ನೂರು ವರ್ಷ ಕಳೆದರೂ ಮೋದಿಯಂಥ ನಾಯಕ ಸಿಗೋದಿಲ್ಲ

| Published : Apr 27 2024, 01:01 AM IST

ನೂರು ವರ್ಷ ಕಳೆದರೂ ಮೋದಿಯಂಥ ನಾಯಕ ಸಿಗೋದಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಕೀಯ, ಶೈಕ್ಷಣಿಕ, ಆಧ್ಯಾತ್ಮಿಕ, ಧಾರ್ಮಿಕವಾಗಿ ಎಲ್ಲ ದೃಷ್ಟಿಯಿಂದಲೂ ಪರಿಪೂರ್ಣತೆ ಹೊಂದಿರುವ ನರೇಂದ್ರ ಮೋದಿ ಅವರಂಥ ಇನ್ನೊಬ್ಬ ನಾಯಕ ನೂರು ವರ್ಷ ಕಳೆದರೂ ಭಾರತಕ್ಕೆ ಸಿಗುವುದಿಲ್ಲ. ಎಲ್ಲರೂ ಮೆಚ್ಚುವಂತಹ, ಸೋಜಿಗದ ವ್ಯಕ್ತಿತ್ವದವರು ಮೋದಿ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಹೊನ್ನಾಳಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ರಾಜಕೀಯ, ಶೈಕ್ಷಣಿಕ, ಆಧ್ಯಾತ್ಮಿಕ, ಧಾರ್ಮಿಕವಾಗಿ ಎಲ್ಲ ದೃಷ್ಟಿಯಿಂದಲೂ ಪರಿಪೂರ್ಣತೆ ಹೊಂದಿರುವ ನರೇಂದ್ರ ಮೋದಿ ಅವರಂಥ ಇನ್ನೊಬ್ಬ ನಾಯಕ ನೂರು ವರ್ಷ ಕಳೆದರೂ ಭಾರತಕ್ಕೆ ಸಿಗುವುದಿಲ್ಲ. ಎಲ್ಲರೂ ಮೆಚ್ಚುವಂತಹ, ಸೋಜಿಗದ ವ್ಯಕ್ತಿತ್ವದವರು ಮೋದಿ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅಭಿಪ್ರಾಯಪಟ್ಟರು.

ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಅರಕೆರೆ, ಹಿರೇಗೋಣಿಗೆರೆ, ಬೇಲಿಮಲ್ಲೂರು ಗ್ರಾಮಗಳಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಮತಯಾಚಿಸಿ ಮಾತನಾಡಿದ ಅವರು, ಮೋದಿ ಅವರಂಥ ನಾಯಕ ಬೇರೆ ದೇಶದಲ್ಲಿ ಜನಿಸಿದ್ದರೆ ದೇಶದ ಜನರೆಲ್ಲರೂ ಅವರನ್ನು ಪೂಜಿಸುತ್ತಿದ್ದರು. ಇಂತಹ ಮೇರು ವ್ಯಕ್ತಿತ್ವದ ಮೋದಿ ಅವರನ್ನು ವಿರೋಧಿಸುವಂತಹ ಮಾನಸಿಕ ಸ್ಥಿತಿ ಕೆಲವರಲ್ಲಿದೆ. ಇಂತಹ ಮನಸ್ಥಿತಿ ಇರುವ ಕಾಂಗ್ರೆಸ್ ಪಕ್ಷದಿಂದ ದೇಶಕ್ಕೆ ಯಾವ ಲಾಭವಿದೆ ಎಂದು ಪ್ರಶ್ನಿಸಿದರು.

ಅರ್ಬನ್ ನಕ್ಸಲ್ ಮನಸ್ಥಿತಿ:

ಕಾಂಗ್ರೆಸ್‌ನವರದ್ದು ಅರ್ಬನ್ ನಕ್ಸಲ್ ಮನಸ್ಥಿತಿ. ಈ ದೇಶದ ಸಂಪತ್ತಿನ ಹೆಚ್ಚಿನ ಪಾಲು ಮುಸ್ಲಿಮರಿಗೆ ಸಿಗಬೇಕು ಎನ್ನುವ ಮನಸ್ಥಿತಿ ಹೊಂದಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಆರ್ಥಿಕ ಸರ್ವೆ ಮಾಡುವುದಾಗಿ ಹೇಳುತ್ತಿದ್ದಾರೆ. ಕಷ್ಟಪಟ್ಟು ನೀವು ದುಡಿದ ಆಸ್ತಿ ಕಂಡವರ ಪಾಲಾಗಲು ಯಾವುದೇ ಕಾರಣಕ್ಕೂ ಬಿಡಬೇಡಿ. ಆರ್ಥಿಕ ಸಮೀಕ್ಷೆ ನಡೆಸುತ್ತೇವೆ ಎನ್ನುವವರನ್ನು ಮನೆಗೆ ಕಳುಹಿಸಲು ಸಿದ್ಧರಾಗಿ ಎಂದು ತಿಳಿಸಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅವರ ಬ್ರದರ್ಸ್‌ಗಳ ಗೂಂಡಾ ವರ್ತನೆ, ಭಯೋತ್ಪಾದನೆ ಹೆಚ್ಚಾಗುತ್ತದೆ ಎನ್ನುವುದಕ್ಕೆ ಅನೇಕ ಸಾಕ್ಷಿಗಳಿವೆ. ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ, ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಜೈ ಶ್ರೀರಾಮ್ ಎಂದಿದ್ದಕ್ಕೆ ದಲಿತ ಯುವಕರ ಮೇಲೆ ಹಲ್ಲೆ, ಮಂಡ್ಯದಲ್ಲಿ ಹನುಮಾನ್ ಧ್ವಜ ಇಳಿಸಿದ್ದು, ಬೆಂಗಳೂರಿನಲ್ಲಿ ಜೈಶ್ರೀರಾಮ್ ಎಂದಿದ್ದಕ್ಕೆ ಇಬ್ಬರು ಯುವಕರ ಮೇಲೆ ಹಲ್ಲೆ ಮಾಡಿರುವುದು, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಪ್ರಕರಣ, ಹೀಗೆ ಪಟ್ಟಿ ಮಾಡಿದರೆ ಹೇಳಲು ಇಡೀ ದಿನ ಸಾಕಾಗುವುದಿಲ್ಲ. ಇಂಥವರಿಗೆ ಅಧಿಕಾರ ಕೊಡಬೇಕಾ ಎಂದು ಪ್ರಶ್ನಿಸಿದ ಅವರು, ಗಾಯತ್ರಿ ಸಿದ್ಧೇಶ್ವರ ಅವರಿಗೆ ಮತ ಹಾಕಬೇಕು ಎಂದು ಕೋರಿದರು.

ಮಂಡಲ ಅಧ್ಯಕ್ಷ ಸುರೇಶ್, ಬಿಜೆಪ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ್, ಬಿಜೆಪಿ ಮುಖಂಡ ಮಹೇಶ್, ಕುಬೇರಪ್ಪ, ಸಂತೋಷ ಕುಮಾರ್, ಎಲ್.ಕೆ. ಮಂಜಪ್ಪ, ಪ್ರಭು, ರವಿ, ಹೊನ್ನಪ್ಪ, ರಾಮಣ್ಣ, ಶಾಂತರಾಜ್ ಪಾಟೀಲ್, ಎ.ಬಿ. ಹನುಮಂತಪ್ಪ, ಅರೆಕೆರೆ ನಾಗರಾಜ್, ರಂಗನಾಥ್, ಸುರೇಂದ್ರ, ಯೋಗೇಶ್, ಮಂಡಲದ ಸದಸ್ಯರು, ಗ್ರಾ.ಪಂ. ಸದಸ್ಯರು, ಬೂತ್‌ಮಟ್ಟದ ಅಧ್ಯಕ್ಷರು, ಗ್ರಾಮದ ಬಿಜೆಪಿ ಮುಖಂಡರು ಸೇರಿದಂತೆ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಮುಖಂಡರು ಇದ್ದರು.

- - - ಕೋಟ್‌

ಕಾಂಗ್ರೆಸ್ ಸರ್ಕಾರ 60 ವರ್ಷಗಳ ಕಾಲ ಜನರ ಕೈಗೆ ಚೊಂಬು ಕೊಟ್ಟು ಬಯಲು ಶೌಚಾಲಯಕ್ಕೆ ಪ್ರೋತ್ಸಾಹ ನೀಡಿತ್ತು. ಮೋದಿ ನೇತೃತ್ವದ ಸರ್ಕಾರ ಕೇವಲ 5 ವರ್ಷಗಳಲ್ಲಿ ಸ್ವಚ್ಛಭಾರತ್ ಮಿಷನ್ ಯೋಜನೆ ಅಡಿ ಬಯಲು ಶೌಚಾಲಯ ಮುಕ್ತ ದೇಶವನ್ನಾಗಿ ಮಾಡಿ, ಮಹಿಳೆಯರ, ಪುರುಷರ ಗೌರವ ಉಳಿಸಲು ಶೌಚಾಲಯ ನಿರ್ಮಾಣ ಮಾಡಿಕೊಟ್ಟಿದೆ. ದಾವಣಗೆರೆ ಜಿಲ್ಲೆಯಲ್ಲೇ 1.71 ಲಕ್ಷ ಶೌಚಾಲಯ ಕಟ್ಟಿಸಿಕೊಟ್ಟಿದ್ದಾರೆ. ಹೀಗಿದ್ದರೂ ಕಾಂಗ್ರೆಸ್‌ನವರು ಈಗಲೂ ಬೀದಿ ಬೀದಿಗಳಲ್ಲಿ ಚೊಂಬು ಹಿಡಿದುಕೊಂಡು ಓಡಾಡುತ್ತಿದ್ದಾರೆ

- ಗಾಯತ್ರಿ ಸಿದ್ದೇಶ್ವರ, ಬಿಜೆಪಿ ಅಭ್ಯರ್ಥಿ

- - - -26ಎಚ್.ಎಲ್.ಐ1:

ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರಿನಲ್ಲಿ ಬಿಜೆಪಿ ಅಭ್ಯರ್ತಿ ಗಾಯತ್ರಿ ಸಿದ್ದೇಶ್ವರ ಮತಯಾಚಿಸಿದರು.