ಉದ್ಯೋಗ ನಿವೃತ್ತಿಯಾದರೂ ಜೀವನ ಪೂರ್ತಿ ಚಟುವಟಿಕೆಯಿಂದಿರಬೇಕು: ರೀನಾ ಬೆನ್ನಿ ಸಲಹೆ

| Published : Jun 11 2024, 01:34 AM IST

ಉದ್ಯೋಗ ನಿವೃತ್ತಿಯಾದರೂ ಜೀವನ ಪೂರ್ತಿ ಚಟುವಟಿಕೆಯಿಂದಿರಬೇಕು: ರೀನಾ ಬೆನ್ನಿ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಉದ್ಯೋಗದಲ್ಲಿ ನಿವೃತ್ತಿಯಾದರೂ ಜೀವನದಲ್ಲಿ ನಿವೃತ್ತಿ ಎಂಬುದೇ ಇಲ್ಲ ಎಂದು ನಾಗಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾಬೆನ್ನಿ ತಿಳಿಸಿದರು.

ಬಸ್ತಿಮಠದ ಸರ್ಕಾರಿ ಶಾಲಾ ಆವರಣದಲ್ಲಿ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶ್ಯಾಮಲ ರಾಜಕುಮಾರ್ ಗೆ ಬೀಳ್ಕೊಡುಗೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಉದ್ಯೋಗದಲ್ಲಿ ನಿವೃತ್ತಿಯಾದರೂ ಜೀವನದಲ್ಲಿ ನಿವೃತ್ತಿ ಎಂಬುದೇ ಇಲ್ಲ ಎಂದು ನಾಗಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾಬೆನ್ನಿ ತಿಳಿಸಿದರು.

ಭಾನುವಾರ ಬಸ್ತಿಮಠದ ಸರ್ಕಾರಿ ಶಾಲಾ ಆವರಣದಲ್ಲಿ ಬಾಲವಿಕಾಸ ಸಮಿತಿ ಹಾಗೂ ಗ್ರಾಮಸ್ಥರಿಂದ ನಿವೃತ್ತರಾದ ಮುಂಡೊಳ್ಳಿ ಅಂಗನವಾಡಿ ಕಾರ್ಯಕರ್ತೆ ಶ್ಯಾಮಲ ರಾಜಕುಮಾರ್ ಖಂಡೋಜಿ ಅವರ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮುಂಡೊಳ್ಳಿಯ ಅಂಗನವಾಡಿಯಲ್ಲಿ ಕಾರ್ಯನಿರ್ವಹಿಸಿದ ಶ್ಯಾಮಲ ಅವರ ಸೇವೆ ಅನನ್ಯವಾಗಿದೆ. ಮಕ್ಕಳನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.

ಅತಿಥಿಯಾಗಿದ್ದ ಸಿಡಿಪಿಒ ಇಲಾಖೆ ಮೇಲ್ವೀಚಾರಕಿ ದಾಕ್ಷಾಯಿಣಿ ಬಾಯಿ ಮಾತನಾಡಿ, ಮೇ 31 ರಂದು ನಿವೃತ್ತರಾದ ಶ್ಯಾಮಲ ರಾಜಕುಮಾರ್ 32 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಯಾಗಿದ್ದಾರೆ. ಶ್ಯಾಮಲ ಅವರು ತಮ್ಮ ನಿವೃತ್ತ ಜೀವನದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಮನಸ್ಸಿಗೆ ನೆಮ್ಮದಿ, ತೃಪ್ತಿ ಸಿಗುತ್ತದೆ. ಅವರ ಸೇವೆಯಲ್ಲಿ ಎಲ್ಲಾ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡಿದ್ದರು ಎಂದು ಸ್ಮರಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ಯಾಮಲ ರಾಜಕುಮಾರ್‌ ಮುಂಡೊಳ್ಳಿ ಗ್ರಾಮದಲ್ಲಿ ಅಂಗನವಾಡಿ ತೆರೆಯುವಾಗ ಮನೆ, ಮನೆಗಳಲ್ಲಿ ಸರ್ವೆ ಮಾಡಲಾಗಿತ್ತು. ಪ್ರಾರಂಭದ 15 ದಿನ ಗಣಪತಿ ದೇವಸ್ಥಾನದಲ್ಲಿ ಅಂಗನವಾಡಿ ನಡೆಸಲಾಗಿತ್ತು. ಆಗಿನ ಕಾಲದಲ್ಲಿ ಕಷ್ಟ ಪಟ್ಟು ಅಂಗನವಾಡಿ ಕಟ್ಟಡ ಕಟ್ಟಿದ್ದೇವೆ. ಅಂಗನವಾಡಿ ಎಂಬುದು ಊರಿನ ಕಳಶವಿದ್ದಂತೆ ಎಂದರು.

ಇದೇ ಸಂದರ್ಭದಲ್ಲಿ ಯೋಗೀಶ್‌, ಶೃತಿ, ನಾಗರಾಜ ದೊಡ್ಡಮನಿ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು.

ಸಭೆ ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿ ಅಧ್ಯಕ್ಷೆ ಕಮಲ ವಹಿಸಿದ್ದರು. ಸಭೆಯಲ್ಲಿ ನಾಗಲಾಪುರ ಗ್ರಾಮ ಪಂಚಾಯಿತಿ ಸದಸ್ಯ ರಮೇಶ ದೊಡ್ಡಮನಿ, ಬಾಲ ವಿಕಾಸ ಸಮಿತಿ ಸದಸ್ಯ ನಾಗರಾಜ ದೊಡ್ಡಮನಿ, ಪಿಡಿಒ ಪ್ರೇಂ ಕುಮಾರ್‌, ನಿವೃತ್ತ ಮುಖ್ಯೋಪಾಧ್ಯಾಯ ಡಿ.ರಾಜಪ್ಪ, ಬಸ್ತಿಮಠದ ಶಾಲಾ ಮುಖ್ಯ ಶಿಕ್ಷಕಿ ನೇತ್ರಾವತಿ, ಶಿಕ್ಷಕಿ ಡೈಸಿ , ಭಾನುಮತಿ , ನಿವೃತ್ತ ಶಿಕ್ಷಕ ಕೆ.ಎಸ್‌.ರಾಜಕುಮಾರ್ ಇದ್ದರು.