲು ಬರುವಂತ ವಲಸೆ ಕೂಲಿಕಾರ್ಮಿಕರು ಕನಿಷ್ಠ ಮೂಲಭೂತ ಸೌಕರ್ಯಗಳು ಪಡೆಯಲು ಸಾಧ್ಯವಿಲ್ಲ ಅಂತಹ ಹೀನಾಯ ಪರಿಸ್ಥಿತಿ ಮಾರುಕಟ್ಟೆಯಲ್ಲಿದೆ. ಕೂಲಿಕಾರ್ಮಿಕರಿಗೆ ತಾತ್ಕಾಲಿಕ ವಸತಿ ಕಲ್ಪಿಸಲು ಇಲ್ಲಿನ ಕೃಷಿ ಉತ್ಪನ್ನಮಾರುಕಟ್ಟೆ ಸಮಿತಿಯಲ್ಲಿ ಆಶ್ರಯಧಾಮ ಕಲ್ಪಿಸಬೇಕು ಎನ್ನುವುದು ಬೇಡಿಕೆ.ತಾಲೂಕಿನ ಪ್ರಮುಖ ಗ್ರಾಮ ಪಂಚಾಯಿತಿ ಕೇಂದ್ರವಾದ ಗೌವನಪಲ್ಲಿ ಶ್ರೀನಿವಾಸಪುರ ಪಟ್ಟಣಕ್ಕೆ ಸರಿಸಮನಾಗಿ ವ್ಯವಹಾರಿಕವಾಗಿ ಅಭಿವೃದ್ಧಿಯಾಗುತ್ತಿರುವ ಗ್ರಾಮಪಂಚಾಯಿತಿ ಇದನ್ನು ಪಟ್ಟಣಪಂಚಾಯಿತಿಗಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ತಾಲೂಕಿನ ಜನತೆ ಕೋರಿದ್ದಾರೆ.