ಚಾಮರಾಜನಗರದಲ್ಲಿ ಅರುಂಧತಿ ಸೂಸೈಟಿ ಸ್ಥಾಪನೆ ಬದಲಾವಣೆಯ ಮುನ್ನುಡಿ: ಸುತ್ತೂರು ಶ್ರೀ

| Published : Sep 23 2024, 01:21 AM IST

ಚಾಮರಾಜನಗರದಲ್ಲಿ ಅರುಂಧತಿ ಸೂಸೈಟಿ ಸ್ಥಾಪನೆ ಬದಲಾವಣೆಯ ಮುನ್ನುಡಿ: ಸುತ್ತೂರು ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ಕಾಲದಲ್ಲಿ ಬ್ಯಾಂಕಿನೊಳಗೆ ಹೋಗಲು ಭಯಪಡುತಿದ್ದ ಸಮಾಜವೊಂದು ತನ್ನ ಬ್ಯಾಂಕ್ ಸ್ಥಾಪನೆ ಮಾಡಿರುವುದು ಒಂದು ಐತಿಹಾಸಿಕವಾಗಿದ್ದು, ಬದಲಾವಣೆಯ ಮುನ್ನುಡಿಯಾಗಿದೆ ಎಂದು ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಚಾಮರಾಜನಗರದಲ್ಲಿ ಅರುಂಧತಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಒಂದು ಕಾಲದಲ್ಲಿ ಬ್ಯಾಂಕಿನೊಳಗೆ ಹೋಗಲು ಭಯಪಡುತಿದ್ದ ಸಮಾಜವೊಂದು ತನ್ನ ಬ್ಯಾಂಕ್ ಸ್ಥಾಪನೆ ಮಾಡಿರುವುದು ಒಂದು ಐತಿಹಾಸಿಕವಾಗಿದ್ದು, ಬದಲಾವಣೆಯ ಮುನ್ನುಡಿಯಾಗಿದೆ ಎಂದು ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.ನಗರದ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ನಡೆದ ಅರುಂಧತಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಉದ್ಘಾಟನಾ ಸಮಾರಂಭ ಉದ್ಘಾಟಿಸಿ, ಸಂಘದ ಲೋಗೋ ಬಿಡುಗಡೆ ಮಾಡಿ ಮಾತನಾಡಿದರು. ಎಲ್ಲಿ ಜ್ಞಾನ ಇರುತ್ತದೋ ಅಲ್ಲಿ ಅಜ್ಞಾನ ಇರುತ್ತದೆ. ಎಲ್ಲಿ ಬೆಳಕು ಇರುತ್ತೋ ಅಲ್ಲಿ ಕತ್ತಲು ಇರುತ್ತದೆ, ಹಾಗಯೇ ಮನುಷ್ಯ ಜ್ಞಾನವನ್ನು ಸಂಪಾದನೆ ಮಾಡಿದರೆ, ಕತ್ತಲಿನಿಂದ ಬೆಳಕಿನಡೆಗೆ ಬರಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಸಮಾಜದಲ್ಲಿ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಬೇಕು. ಸರ್ಕಾರದಂದ ಎಲ್ಲ ರೀತಿಯ ಸೌಲಭ್ಯಗಳು ದೊರಕುತ್ತಿವೆ. ಸೌಲಭ್ಯಗಳ ಕೊರತೆ ಇಲ್ಲ ಅದನ್ನು ಉಪಯೋಗಿಸಿಕೊಳ್ಳಬೇಕಿದೆ. ಶಾಲೆಯಲ್ಲಿ ಕಲಿಯುವ ಶಿಕ್ಷಣ ದೊಡ್ಡದಲ್ಲ, ಸಮಾಜದಲ್ಲಿ ಕಲಿಯುವ ಶಿಕ್ಷಣ ಪ್ರಮುಖವಾದದ್ದು ಎಂದರು.ಅನೇಕ ಬ್ಯಾಂಕ್‌ಗಳು ಆಕರ್ಷಣೆ ಮಾಡಿ ಹೆಚ್ಚಿನ ಬಡ್ಡಿ ಕೊಡುವ ಆಸೆ ತೋರಿಸಿ ಠೇವಣಿ ಇಟ್ಟು ಬಡ್ಡಿ ಇರಲಿ ಅಸಲು ಇಲ್ಲದೆ ಅನೇಕರು ಮೋಸ ಹೋಗಿದ್ದಾರೆ. ಹಾಗಾಗಿ ಗ್ರಾಹಕರಲ್ಲಿ ನಂಬಿಕೆ ಉಳಿಸಿಕೊಳ್ಳುವ ರೀತಿಯಲ್ಲಿ ಬ್ಯಾಂಕ್ ನಡೆಸಬೇಕು. ಸುಮಾರು 900 ವರ್ಷಗಳ ಹಿಂದೆ ಸಾಮಾಜಿಕ ಸಮಾನತೆಗೆ ತಮ್ಮ ಬದುಕನ್ನೇ ಸಮರ್ಪಿಸಿಕೊಂಡವರು ಬಸವೇಶ್ವರರು. ಡಾ.ಅಂಬೇಡ್ಕರ್ ದೇಶಕ್ಕೆ ಕೊಟ್ಟಿರುವ ಸಂವಿಧಾನದಿಂದ ಜಗತ್ತಿನಲ್ಲೇ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿದೆ. ಡಾ.ಬಾಬೂಜೀ ಅವರು ಅನೇಕ ಸಂಸ್ಥೆಗಳ ಸೇವೆ ಮಾಡಿ ಪ್ರಧಾನಿಯಾಗುವ ಹಂತಕ್ಕೆ ಬೆಳೆದರು ಎಂದರು.ದಿವ್ಯ ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಅರುಂಧತಿ ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿ ಉತ್ತಮವಾಗಿ ಬೆಳೆದು ವಾರ್ಷಿಕೋತ್ಸವ, ದಶಮಾನೋತ್ಸವ ಮಾಡಬೇಕು. ಈ ಕಾರ್ಯಕ್ರಮಕ್ಕೆ ಸುತ್ತೂರು ಶ್ರೀಗಳನ್ನು ಆಹ್ವಾನಿಸಬೇಕು ಎಂದರು. ಹಿಂದಿನ ಕಾಲದಲ್ಲಿ ಪೊಲೀಸ್ ಠಾಣೆ ಎಂದರೆ ಹೇಗೆ ಭಯಪಡುತ್ತಿದ್ದರೊ ಹಾಗೆಯೇ ಬ್ಯಾಂಕ್ ಎಂದರೆ ನಮ್ಮ ಸಮುದಾಯ ಭಯಪಡುತಿತ್ತು. ಆರ್ಥಿಕವಾಗಿ ತೀರ ಹಿಂದುಳಿದ ಸಮುದಾಯಗಳ ಪೈಕಿಯಲ್ಲಿ ನಮ್ಮ ಸಮುದಾಯ ಕೂಡ ಇದ್ದು ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳ ನಂತರ ನಮ್ಮ ಸಮುದಾಯವನ್ನು ಇತರೆ ಸಮುದಾಯಗಳ ಜೊತೆ ಹೋಲಿಕೆ ಮಾಡಿದಾಗ ಒಂದು ಶತಮಾನಕ್ಕೂ ಹೆಚ್ಚು ಕಾಲ ಹಿಂದುಳಿದಿದ್ದೇವೆ. ಆದರೂ ಬೇರೆ ಸಮುದಾಯಗಳ ರೀತಿಯಲ್ಲಿ ನಾವು ಕೂಡ ಮುಖ್ಯವಾಹಿನಿ ಬರಬೇಕು ಎಂದರು.ಆರ್ಥಿಕ ಸ್ವಾವಲಂಬನೆ ಹಿಡಿದಿರುವ ಎಲ್ಲ ಸಮುದಾಯಗಳು ಸಾಮಾಜಿಕ ಮುಖ್ಯವಾಹಿನಿಯಲ್ಲಿ ಪ್ರಗತಿಯತ್ತ ಸಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಾವು ಸಮುದಾಯಗಳಂತೆ ಮುಖ್ಯವಾಹಿನಿಯಲ್ಲಿ ಸಾಗಬೇಕಾದರೆ ನಮ್ಮಲ್ಲಿರುವ ಅಜ್ಞಾನ, ಅಂಧಕಾರ, ಮೂಢನಂಬಿಕೆ ದೂರ ಮಾಡಿ ಸುಜ್ಞಾನ ಅಳವಡಿಸಿಕೊಂಡು ಜಾಗೃತ ಯೋಜನೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮುದಾಯ ಬದಲಾವಣೆ ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಸುತ್ತೂರು ಶ್ರೀಗಳು ಅರುಂಧತಿ ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿ ಉದ್ಘಾಟಿಸಿದ್ದಾರೆ. ಈ ಸಂಘ ಯಶ್ವಸಿಯತ್ತ ಸಾಗಲಿದೆ ಎಂದರು. ಸಹಕಾರ ಸಂಘ ಅತ್ಯಂತ ಮಹತ್ತರವಾದದ್ದು ಸಹಕಾರ ಸಂಘಗಳಲ್ಲಿ ಸಾಲ ಮಾಡಿದರೆ ಮನ್ನಾವಾಗುವ ಅವಕಾಶವಿದೆ. ಪದಾಧಿಕಾರಿಗಳು ಒಗ್ಗಟ್ಟಾಗಿದ್ದಾಗ ಮಾತ್ರ ಸಂಘ ಯಶಸ್ಸು ಕಾಣಲು ಸಾಧ್ಯ ಎಂದರು.

ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಮಾತನಾಡಿ, ಜಿಲ್ಲೆಯಲ್ಲಿ ಅರುಂಧತಿ ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿ ಸ್ಥಾಪನೆ ಮಾಡಿರುವುದು ತುಂಬಾ ಸಂತಸವಾಗಿದೆ. ಈ ಸಂಘವು ದೊಡ್ಡಮಟ್ಟದಲ್ಲಿ ಬೆಳೆಯಲಿ ಎಂದು ಶುಭ ಆಶಿಸಿದರು. ಸಂಘದ ಅಧ್ಯಕ್ಷ ಅರಕಲವಾಡಿ ಜವರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾತಂತ್ರ್ಯ ಪೂರ್ವ, ಸ್ವಾತಂತ್ರ್ಯ ನಂತರ ಒಂದು ಸಹಕಾರ ಸಂಘ ಇರಲಿಲ್ಲ. ಸಮುದಾಯದ ಆರ್ಥಿಕ ಸ್ವಾವಲಂಬಿಗಾಗಿ ಸ್ಥಾಪಿಸಲಾಗಿದ್ದು ಈ ಸಂಘವು, ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲಿದೆ. ಸಂಘದ ಸದಸ್ಯತ್ವ ಹೆಚ್ಚು ಮಾಡುವುದು, ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿಯಲ್ಲಿ ಸಂಘದ ಸದಸ್ಯರನ್ನು ನೋಂದಣಿ ಮಾಡಿ ಸದಸ್ಯರ ಆರೋಗ್ಯ ಹಿತರಕ್ಷಣೆ ಮಾಡುವುದು, ಕಿರು ಸಾಲ ಯೋಜನೆ ಅಳವಡಿಸಿಕೊಂಡು ಮಹಿಳಾ ಸಂಘಗಳಿಗೆ ಆರ್ಥಿಕ ಸಾಲಸೌಲಭ್ಯ ಒದಗಿಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಹಸಗೂಲಿ ಸಿದ್ದಯ್ಯ, ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜು, ಪ್ರಥಮ ದರ್ಜೆ ಗುತ್ತಿಗೆದಾರ ಎಂ.ಮಹದೇವಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಮಹದೇವಸ್ವಾಮಿ, ತಾಲೂಕು ಬಿಸಿಎಂ ಅಧಿಕಾರಿ ಲಿಂಗರಾಜು, ಸಂಘದ ನಿರ್ದೇಶಕರಾದ ಸಿ.ಮಹದೇವಯ್ಯ, ರೇವಣ್ಣ, ಹೆಚ್.ಹೆಚ್.ನಾಗರಾಜು, ಗುರುಲಿಂಗಯ್ಯ, ಕೆ.ಹನುಮಂತರಾಜು, ಪಿ.ಶಿವಮಲ್ಲು, ಎಂ.ಶಿವಕುಮಾರ್, ಸಿದ್ದಯ್ಯ,ಸಿದ್ದೇಶ್, ನಂಜಮ್ಮಣಿ ಎಸ್ ಲಿಂಗಣ್ಣ, ಶಾಂತರಾಜು ದೇವರಾಜು, ಮುಖ್ಯ ಕಾರ್ಯನಿರ್ವಾಹಕ ಶಿವಕುಮಾರ್, ವಕೀಲರಾದ ಬೂದಿತಿಟ್ಟು ರಾಜೇಂದ್ರ ಹಾಜರಿದ್ದರು.