ಮತ ಓಲೈಕೆಗೆ ಜನಾಂಗೀ ಘರ್ಷಣೆ ಒಳ್ಳೆಯದಲ್ಲ

| Published : Sep 17 2024, 12:50 AM IST

ಸಾರಾಂಶ

ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಪೂರೈಸುವ ಎತ್ತಿನಹೊಳೆ ಯೋಜನೆ ಇನ್ನೊಂದು ವರ್ಷದಲ್ಲಿ ಶೇ.೧೦೦ರಷ್ಟು ಪೂರ್ಣಗೊಳ್ಳಲಿದೆ. ಎರಡೂ ಜಿಲ್ಲೆಗಳಿಗೆ ಪೈಪುಗಳ ಮೂಲಕ ನೀರು ಪೂರೈಕೆ ಮಾಡಿ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಲಾಗುವುದು.

ಕನ್ನಡಪ್ರಭ ವಾರ್ತೆ ಕೋಲಾರ ರಾಜಕೀಯ ಸ್ವಾರ್ಥಕ್ಕಾಗಿ ಅಥವಾ ಮತಗಳ ಓಲೈಕೆಗಾಗಿ ಜನಾಂಗೀಯಗಳ ಘರ್ಷಣೆಗಳನ್ನು ನಡೆಸುವುದು ಒಳ್ಳೆಯ ಬೆಳವಣಿಗೆಯಲ್ಲ ಎಂಬುವುದನ್ನು ವಿಪಕ್ಷಗಳ ಕೆಲವು ನಾಯಕರು ಅರಿತುಕೊಳ್ಳಬೇಕು ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು.

ನಗರದ ಅಂಜುಮಾನ್ ಸಮಿತಿಯ ಅಧ್ಯಕ್ಷ ಜಮೀರ್ ಅಹ್ಮದ್ ಸ್ವಗೃಹದಲ್ಲಿ ಸುದ್ಧಿಗಾರರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರದಲ್ಲಿ ಹಬ್ಬಗಳ ಆಚರಣೆಗೆ ವೇಳೆ ವಿವಿಧೆಡೆ ಗಲಭೆ, ಘರ್ಷಣೆಗಳು ನಡೆಯುತ್ತಿದೆ ಏಕೆ ಎಂಬ ಪ್ರಶ್ನೆಗೆ ಸಚಿವರು ಉತ್ತರಿಸಿದರು.

‘ಎತ್ತಿನಹೊಳೆ’ ವರ್ಷದಲ್ಲಿ ಪೂರ್ಣ

ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಪೂರೈಸುವ ಎತ್ತಿನಹೊಳೆ ಯೋಜನೆ ಇನ್ನೊಂದು ವರ್ಷದಲ್ಲಿ ಶೇ.೧೦೦ರಷ್ಟು ಪೂರ್ಣಗೊಳ್ಳಲಿದೆ. ಎರಡೂ ಜಿಲ್ಲೆಗಳಿಗೆ ಪೈಪುಗಳ ಮೂಲಕ ನೀರು ಪೂರೈಕೆ ಮಾಡಿ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಲಾಗುವುದು. ಈ ಯೋಜನೆಯ ಪ್ರಕಾರ ೭ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಹಾಸನದಿಂದ ರಾಜ್ಯದ ಗಡಿಯ ಭಾಗ ನಂಗಲಿಯವರೆಗೆ ಕುಡಿಯುವ ನೀರಿನ ಪೂರೈಕೆಗೆ ೧೬ ಟಿ.ಎಂ.ಸಿ ನೀರು ಸಾಕಾಗುತ್ತದೆ, ಉಳಿದ ೮ ಟಿ.ಎಂ.ಸಿ ನೀರನ್ನು ೭ ಜಿಲ್ಲೆಯ ಕೆರೆಗಳಿಗೆ ಸಮಾಂತರವಾಗಿ ಹರಿಸಲಾಗುವುದು ಎಂದರು.

ಅಕ್ರಮ ಸಂಪರ್ಕ ಪಡೆದರೆ ಕ್ರಮ

೨೭-೨೮ ಟಿ.ಎಂ.ಸಿ ನೀರು ಲಭ್ಯವಾಗಬಹುದೆಂಬ ನಿರೀಕ್ಷೆ ಇತ್ತು, ಆದರೆ ೨೪ ಟಿ.ಎಂ.ಸಿ ನೀರು ಲಭ್ಯವಾಗುವುದು ಖಚಿತವಾಗಿದೆ, ಕೊರಟೆಗೆರೆಯಿಂದ ೨೩೦ ಕಿ.ಮೀ ಪೈಪುಗಳ ಮೂಲಕ ನೀರು ಹರಿಸಲಾಗುವುದು. ಮಧ್ಯದಲ್ಲಿ ಅಕ್ರಮವಾಗಿ ನೀರಿನ ಸಂರ್ಪಕ ಪಡೆಯುವವರ ವಿರುದ್ದ ಕಾನೂನು ಕ್ರಮವನ್ನು ಜರುಗಿಸಲಾಗಿಸುವುದು ಎಂದು ಎಚ್ಚರಿಸಿದರು.5 ವರ್ಷ ಸಿದ್ದರಾಮಯ್ಯನವರೇ ಸಿಎಂ

ರಾಜ್ಯದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯರನ್ನು ಬದಲಾವಣೆ ಮಾಡುತ್ತಾರೆಂಬುವುದು ವಿಪಕ್ಷಗಳ ಗಾಳಿಯ ಸುದ್ದಿಯಾಗಿದೆ. ಮುಖ್ಯ ಮಂತ್ರಿ ಸೀಟ್ ಖಾಲಿ ಇಲ್ಲ ೫ ವರ್ಷಗಳ ಕಾಲ ಸಿದ್ದರಾಮಯ್ಯನವರೇ ಆಡಳಿತ ಮುಂದುವರೆಸಲು ಹೈಕಮಾಂಡ್ ಸಹ ಸೂಚನೆ ನೀಡಿದೆ, ನ್ಯಾಯಾಲಯದಲ್ಲಿ ಸಿದ್ದರಾಮಯ್ಯರ ಮೇಲಿನ ಆರೋಪಗಳು ವಿಚಾರಣೆ ಹಂತದಲ್ಲಿದ್ದು ಅದರಿಂದ ಸಿದ್ದರಾಮಯ್ಯರ ಸಿಎಂ ಸ್ಥಾನಕ್ಕೆ ಯಾವುದೇ ಸಮಸ್ಯೆ ಇಲ್ಲ, ಸಿದ್ದರಾಮಯ್ಯರ ಪರವಾಗಿಯೇ ತೀರ್ಪುಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸಿಎಂ ಆಗುವ ಅರ್ಹತೆ ಇದೆ

ದಲಿತ ಮುಖ್ಯ ಮಂತ್ರಿ ಆಗಬೇಕೆಂಬುವುದು ಹಿಂದಿನಿಂದ ಆ ಬಗ್ಗೆ ಪ್ರಸ್ತಾವನೆ ಇದೆ ನಿಜ, ದಲಿತ ಸಮುದಾಯದಲ್ಲೂ ಮುಖ್ಯ ಮಂತ್ರಿ ಸ್ಥಾನಕ್ಕೆ ಅರ್ಹರಾಗಿರುವವರು ಹಲವಾರು ಅನುಭವಿ ನಾಯಕರು ಇರುತ್ತಾರೆ. ಅದರಲ್ಲಿ ನಾನು ಸಹ ಓರ್ವ ಎಂದ ಅವರು ಸದ್ಯಕ್ಷೆ ಮುಖ್ಯ ಮಂತ್ರಿಗಳ ಬದಲಾವಣೆಯ ಪ್ರಶ್ನೆ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ ಎಂದರು. ಮಾಜಿ ಸಚಿವ ಮುನಿರತ್ನ ಬಂಧನ ಬಗ್ಗೆ ವಿಚಾರಣೆ ಹಂತದಲ್ಲಿದೆ, ಒಂದು ವೇಳೆ ಅವರು ಸಮುದಾಯವನ್ನು ನಿಂದಿಸಿ ಮಾತನಾಡಿದ್ದರೆ ಅದು ತಪ್ಪಾಗಲಿದೆ, ಪತ್ರಿಯೊಂದು ಸಮುದಾಯವನ್ನೂ ಗೌರವಿಸಬೇಕು, ಸಂವಿಧಾನ ಬದ್ಧವಾಗಿ ಎಲ್ಲಾ ಸಮುದಾಯಗಳಿಗೊ ಸಮಾನತೆಯ ಆಧ್ಯತೆ ನೀಡಿ ಗೌರವಿಸಬೇಕಾಗಿರುವುದು ಪ್ರಜಾತಂತ್ರ ವ್ಯವಸ್ಥೆಯಾಗಿದೆ ಎಂದು ಹೇಳಿದರು.

ಹಾಲಿನ ದರ ಏರಿಕೆ ಸಾಧ್ಯತೆ

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕ್‌ಗೆ ಸಂಬಂಧಿಸಿದ ಆಡಳಿತ ಮಂಡಳಿಗೆ ಚುನಾವಣೆಗಳನ್ನು ನಡೆಸಲು ಕೆಲವೊಂದು ತಾಂತ್ರಿಕ ಸಮಸ್ಯೆ ಇದೆ ಅದನ್ನು ಶೀಘ್ರದಲ್ಲೆ ಬಗೆಹರಿಸಿ ಚುನಾವಣೆ ನಡೆಸಲಾಗುವುದು. ಹಾಲಿನ ಮಾರಾಟ ಧರ ಹೆಚ್ಚಳ ಕುರಿತು ಮುಖ್ಯ ಮಂತ್ರಿಗಳು ಹಾಲಿನ ಸಂಸ್ಥೆಯೊಂದಿಗೆ ಮತ್ತು ಅಧಿಕಾರಿಗಳ ವರ್ಗದವರೊಂದಿಗೆ ಮಾತುಕತೆ ನಡೆಸಿದ್ದಾರೆ. ರೈತರ ಹೈನುಗಾರಿಕೆಯು ಇಂದು ದುಬಾರಿಯಾಗಿದೆ ಹಾಗಾಗಿ ಖರ್ಚು ವೆಚ್ಚಗಳು ಹೆಚ್ಚಾಗಿರುವುದರಿಂದ ಅವರಿಗೆ ಸಮರ್ಪಕವಾದ ದರ ನೀಡಲು ಹಾಲಿನ ಮಾರಾಟ ದರ ಏರಿಕೆ ಮಾಡುವ ಸಾಧ್ಯತೆ ಇದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಅಂಜುಮಾನ್ ಇಸ್ಲಾಂಮೀಯ ಸಮಿತಿ ಅಧ್ಯಕ್ಷ ಜಮೀರ್ ಅಹ್ಮದ್, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಪ್ರಸಾದ್ ಬಾಬು. ಉದಯಶಂಕರ್,ಮಾಲೂರು ಮಧುಸೂದನ್, ಎಸ್.ಸಿ.ಘಟಕದ ಅಧ್ಯಕ್ಷ ಜಯದೇವ್, ಮುಖಂಡರಾದ ಮುಸ್ತಾಫಾ ಸಾಬ್, ಎಲ್.ಖಲೀಲ್ ಅಹ್ಮದ್, ಅಸ್ಲಾಂ ಪಾಷ, ಬಾಬಾಜಾನ್ ಇದ್ದರು.