ಜಿಲ್ಲಾ ಕ್ರೀಡಾಂಗಣದಲ್ಲಿ ಇಂದಿರಾ ಕ್ಯಾಂಟೀನ್‌ ಸ್ಥಾಪಿಸಿ: ಎಸ್‌ಎಫ್‌ಐ

| Published : Feb 13 2024, 12:53 AM IST

ಜಿಲ್ಲಾ ಕ್ರೀಡಾಂಗಣದಲ್ಲಿ ಇಂದಿರಾ ಕ್ಯಾಂಟೀನ್‌ ಸ್ಥಾಪಿಸಿ: ಎಸ್‌ಎಫ್‌ಐ
Share this Article
  • FB
  • TW
  • Linkdin
  • Email

ಸಾರಾಂಶ

ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪುನೀತ್‌ ರಾಜ್‌ಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಬೇಕೆಂದು ಆಗ್ರಹಿಸಲಾಯಿತು.

ಹೊಸಪೇಟೆ: ನಗರದ ಸರ್ಕಾರಿ ಪ್ರಥಮದರ್ಜೆ ಪದವಿ ಕಾಲೇಜು ಮತ್ತು ವಿಜಯನಗರ ಕಾಲೇಜು, ಮುನ್ಸಿಪಲ್ ಪಿಯು ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪುನೀತ್‌ ರಾಜ್‌ಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರಿಗೆ ಎಸ್‌ಎಫ್‌ಐ ತಾಲೂಕು ಸಮಿತಿ ನೇತೃತ್ವದಲ್ಲಿ ಸೋಮವಾರ ಮನವಿ ಪತ್ರ ಸಲ್ಲಿಸಲಾಯಿತು.

ವಿಜಯನಗರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಂದನ ಶೇ. 85ರಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಜಿಲ್ಲಾ ಕೇಂದ್ರಕ್ಕೆ ಬರುತ್ತಿದ್ದಾರೆ. ಆದರೆ ಕಾಲೇಜು ಪ್ರಾರಂಭದ ಸಮಯ ಬೆಳಗ್ಗೆ 7 ಗಂಟೆಯಿಂದ ಆರಂಭವಾಗುವುದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಊಟ ಮಾಡದೆ ಉಪವಾಸ ಬರುತ್ತಿದ್ದಾರೆ. ಇದರಿಂದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟುಮಾಡುತ್ತದೆ.

ಗ್ಯಾಸ್ಟ್ರಿಕ್‌, ಡಿ- ಹೈಡ್ರೇಟ್, ವಿದ್ಯಾರ್ಥಿನಿಯರಿಗೆ ರಕ್ತಹೀನತೆ ಮತ್ತು ಅಪೌಷ್ಟಿಕತೆಯಿಂದ ತಲೆಚಕ್ರ ಬರುವುದು ಹೆಚ್ಚುತ್ತಿದೆ. ಈ ತರಹದ ಸಮಸ್ಯೆಗಳಿಂದ ಪಾಠ ಮತ್ತು ಇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗುವುದು ಕಷ್ಟವಾಗುತ್ತಿದೆ. ಇದರಿಂದ ಅನೇಕ ಬಾರಿ ತರಗತಿ ತಪ್ಪಿಸುತ್ತೇವೆ. ಅದಲ್ಲದೇ ಖಾಸಗಿ ಹೋಟೆಲ್‌ನಲ್ಲಿ ₹30ರಿಂದ ₹50 ಉಪಾಹಾರವಿದೆ. ಪ್ರತಿ ವಿದ್ಯಾರ್ಥಿಗಳಿಗೆ ಕೊಂಡು ತಿನ್ನಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಬಳಿ ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಎಸ್‌ಎಫ್‌ಐನ ರಾಜ್ಯ ಸಮಿತಿ ಸದಸ್ಯ ಶಿವರೆಡ್ಡಿ, ಜಿಲ್ಲಾ ಸಮಿತಿ ಸದ್ಯಸರಾದ ಲೋಕೇಶ್, ನಾರಾಯಣಮೂರ್ತಿ, ಸಿಂಹಾದ್ರಿ, ಕೌಶಿಕ್, ಶಿವುರಾಜಕುಮಾರ್, ಮುಖಂಡರಾದ ಪಲ್ಲವಿ, ರೂಪಾ, ಬಾಬು, ಸಂಜುನಾಯಕ್, ಸಿಂಹಾದ್ರಿ, ಲಕ್ಷ್ಮಿ, ಪೂಜಾ, ಮಣಿಕಂಠ, ಯಮನೂರು, ಮನೋಜ್, ಶ್ರೀನಿವಾಸ್, ಪೃಥ್ವಿ ಕುಮಾರ್, ಮಂಜು ಮತ್ತಿತರರಿದ್ದರು.

12ಎಚ್‌ಪಿಟಿ3

ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರಿಗೆ ಎಸ್‌ಎಫ್‌ಐ ತಾಲೂಕು ಸಮಿತಿ ನೇತೃತ್ವದಲ್ಲಿ ಸೋಮವಾರ ಮನವಿ ಪತ್ರ ಸಲ್ಲಿಸಲಾಯಿತು.