ಸಾರಾಂಶ
ಜಾನುವಾರುಗಳಿಗೆ ರೈತರ ಬೇಡಿಕೆಗೆ ತಕ್ಕಂತೆ ಮೇವು ಸಿಗುತ್ತಿಲ್ಲ. ಮೇವು ಸಿಕ್ಕರೂ ಮೇವು ಸಾಗಿಸಲು ಬಾಡಿಗೆ ಹೊರೆ ಹೆಚ್ಚಾಗಿದೆ ಎಂದು ರೈತರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.
90 ಕೆ.ಜಿ ಮೇವಿಗೆ ಸಾವಿರ ರು. ಬಾಡಿಗೆ । ರೈತರ ಅಸಮಾಧಾನ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಜಾನುವಾರುಗಳಿಗೆ ರೈತರ ಬೇಡಿಕೆಗೆ ತಕ್ಕಂತೆ ಮೇವು ಸಿಗುತ್ತಿಲ್ಲ. ಮೇವು ಸಿಕ್ಕರೂ ಮೇವು ಸಾಗಿಸಲು ಬಾಡಿಗೆ ಹೊರೆ ಹೆಚ್ಚಾಗಿದೆ ಎಂದು ರೈತರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.
ಹೋಬಳಿ ಮಟ್ಟದಲ್ಲಿ ಮೇವು ಕೊಟ್ಟರೆ ರೈತರಿಗೆ ಅನುಕೂಲವಾಗಲಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಪಶು ಪಾಲಾನೆ ಮತ್ತು ಪಶು ವೈದ್ಯಕೀಯ ಇಲಾಖೆ ರೈತರಿಗೆ ರಿಯಾಯಿತಿ ದರದಲ್ಲಿ ಒಂದು ಕೆಜಿ ಮೇವಿಗೆ 2 ರು.ನಂತೆ ಐದು ಜಾನುವಾರುಗಳಿಗೆ ವಾರಕ್ಕೆ 90 ಕೆಜಿ ಒಬ್ಬ ರೈತರಿಗೆ ನೀಡುತ್ತಿದೆ. ಆದರೆ ದೂರದೂರಿನಿಂದ ಬಂದ ರೈತರು 90 ಕೆಜಿ ಮೇವು ತೆಗೆದುಕೊಂಡು ತಮ್ಮೂರಿಗೆ ಹೋಗಲು ಬಾಡಿಗೆ ಸಾವಿರ ರು. ತೆರಬೇಕಿದೆ ಎಂದು ಹಂಗಳ ಹೋಬಳಿಯ ಮಂಗಲ ಗ್ರಾಮದ ರೈತರೊಬ್ಬರು ಅಸಮಧಾನ ಹೊರ ಹಾಕಿದ್ದಾರೆ.ಶುಕ್ರವಾರ 50 ಟನ್ ಮೇವು ಬಂದಿದೆ. 200 ಮಂದಿ ರೈತರಿಗೆ ಟೋಕನ್ ಕೊಟ್ಟು ಮೇವು ಸಹ ಖರೀದಿಸಿದ್ದಾರೆ. ಆದರೆ ಟೋಕನ್ ಬೇಕು ಎಂದು ರೈತರು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸಹಾಯಕ ನಿರ್ದೇಶಕರ ಕಚೇರಿಗೆ ಜಮಾಯಿಸಿ ಟೋಕನ್ ಕೊಡಿ ಎಂದು ಮುತ್ತಿಗೆ ಹಾಕಿದ್ದೂ ಆಗಿದೆ.
ಟೋಕನ್ ಪಡೆದ ರೈತರು ಮೇವು ತೆಗೆದುಕೊಳ್ಳಲು ಬಿಸಿಲಿನ ನಡುವೆ ಕಾದು ನಿಲ್ಲುವಂತಾಗಿದೆ ಎಂದು ಕನ್ನೇಗಾಲ ಗ್ರಾಮದ ಕೆ.ಎಂ.ಮನಸ್ ತಾಲೂಕು ಆಡಳಿತ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ತಾಲೂಕಿನ ಗಡಿ ಭಾಗದ ಗ್ರಾಮದ ರೈತರು ಗುಂಡ್ಲುಪೇಟೆಯ ಎಪಿಎಂಸಿ ಬಂದು ಮೇವು ಖರೀದಿಸಿದ ಹಣಕ್ಕಿಂತಲೂ ಬಾಡಿಗೆ ದುಬಾರಿ ಕೊಟ್ಟು ತೆಗೆದುಕೊಂಡು ಹೋಗುವುದು ಕಷ್ಟಕರವಾಗಿದೆ ಎಂದು ರೈತರು ಹೇಳಿದ್ದಾರೆ.ಹೋಬಳಿಯಲ್ಲೆ ವಿತರಿಸಲಿ: ಗುಂಡ್ಲುಪೇಟೆ ಎಪಿಎಂಸಿ ಸೇರಿದಂತೆ ಹೋಬಳಿ ಮಟ್ಟದಲ್ಲಿ ಮೇವು ರಿಯಾರಿತಿ ದರದಲ್ಲಿ ವಿತರಿಸಿದರೆ ರೈತರಿಗೆ ಬಾಡಿಗೆ ಕಡಿಮೆಯಾಗಿ ರೈತರಿಗೆ ಅನುಕೂಲವಾಗಲಿದೆ.ಕಳೆದ ತಿಂಗಳ ಏ.22 ರಿಂದ ಮೇ.3ರ ತನಕ ರಜಾ ದಿನ ಹೊರತು ಪಡಿಸಿ ಉಳಿದೆಲ್ಲ ದಿನಗಳಲ್ಲಿ 65 ರಿಂದ 70 ಟನ್ ಮೇವು ವಿತರಿಸಲಾಗಿದೆ.
-ಡಾ.ಮೋಹನ್ ಕುಮಾರ್, ಪಶು ವೈದ್ಯಕೀಯ ಇಲಾಖೆ