ಫುಟ್‌ಪಾತ್ ಆಕ್ರಮಿಸಿದ್ದ ಅಂಗಡಿಗಳ ತೆರವು

| Published : Oct 05 2024, 01:37 AM IST

ಫುಟ್‌ಪಾತ್ ಆಕ್ರಮಿಸಿದ್ದ ಅಂಗಡಿಗಳ ತೆರವು
Share this Article
  • FB
  • TW
  • Linkdin
  • Email

ಸಾರಾಂಶ

ತೆರವುಗೊಳಿಸುವ ಕಾರ್ಯದಲ್ಲಿ ಯಾವುದೇ ರಾಜೀ ಇಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಸತ್ಯನಾರಯಣ್ ಸ್ಪಷ್ಟಪಡಿಸಿದ್ದಾರೆ. ಕೆಲ ಅಂಗಡಿಗಳಲ್ಲಿ ಸಾಕಷ್ಟು ವಸ್ತುಗಳು ಇದ್ದು ಅವುಗಳನ್ನು ಖಾಲಿ ಮಾಡಿಕೊಂಡು ಅವರೇ ಜಾಗ ತೆರವು ಮಾಡಲು ನಾಲ್ಕು ದಿನಗಳ ಕಾಲವಕಾಶ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರ

ಪಟ್ಟಣದಲ್ಲಿ ಇಂದು ಪುರಸಭೆ ಸಿಬ್ಬಂದಿ ಬೆಳ್ಳಂಬೆಳಗ್ಗೆ ಫುಟ್​ಪಾತ್​ ಅಂಗಡಿಗಳ ತೆರವು ಕಾರ್ಯಾಚರಣೆ‌ ನಡೆಸಿತು. ಫುಟ್ ಪಾತ್ ಆಕ್ರಮಿಸಿಕೊಂಡು ರಸ್ತೆ ಬದಿಯಲ್ಲಿ ಇಟ್ಟಿದ್ದ ಅಂಗಡಿಗಳು ಹಾಗು ಹೋಟೆಲ್ ಗಳನ್ನು ಶುಕ್ರವಾರ ಪುರಸಭೆ ವತಿಯಿಂದ ತೆರವುಗೊಳಿಸಲಾಯಿತು.ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪುರಸಭೆ ಸಿಬ್ಬಂದಿಯಿಂದ ರಸ್ತೆ ಬದಿಯಲ್ಲಿ ಬಾಲಕರ ಕಾಲೇಜು ವರಿಗೂ ಇದ್ದ ಅಂಗಡಿಗಳನ್ನ ತೆರವುಗೊಳಿಸಿತು. ಪಟ್ಟಣದ ಮುಖ್ಯ ರಸ್ತೆಯಾದ ಎಂ ಜಿ ರಸ್ತೆಯಲ್ಲಿ ಬಾಲಕಿಯರ ಕಾಲೇಜು ಆವರಣಕ್ಕೆ ಹೊಂದಿಕೊಂಡು ಸಾಗುವ ಚರಂಡಿ ಹಾಗು ಫುಟ್ ಪಾತ್ ಮೇಲೆ ಯಾವುದೇ ಅನುಮತಿ ಪಡೆಯದೇ ದೊಡ್ಡ ಗಾತ್ರದ ತಗಡಿನ ಅಂಗಡಿಗಳನ್ನು ಇಟ್ಟುಕೊಂಡು ಬೀದಿ ಬದಿ ವ್ಯಾಪಾರಸ್ಥರ ಹೆಸರಿನಲ್ಲಿ ದೊಡ್ಡ ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದರು.ರಸ್ತೆ ತಡೆ ನಡೆಸಿ ಪ್ರತಿಭಟನೆ

ತೆರವು ಕಾರ್ಯಚರಣೆ ಸಂದರ್ಭದಲ್ಲಿ ಅಂಗಡಿ ಮಾಲೀಕರು ಮತ್ತು ‌ಪುರಸಭೆ ಸಿಬ್ಬಂದಿ ನಡುವೆ ಮಾತಿನ‌ ಚಕಮಕಿ ನಡೆದು ಅಂಗಡಿ ಮಾಲಿಕರು ಬೆಸ್ಕಾಂ ಕಚೇರಿ ಮುಂಬಾಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಇದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು. ನಂತರ ಪೊಲೀಸರು ಆಗಮಿಸಿ ಪ್ರತಿಭಟನಾಕಾರರನ್ನು ಚದುರಿಸಿ ವಾಹನ ಒಡಾಟಕ್ಕೆ ಅನುವು ಮಾಡಿಕೊಟ್ಟರು.ನಾಲ್ಕು ದಿನದಲ್ಲಿ ಕಾಲಿ ಮಾಡಿ

ತೆರವುಗೊಳಿಸುವ ಕಾರ್ಯದಲ್ಲಿ ಯಾವುದೇ ರಾಜೀ ಇಲ್ಲ ಎಂದು ಸ್ಪಷ್ಟಪಡಿಸಿದ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಯಣ್, ಕೆಲ ಅಂಗಡಿಗಳಲ್ಲಿ ಸಾಕಷ್ಟು ವಸ್ತುಗಳು ಇದ್ದು ಅವುಗಳನ್ನು ಖಾಲಿ ಮಾಡಿಕೊಂಡು ಅವರೇ ಜಾಗ ತೆರವು ಮಾಡಲು ನಾಲ್ಕು ದಿನಗಳ ಕಾಲವಕಾಶ ನೀಡಿರುವುದಾಗಿ ಹೇಳಿದರು.