ಶ್ರೀದೇವಿ ಶಿಕ್ಷಣ ಸಂಸ್ಥೆಯಲ್ಲಿ 2 ದತ್ತಿ ಪ್ರಶಸ್ತಿ ಸ್ಥಾಪನೆ

| Published : Apr 30 2024, 02:11 AM IST

ಶ್ರೀದೇವಿ ಶಿಕ್ಷಣ ಸಂಸ್ಥೆಯಲ್ಲಿ 2 ದತ್ತಿ ಪ್ರಶಸ್ತಿ ಸ್ಥಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ದಿವಂಗತ ಕುಮಾರಿ ಸುಧಾರವರ ಹೆಸರಿನಲ್ಲಿ ‘ಕುಮಾರಿ ಸುಧಾ-ಜಯಮ್ಮ-ನಾರಾಯಣಪ್ಪ’ಪ್ರತಿಭಾ ಪುರಸ್ಕಾರವು ಮೊದಲ ಪ್ರಶಸ್ತಿ. ಈ ಪ್ರಶಸ್ತಿಯನ್ನು ಫಿಸಿಯೋಥೆರಪಿಯಾ ಅಧ್ಯಯನ ಮಾಡುವ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನೀಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ತುಮಕೂರು

ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಎರಡು ದಶಕಗಳ ಕಾಲ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡಿರುವ ಡಾ.ಎನ್. ನಾರಾಯಣಪ್ಪನವರು ಶ್ರೀದೇವಿ ಶಿಕ್ಷಣ ಸಂಸ್ಥೆಯಲ್ಲಿ ಎರಡು ದತ್ತಿಗಳನ್ನು ಸ್ಥಾಪಿಸಿದ್ದಾರೆ.

ನಗರದ ಶಿರಾ ರಸ್ತೆಯ ಶ್ರೀದೇವಿ ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಎರಡು ಪ್ರಶಸ್ತಿಗಳಿಗೆ ದತ್ತಿ ಸ್ಥಾಪಿಸಿರುವ ಡಾ.ಎನ್. ನಾರಾಯಣಪ್ಪ- ಜಯಮ್ಮ ಸಾಧನಾ ಪ್ರಶಸ್ತಿ ಸ್ಥಾಪನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ದಿವಂಗತ ಕುಮಾರಿ ಸುಧಾರವರ ಹೆಸರಿನಲ್ಲಿ ‘ಕುಮಾರಿ ಸುಧಾ-ಜಯಮ್ಮ-ನಾರಾಯಣಪ್ಪ’ಪ್ರತಿಭಾ ಪುರಸ್ಕಾರವು ಮೊದಲ ಪ್ರಶಸ್ತಿ. ಈ ಪ್ರಶಸ್ತಿಯನ್ನು ಫಿಸಿಯೋಥೆರಪಿಯಾ ಅಧ್ಯಯನ ಮಾಡುವ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನೀಡಲಾಗುತ್ತದೆ. ನಗದು ಬಹುಮಾನ ಪ್ರಮಾಣ ಪತ್ರ ಹಾಗೂ ಸನ್ಮಾನವನ್ನು ಈ ಪ್ರಶಸ್ತಿ ಒಳಗೊಂಡಿರುತ್ತದೆ. ಅದೇ ರೀತಿ ಫಿಸಿಯೋಥೆರಪಿಸ್ಟ್ ಡಾ.ಎನ್.ನಾರಾಯಣಪ್ಪ - ಜಯಮ್ಮ ಸಾಧನಾ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಪ್ರತಿ ವರ್ಷ ಫಿಸಿಯೋಥೆರಪಿಸ್ಟ್ ಸೇವೆಯಲ್ಲಿ ಕ್ಲಿನಿಕಲ್ ವಿಭಾಗ ಮತ್ತು ಬೋಧನಾ ವಿಭಾಗದಲ್ಲಿ ಆಸಾಧಾರಣ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿ ನಗದು ಬಹುಮಾನ ಹಾಗೂ ಸನ್ಮಾನ ಪತ್ರವನ್ನು ಒಳಗೊಂಡಿರುತ್ತದೆ. ಈ ಎರಡು ಕಾರ್ಯಕ್ರಮಗಳನ್ನು ಪ್ರತಿ ವರ್ಷ ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಮೂಲಕ ನಡೆಸಲಾಗುವುದು.

2024 ರ ಪ್ರಶಸ್ತಿ ಸಮಾರಂಭವು ಮೇ.13ರ ಸೋಮವಾರದಂದು ನಡೆಯುತ್ತದೆ. ಶ್ರೀದೇವಿ ಶಿಕ್ಷಣ ಸಂಸ್ಥೆಯಲ್ಲಿ ಎರಡು ಪ್ರಶಸ್ತಿಗಳಿಗೆ ದತ್ತಿ ಸ್ಥಾಪಿಸಿರುವ ಡಾ.ಎನ್.ನಾರಾಯಣಪ್ಪ ಹಾಗೂ ಜಯಮ್ಮನವರನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್‌ರವರು ಅಭಿನಂದಿಸಿದ್ದರು. ಡಾ.ಎನ್.ನಾರಾಯಣಪ್ಪನವರಿಗೆ ಈ ಸಮಾರಂಭಕ್ಕೆ ಸಂಬಂಧಪಟ್ಟ ಚೆಕ್‌ ಅನ್ನು ಹಸ್ತಾಂತರಿಸಲಾಯಿತು.

ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್, ಶ್ರೀದೇವಿ ವೈದ್ಯಕೀಯ ನಿರ್ದೇಶಕ ಡಾ.ರಮಣ್ ಎಂ. ಹುಲಿನಾಯ್ಕರ್, ಟ್ರಸ್ಟಿ ಅಂಬಿಕಾ ಹುಲಿನಾಯ್ಕರ್, ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು ಡಾ.ನರೇಂದ್ರ ವಿಶ್ವನಾಥ್, ಶ್ರೀದೇವಿ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರು ಡಾ.ಕೆ.ಎ.ಆನಂದಿ, ಶ್ರೀದೇವಿ ಸಂಸ್ಥೆಯ ವಿದ್ಯಾರ್ಥಿಗಳ ಪ್ರವೇಶ ವಿಭಾಗದ ಮುಖ್ಯಸ್ಥೆ ಶ್ರೀಮತಿ ರೂಪಾ ವರ್ಣೆಕರ್ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸಿದ್ದರು.