ಸಾರಾಂಶ
ಶಾಸಕ ಗಣೇಶ್ ಪ್ರಸಾದ್ ಭರವಸೆ । ಕೃಷಿಕ ಸಮಾಜ, ಕೃಷಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ರೈತ ದಿನಾಚರಣೆ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಸಾವಯವ ಸಿರಿಧಾನ್ಯಗಳಿಗೆ ಗುಂಡ್ಲುಪೇಟೆಯಲ್ಲಿ ಪ್ರೊಸೆಸಿಂಗ್ ಯುನಿಟ್ ಸ್ಥಾಪನೆಗೆ ಮುಂದಾಗುತ್ತೇನೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ರೈತ ದಿನಾಚರಣೆಯಲ್ಲಿ ಭರವಸೆ ನೀಡಿದರು.
ಪಟ್ಟಣದ ಕೃಷಿ ಕಚೇರಿ ಆವರಣದಲ್ಲಿ ಕೃಷಿಕ ಸಮಾಜ, ತಾಲೂಕು ರೈತ ಸಂಘಟನೆಗಳು, ಕೃಷಿ ಮತ್ತು ಕೃಷಿ ಪೂರಕ ಇಲಾಖೆ ಆಶ್ರಯದಲ್ಲಿ ನಡೆದ ರೈತ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಸಾವಯವ ಸಿರಿಧಾನ್ಯಗಳ ಪ್ರೋತ್ಸಾಹಿಸಲು ನಾನು ಅಗತ್ಯಬಿದ್ದರೆ ಶಾಸಕರ ಅನುದಾನ ನೀಡುವೆ. ಇನ್ನಾರು ತಿಂಗಳಲ್ಲಿ ಪ್ರೊಸೆಸಿಂಗ್ ಯುನಿಟ್ ಪಟ್ಟಣದ ಎಪಿಎಂಸಿಯಲ್ಲಿ ಆರಂಭಿಸಲು ರೈತರು ಸಹಕಾರ ನೀಡಿ ಎಂದು ಮನವಿ ಮಾಡಿದರು.
ನಮ್ಮದು ಕೃಷಿ ಕುಟುಂಬವೇ:ಗುಂಡ್ಲುಪೇಟೆ: ನಾನು ಶಾಸಕನಾಗುವುದಕ್ಕೆ ಮುಂಚೆ ಬಿಸಿನೆಸ್ ಮಾಡ್ಕೊಂಡು ಇದ್ದೇ ಆದರೆ ನನ್ನ ತಾತ ಎಚ್.ಎನ್.ಶ್ರೀಕಂಠಶೆಟ್ಟಿ,ನನ್ನ ತಂದೆ ಎಚ್.ಎಸ್.ಮಹದೇವಪ್ರಸಾದ್ ಕೃಷಿಕರೇ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು. ರೈತ ದಿನಾಚರಣೆಯಲ್ಲಿ ಮಾತನಾಡಿ ನಾನು ಬಿಸಿನೆಸ್ ಮಾಡಿಕೊಂಡು ಇರುವಾಗ ನನ್ನ ತಂದೆ ಎಚ್.ಎಸ್.ಮಹದೇವಪ್ರಸಾದ್ ಬಿಸಿನೆಸ್ ಜೊತೆಗೆ ಕೃಷಿನೂ ಮಾಡು ಎಂದು ಗದ್ದಿಗೆ ರಸ್ತೆಯಲ್ಲಿ ಜಮೀನು ಕೊಡಿಸಿದ್ದರು ನಾನು ಕೆಲ ವರ್ಷಗಳ ಕಾಲ ಕೃಷಿ ತೊಡಗಿದ್ದೆ ಎಂದರು. ಮಹದೇವಪ್ರಸಾದ್ ನಿಧನದ ಬಳಿಕ ನಾನು ಅನಿವಾರ್ಯವಾಗಿ ರಾಜಕಾರಣಕ್ಕೆ ಬಂದ ಬಳಿಕ ಕೃಷಿಯ ಆಸಕ್ತಿ ಹೋಯಿತು.ಆದರೆ ನನ್ನ ತಾಯಿ ಗೀತಾ ಮಹದೇವಪ್ರಸಾದ್ ನನ್ನ ತೋಟದಲ್ಲಿ ಕೃಷಿಗೆ ಆಸಕ್ತಿ ವಹಿಸಿದ್ದಾರೆ ಕೃಷಿಕರ ಕಷ್ಟ ನನಗೂ ಗೊತ್ತು ಎಂದರು.
ಒಗ್ಗಟ್ಟಾಗಿ ಹೋರಾಡಿ:ರೈತಸಂಘಟನೆಗಳು ಒಗ್ಗಟ್ಟಾಗಿ ನೈಜ ಸಮಸ್ಯೆಗಳಿಗೆ ಹೋರಾಟ ನಡೆಸಿದರೆ ನನ್ನ ಬೆಂಬಲ, ಸಹಕಾರವಿದೆ ಎಂದರು.
ರೈತರು ಸಹ ಸಾವಯವ ಸಿರಿಧಾನ್ಯ ಬೆಳೆಯಲು ಮುಂದಾಗಬೇಕು. ರಸಗೊಬ್ಬರ, ಔಷಧ ಬಳಕೆ ಬದಲು ಸಾವಯವ ಕೃಷಿಗೆ ಮಾನ್ಯತೆ ಕೊಟ್ಟರೆ ಸಿರಿಧಾನ್ಯಗಳ ಆಹಾರ ಸೇವೆ ಕೂಡ ಆರೋಗ್ಯ ಕಾಪಾಡಲಿದೆ ಎಂದರು.ರೈತಸಂಘದ ಹಿರಿಯ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ಸಿರಿಧಾನ್ಯಗಳಿಗೆ ಪ್ರೊಸೆಸಿಂಗ್ ಯುನಿಟ್ ಸ್ಥಾಪನೆಗೆ ಶಾಸಕರು ಮುಂದಾಗಬೇಕು.ಜೊತೆಗೆ ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹ ಧನಕ್ಕೆ ಸರ್ಕಾರದ ಮೇಲೆ ಒತ್ತಡ ತರಬೇಕು. ಹಾಗೂ ಗುಂಡ್ಲುಪೇಟೆ,ಬಂಡೀಪುರದಲ್ಲಿ ಸಿರಿಧಾನ್ಯ ಮಾರಾಟ ಕೇಂದ್ರ ಸ್ಥಾಪನೆಗೆ ಮಳಿಗೆ ಕೊಡಿಸಿಕೊಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ತಹಸೀಲ್ದಾರ್ ಟಿ.ರಮೇಶ್ ಬಾಬು, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಕೃಷಿಕ ಸಮಾಜದ ಉಪಾಧ್ಯಕ್ಷ ಭೀಕ್ಷೇಸ್ ಪ್ರಸಾದ್, ಕುಂದಕೆರೆ ನಾಗಮಲ್ಲಪ್ಪ, ರೈತಸಂಘದ ಮುಖಂಡರಾದ ಶಿವಪುರ ಮಹದೇವಪ್ಪ, ಮಾಡ್ರಹಳ್ಳಿ ಮಹದೇವಪ್ಪ, ಟಿ.ಎಸ್.ಶಾಂತಮಲ್ಲಪ್ಪ, ಕುಂದಕೆರೆ ಸಂಪತ್ತು, ಹಾಲಹಳ್ಳಿ ಮಹೇಶ್, ವೀರನಪುರ ನಾಗಪ್ಪ, ಜಯಂತಿ, ಬಂಡೀಪುರ ಸಿಎಫ್ ಡಾ.ರಮೇಶ್ ಕುಮಾರ್, ಕೃಷಿ ಸಹಾಯಕ ನಿರ್ದೇಶಕ ಶಶಿಧರ್ ಸೇರಿದಂತೆ ನೂರಾರು ರೈತರು ಇದ್ದರು.--------------
ಬಾಕ್ಸ್....ಕೆರೆಗಳಿಗೆ ನೀರು ತುಂಬಿಸುವಲ್ಲಿ ಶ್ರಮವಹಿಸುವೆ
ಗುಂಡ್ಲುಪೇಟೆ110 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಂಬಂಧ ಸಿಎಂ ಸಿದ್ದರಾಮಯ್ಯ ಗಮನಕ್ಕೆ ತಂದು ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ರೈತ ದಿನಾಚರಣೆಯಲ್ಲಿ ರೈತರ ಮನವಿಗೆ ಸ್ಪಂದಿಸಿ ಮಾತನಾಡಿದ ಅವರು, ಹಿಂದಿನ ಶಾಸಕರು 110 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಪ್ರಸ್ತಾವನೆ ಜೊತೆಗೆ ಅನುಮೋದನೆ ಆಗಿತ್ತು.ಆದರೆ, ಆರ್ಥಿಕ ಇಲಾಖೆಯು ಅನುಮೋದನೆ ನೀಡಿರಲಿಲ್ಲ ಎಂದರು.ಮುಂದಿನ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯನವರ ಗಮನಕ್ಕೆ ತಂದು ಆರ್ಥಿಕ ಇಲಾಖೆಯ ಅನುಮೋದನೆ ಕೊಡಿಸಬೇಕು ಎಂದು ನಾನು ಮನವಿ ಮಾಡುತ್ತೇನೆ. 2013 ರಲ್ಲಿ ಸಿದ್ದರಾಮಯ್ಯ ಸಿಎಂ ಆದಾಗ ಕೆರೆ ನೀರು ತುಂಬಿಸುವ ಯೋಜನೆಗೆ ಮಹದೇವ ಪ್ರಸಾದ್ ನೇತೃತ್ವದಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದರು. ಗೀತಾ ಮಹದೇವಪ್ರಸಾದ್ ಕಾಲದಲ್ಲಿಯೂ ನೀರು ತುಂಬಿಸಲಾಗಿತ್ತು.ಕಳೆದ ಅವಧಿಯಲ್ಲಿ ಶಾಸಕರು ಕೆಲ ಕೆರೆಗಳಿಗೆ ನೀರು ತುಂಬಿಸಿದ್ದರು. ನಾನು ಇನ್ನೂಳಿದ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.
--------------ಬಾಕ್ಸ್....
ಕನ್ನಡಪ್ರಭ ವರದಿಗೆ ಶಾಸಕರ ಸ್ಪಂದನೆಕನ್ನಡಪ್ರಭ ಪತ್ರಿಕೆಯಲ್ಲಿ ಗುಂಡ್ಲುಪೇಟೆ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯ ವರದಿ ಬಂದಿದೆ, ನಾನು ಇಬ್ಬರು ದಂತ ವೈದ್ಯರಿಗೆ ಶಿಪಾರಸ್ಸು ಪತ್ರ ಕೊಟ್ಟಿದ್ದೇನೆ. ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು. ರೈತ ದಿನಾಚರಣೆ ಸಭೆಯಲ್ಲಿ ಕನ್ನಡಪ್ರಭ ಪತ್ರಿಕೆಯ ಹೆಸರು ಪ್ರಸ್ತಾಪಿಸಿ ಮಾತನಾಡಿ, ವೈದ್ಯರ ಕೊರತೆ ನೀಗಿಸಬೇಕು ಎಂದು ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಫಿಜಿಷಿಯನ್ ಸೇರಿದಂತೆ ಇತರೆ ವೈದ್ಯರ ಭರ್ತಿ ಮಾಡಲು ಕ್ರಮ ವಹಿಸಿದ್ದೇನೆ ಎಂದರು.
-----------------31ಜಿಪಿಟಿ3
ಗುಂಡ್ಲುಪೇಟೆಯಲ್ಲಿ ರೈತ ದಿನಾಚರಣೆ ಸಮಾರಂಭವನ್ನು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಉದ್ಘಾಟಿಸಿದರು.---------------
31ಜಿಪಿಟಿ4ರೈತ ದಿನಾಚರಣೆಯಲ್ಲಿ ಮಾಜಿ ಪ್ರಧಾನಿ ಚರಣ್ ಸಿಂಗ್,ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಭಾವಚಿತ್ರಕ್ಕೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಪುಷ್ಪಾರ್ಚನೆ ಸಲ್ಲಿಸಿದರು.
-------------------31ಜಿಪಿಟಿ5
ಡಿ.30 ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ಗುಂಡ್ಲುಪೇಟೆ ದೊಡ್ಡಾಸ್ಪತ್ರೇಲಿ ಅಗತ್ಯ ಸೇವಾ ವೈದ್ಯರಿಲ್ಲ ಎಂದು ವರದಿ ಪ್ರಕಟಿಸಿತ್ತು.--------------