ಅಲ್ಪಸಂಖ್ಯಾತರು, ಹಿಂದುಳಿದ, ದಲಿತರ ಸಂಘಟಿಸಲು ಸಹಕಾರಿ ಬ್ಯಾಂಕ್ ಸ್ಥಾಪನೆ

| Published : Mar 19 2025, 12:32 AM IST

ಅಲ್ಪಸಂಖ್ಯಾತರು, ಹಿಂದುಳಿದ, ದಲಿತರ ಸಂಘಟಿಸಲು ಸಹಕಾರಿ ಬ್ಯಾಂಕ್ ಸ್ಥಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನದ ಅವಕಾಶ, ಆಶಯಗಳಡಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಗಳನ್ನು ಸಂಘಟಿಸುವ ಉದ್ದೇಶದಿಂದ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಅಹಿಂದ ಚಳವಳಿ ಸಂಘಟನೆಯಿಂದ ಸಹಕಾರಿ ಬ್ಯಾಂಕ್ ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ದೇವರಾಜ ಪ್ರಸಾದ್ ಹೇಳಿದ್ದಾರೆ.

- ರಾಜ್ಯವ್ಯಾಪಿ ಸ್ಥಾಪನೆಗೂ ಕ್ರಮ: ದೇವರಾಜ ಪ್ರಸಾದ್ ಹೇಳಿಕೆ - - - ದಾವಣಗೆರೆ: ಸಂವಿಧಾನದ ಅವಕಾಶ, ಆಶಯಗಳಡಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಗಳನ್ನು ಸಂಘಟಿಸುವ ಉದ್ದೇಶದಿಂದ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಅಹಿಂದ ಚಳವಳಿ ಸಂಘಟನೆಯಿಂದ ಸಹಕಾರಿ ಬ್ಯಾಂಕ್ ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ದೇವರಾಜ ಪ್ರಸಾದ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಹಿಂದ ಸಮುದಾಯಗಳ ಆರ್ಥಿಕ ಸಬಲೀಕರಣ, ಕುಂದುಕೊರತೆಗಳ ನಿವಾರಣೆ ಹಾಗೂ ಹಿತಾಸಕ್ತಿಗಾಗಿ ದುಡಿಯುವುದು ಸಂಘಟನೆ ಉದ್ದೇಶವಾಗಿದೆ. ಸರ್ಕಾರದ ಕಾರ್ಯಕ್ರಮ, ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವುದು, ಜಾಗೃತಿ ಮೂಡಿಸುವುದು ಹೀಗೆ ಹತ್ತುಹಲವು ಗುರಿ ಹಾಕಿಕೊಳ್ಳಲಾಗಿದೆ. ಅಹಿಂದ ಸಮುದಾಯಗಳಲ್ಲಿರುವ ಬಡವರಿಗೆ ಆರ್ಥಿಕ ಶಕ್ತಿ ತುಂಬುವ, ಸಹಾಯಹಸ್ತ ಚಾಚುವ ಸಲುವಾಗಿ ಸಹಕಾರ ಇಲಾಖೆ ಅನುಮತಿ ಪಡೆದು, ಸೌಹಾರ್ದ ಸಹಕಾರಿ ಸಂಘ ನಿಯಮಿತ ಸ್ಥಾಪಿಸಲಾಗಿದೆ ಎಂದರು.

ಸಹಕಾರ ಕಾಯ್ದೆ ಅವಕಾಶಗಳಡಿ ರಾಜ್ಯವ್ಯಾಪಿ ಸಹಕಾರಿ ಬ್ಯಾಂಕ್ ಸ್ಥಾಪಿಸಲು ಕ್ರಮ ವಹಿಸಲಾಗಿದೆ. ಮೊದಲ ಹಂತದಲ್ಲಿ ಷೇರುಧನ ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ. ದೇಶದ ಸಂಪತ್ತು, ಅಧಿಕಾರ ಸರ್ವರಿಗೂ ಸಮವಾಗಿ ಹಂಚಿಕೆ ಆಗಬೇಕೆಂಬ ಆಶಯದೊಂದಿಗೆ ನಿರಂತರ ಜಾಗೃತಿ ಮೂಡಿಸಲಾಗುವುದು. ನಮ್ಮದು ರಾಜಕೀಯೇತರ ಸ್ವಯಂಸೇವಾ ಸಂಘಟನೆಯಾಗಿದ್ದು, ಭಾರತ ಸಂವಿದಾನದ ಅವಕಾಶಗಳಡಿ ಕಾರ್ಯನಿರ್ವಹಿಸುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಹಾಲೇಶ ನಲ್ಕುದುರೆ, ಶಿವಾನಂದಪ್ಪ, ಎನ್.ಅಜ್ಜಪ್ಪ, ಸಿದ್ದನೂರು ಬಸವರಾಜ, ಬಾಬುರಾವ್ ಸುತ್ರಾವೆ ಇದ್ದರು.

- - - -17ಕೆಡಿವಿಜಿ48.ಜೆಪಿಜಿ:

ದಾವಣಗೆರೆಯಲ್ಲಿ ಅಹಿಂದ ಚಳವಳಿ ಸಂಘಟನೆಯಿಂದ ಸಹಕಾರಿ ಬ್ಯಾಂಕ್ ಸ್ಥಾಪಿಸಿರುವ ಕುರಿತು ದೇವರಾಜ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.