ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ ವಡಗಾವಿಯ ಆನಂದನಗರ, ಅನಗೋಳ, ಭಾಗ್ಯನಗರ, ಆದರ್ಶನ ನಗರದ ಸಮೃದ್ಧಿ ಕಾಲೋನಿ ಮತ್ತಿತರ ಪ್ರದೇಶಗಳ ನಾಲಾಗಳ ಮೇಲೆ ಅಕ್ರಮವಾಗಿ ನಿರ್ಮಿಸಲಾಗಿದ್ದ ಶೆಡ್‌ಗಳನ್ನು ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು. ಪಾಲಿಕೆ ಕ್ರಮಕ್ಕೆ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ವಡಗಾವಿಯ ಆನಂದನಗರ, ಅನಗೋಳ, ಭಾಗ್ಯನಗರ, ಆದರ್ಶನ ನಗರದ ಸಮೃದ್ಧಿ ಕಾಲೋನಿ ಮತ್ತಿತರ ಪ್ರದೇಶಗಳ ನಾಲಾಗಳ ಮೇಲೆ ಅಕ್ರಮವಾಗಿ ನಿರ್ಮಿಸಲಾಗಿದ್ದ ಶೆಡ್‌ಗಳನ್ನು ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು. ಪಾಲಿಕೆ ಕ್ರಮಕ್ಕೆ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಮನೆಗಳನ್ನು ತೆರವುಗೊಳಿಸಿದ್ದರಿಂದ ಮನೆ ಕಳೆದುಕೊಂಡ ನಿವಾಸಿಗಳು ಬಿಕ್ಕಿ ಬಿಕ್ಕಿ ಅತ್ತರು. ಕಳೆದ 40 ವರ್ಷಗಳಿಂದ ನಾವು ಇಲ್ಲಿ ಶೆಡ್‌ಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತ ಬಂದಿದ್ದೇವೆ. ಆದರೆ, ಪಾಲಿಕೆ ಅಧಿಕಾರಿಗಳು ಏಕಾಏಕಿಯಾಗಿ ನಮ್ಮ ಮನೆಗಳನ್ನು ತೆರವುಗೊಳಿಸಿದ್ದಾರೆ. ಇದರಿಂದಾಗಿ ನಾವು ಬೀದಿಗೆ ಬಂದಿದ್ದೇವೆ. ನಮಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ನೊಂದ ನಿವಾಸಿಗಳು ಆಗ್ರಹಿಸಿದರು.ಮಳೆ ಬರುತ್ತಿದ್ದು, ಹೀಗೆ ಏಕಾಏಕಿಯಾಗಿ ಬಂದು ನಮ್ಮ ಮನೆಗಳನ್ನು ತೆರವುಗೊಳಿಸಿದರೇ ನಾವು ಎಲ್ಲಿ ಹೋಗಬೇಕು ಎಂದು ಪ್ರಶ್ನಿಸಿದರು.
ನಾಲಾಗಳ ಮೇಲಿನ ಜಾಗೆಯನ್ನು ಅತಿಕ್ರಮಣಮಾಡಿಕೊಂಡು ತಗಡಿನ ಶೆಡ್‌ಗಳನ್ನು ನಿರ್ಮಿಸಿ, ಅಲ್ಲಿಯೇ ವಾಸವಾಗುತ್ತ ಬಂದಿದ್ದಾರೆ. ಪಾಲಿಕೆ ಅಧಿಕಾರಿ ಲಕ್ಷ್ಮೀ ನಿಪ್ಪಾಣಿಕರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಜೆಸಿಬಿ ಯಂತ್ರದ ಮೂಲಕ ಸ್ಥಳಕ್ಕೆ ಭೇಟಿ ನೀಡಿ, ಪೊಲೀಸರ ಬಿಗಿ ಭದ್ರತೆ ನಡುವೆ ಅಕ್ರಮ ಮನೆಗಳ ತೆರವು ಕಾರ್ಯಾಚರಣೆ ಕೈಗೊಂಡರು.