ಸಾರಾಂಶ
ಚನ್ನಪಟ್ಟಣ: ದೇವೇಗೌಡರು ಅವರದ್ದೇ ಪಕ್ಷದ ಸರ್ಕಾರ ಇದ್ದರೂ ಅದು 5 ವರ್ಷ ಇರುತ್ತೆ ಎಂದು ಹೇಳೋದಿಲ್ಲ. ಇದು ಯಾವಾಗ ಬಿದ್ದೋಗುತ್ತೋ ಅಂತಾನೆ ಹೇಳ್ತಾರೆ. ಪ್ರಧಾನಿಯಾಗಿ 11 ತಿಂಗಳು, ಸಿಎಂ ಆಗಿ 17 ತಿಂಗಳು, ಅವರ ಮಗ ಸಿಎಂ ಆಗಿ 20 ತಿಂಗಳು ಅಧಿಕಾರ ನಡೆಸಿದ್ದಾರೆ. ಅದ್ಯಾಕೋ ಅವರಿಗೆ ಸರ್ಕಾರಗಳನ್ನು ಪೂರ್ಣಾವಧಿ ನಡೆಸಲು ಅವಕಾಶ ಸಿಗದ ಕಾರಣ ಹಾಗೆ ಹೇಳುತ್ತಾರೆ. ಕಾಂಗ್ರೆಸ್ ಸರ್ಕಾರ ಬೀಳುತ್ತದೆ ಎಂದು ಹೇಳಿದ ಮಾಜಿ ಪ್ರಧಾನಿ ದೇವೇಗೌಡರಿಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೇಗೌಡರು ಹಿರಿಯರು, ಅವರು ಮಾತನಾಡುವಾಗ ಗಮನಹರಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಸರ್ಕಾರವನ್ನು, ಜನಪ್ರತಿನಿಧಿಗಳನ್ನು ತೆಗೆಯುತ್ತೇವೆ ಎನ್ನುವುದು ಅಪರಾಧ. ಈ ವಿಷಯವಾಗಿ ನಾವು ನ್ಯಾಯಾಲಯಕ್ಕೂ ಹೋಗುವ ಅವಕಾಶವಿದೆ. ಅವರ ಮೇಲಿನ ಗೌರವದಿಂದ ಹೋಗುತಿಲ್ಲ ಎಂದು ಹೇಳಿದರು.ಮೇಕೆದಾಟು ವಿಚಾರಕ್ಕೆ ಮೋದಿ ಹತ್ರ ಮಾತಾಡಲಿ:
ಜೆಡಿಎಸ್ ಪಕ್ಷದ ಅಭಿವೃದ್ಧಿ ಕೆಲಸಕ್ಕೆ ನಾವು ಅಡ್ಡಗಲು ಹಾಕಿಲ್ಲ, ಕೇಂದ್ರ ಸಚಿವ ಕುಮಾರಸ್ವಾಮಿ ಲೋಕಸಭಾ ಸದಸ್ಯನಾದ ಒಂದೇ ತಿಂಗಳಲ್ಲಿ ಮೇಕೆದಾಟು ಮಾಡುತ್ತೇನೆ. ಈಗ ಆಗಲ್ಲ ಅನ್ನುತ್ತಿದ್ದಾರೆ. ಮೇಕೆದಾಟು ವಿಚಾರವಾಗಿ ಮೋದಿ ಹತ್ತಿರ ಮಾತಾಡಲಿ ಎಂದು ಸವಾಲು ಹಾಕಿದರು.ಗೋವಾ ಮತ್ತು ಕರ್ನಾಟಕದಲ್ಲಿ ಬಿಜೆಪಿಯದೇ ಸರ್ಕಾರ ಇದ್ದಾಗ ಮಹದಾಯಿ ಸಮಸ್ಯೆ ಯಾಕೆ ಪರಿಹರಿಸಲಿಲ್ಲ, ರಾಜ್ಯದಲ್ಲಿ 27 ಮಂದಿ ಬಿಜೆಪಿ ಲೋಕಸಭಾ ಸದಸ್ಯರಿದ್ದರು. ಅನುಮತಿ ಪಡೆದು ಯಾಕೆ ಮೇಕೆದಾಟು ಯೋಜನೆಗೆ ಅನುಮತಿ ತರಲಿಲ್ಲ ಎಂದು ಪ್ರಶ್ನಿಸಿದರು.
ದೇವೇಗೌಡರು ತಮ್ಮನ್ನು ಆಕಾಶದಲ್ಲಿದ್ದೇವೆ ಎನ್ನುತ್ತಾರೆ. ಕಾಂಗ್ರೆಸ್‌ನವರು ಭೂಮಿ ಎನ್ನುತ್ತಾರೆ, ಹೌದು ನಾವು ಭೂಮಿ ಮೇಲೆಯೇ ಇರುತ್ತೇವೆ. ನಾವು ಮನುಷ್ಯರು, ಮನುಷ್ಯರ ನಡುವೆ ಇದ್ದು ಕೆಲಸ ಮಾಡುತ್ತೇವೆ ಎಂದು ಟಾಂಗ್ ನೀಡಿದರು.ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಹೋರಾಟ ಮಾಡುತ್ತೇನೆ ಎನ್ನುತ್ತಾರೆ. ದೇವೇಗೌಡರು ಮೊದಲು ಹಾಸನದಲ್ಲಿ ಏನಾಯ್ತು, 3 ತಿಂಗಳು ಮನೇಲಿ ಯಾಕಿದ್ದರು ಎಂಬುದು ಹೇಳಲಿ, ಹಾಸನದಲ್ಲಿ ನಡೆದ ವಿಷಯವಾಗಿ ದೇವೇಗೌಡರು ಹೋರಾಟ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಚನ್ನಪಟ್ಟಣ ಜನರ ಕೈಬಿಟ್ಟ ಕುಮಾರಸ್ವಾಮಿ:ಕುಮಾರಸ್ವಾಮಿ ಯಾರ ನಂಬಿಕೆಗೂ ಅರ್ಹ ವ್ಯಕ್ತಿ ಅಲ್ಲ, ಕೇಂದ್ರದಲ್ಲಿ ಮಂತ್ರಿಯಾಗಲು ಮಂಡ್ಯದಲ್ಲಿ ಮಗನಿಗೂ ಟಿಕೆಟ್ ತಪ್ಪಿಸಿದರು. ಅವರನ್ನು ನಂಬಿ ಗೆಲ್ಲಿಸಿದ ಚನ್ನಪಟ್ಟಣದ ಜನರ ಕೈಯನ್ನೂ ಬಿಟ್ಟರು. ಇಂತವರಿಂದ ಏನನ್ನು ನಿರೀಕ್ಷೆ ಮಾಡಲು ಸಾಧ್ಯ. ನಾನು ಈ ಹಿಂದೆ ಕುಮಾರಸ್ವಾಮಿ ಜೊತೆ ಇದ್ದೆ, ಅವರು ಚುನಾವಣೆ ಅಂದ್ರೆ ಹೇಗೆ ಕಲೆಕ್ಷನ್ ಮಾಡ್ತಾರೆ ಅನ್ನೋದು ಗೊತ್ತು. ಅವರ ಹಾಗೆ ರಾಜಕಾರಣಿಗಳ ಬಗ್ಗೆ ಲಘುವಾಗಿ ಮಾತನಾಡುವುದು ನನಗೆ ಗೊತ್ತಿಲ್ಲ, ಅವರಂತೆ ಪೆನ್ಡ್ರೈವ್ ಇಟ್ಟಿಲ್ಲ, ಆದರೆ ಅವರ ಬಗ್ಗೆ ಮಾಹಿತಿ ಇದೇ ಬೇಕಾದರೆ ಕೊಡ್ತೀನಿ ಎಂದು ಇದೆ ವೇಳೆ ತಿಳಿಸಿದರು.
ಬಾಕ್ಸ್.......................ಮೈಸೂರಲ್ಲಿ ಹಲ್ಲೇ ಕುಮಾರಸ್ವಾಮಿ ಉಹಾಪೋಹದ ಹೇಳಿಕೆ
ಚನ್ನಪಟ್ಟಣ: ಕುಮಾರಸ್ವಾಮಿ ಇಲ್ಲಸಲ್ಲದ ವಿಷಯ ಚರ್ಚೆಗೆ ಬಿಟ್ಟಿದ್ದಾರೆ. ಕೀಲಾರ ಜಯರಾಮ್ ಅವರು ನಾನು ಎಂಗೇಜ್ಮೆಂಟ್ ನಲ್ಲಿ ಭೇಟಿಯಾಗಿದ್ದೆವು. ಮೈಸೂರಲ್ಲಿ ಹಲ್ಲೇ ನಡೆಸಿರುವ ಕುರಿತು ಕುಮಾರಸ್ವಾಮಿ ಉಹಾಪೋಹದ ಹೇಳಿಕೆ ನೀಡುತ್ತಿದ್ದಾರೆ. ಅದನ್ನು ಬಿಟ್ಟು ಅವರ ಮಗನ ಚುನಾವಣೆ ಬಗ್ಗೆ ಗಮನ ಹರಿಸಲಿ ಎಂದು ಚಲುವರಾಯಸ್ವಾಮಿ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಗೇಜ್ಮೆಂಟ್ ಕಾರ್ಯಕ್ರಮದಲ್ಲಿ ಭೇಟಿಯಾಗಿ ಊಟ ಮಾಡಿ ಬಂದಿದ್ದೇವೆ. ಕೀಲಾರ ಜಯರಾಮ್ ನನಗೆ ೪೦ ವರ್ಷಗಳ ಸ್ನೇಹಿತ, ಅವರಿಗೆ ಜೆಡಿಎಸ್‌ನಿಂದ ಟಿಕೆಟ್ ನೀಡಿಲ್ಲ ಅನ್ನೋ ಆರೋಪವನ್ನು ಮಾಧ್ಯಮದಲ್ಲಿ ಹೇಳಿದ್ದಾರೆ. ಜೆಡಿಎಸ್‌ನಿಂದ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ ಎಂದರು.
ಕುಮಾರಸ್ವಾಮಿ ಅವರು ಯಾವ ಚಪಲಕ್ಕೆ ಹೇಳಿದ್ದಾರಂತ ಗೊತ್ತಿಲ್ಲ. ಅವರಿಗೆ ಮಗನ ಚುನಾವಣೆ ಬಗ್ಗೆ ಗಮನ ಹರಿಸೋದು ಬಿಟ್ಟು ನನ್ನ ಮತ್ತು ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡದೆ ಇದ್ದರೆ ನಿದ್ರೆ ಬರೋಲ್ಲ ಎಂದು ಚಾಟಿ ಬೀಸಿದರು.ಕುಮಾರಸ್ವಾಮಿ ರಾಜ್ಯದ ಅಭಿವೃದ್ಧಿಗೆ ಸಲಹೆ ಕೊಡುವುದಾಗಲಿ, ಅಭಿವೃದ್ಧಿ ಮಾಡುವಂತೆ ಹೋರಾಟ ಮಾಡುವುದಾಗಲಿ ಮಾಡೋಲ್ಲ, ಅದು ಬಿಟ್ಟು ಎಲ್ಲಾ ಮಂತ್ರಿಗಳ ಮಾಹಿದೆ ಇದೇ ಎಂದು ಹೇಳುತ್ತಾರೆ. ಪೆನ್ ಡ್ರೈವ್ ಇದೇ ಅಂತಾರೆ. ಇದುವರೆಗೂ ಏನನ್ನು ಬಿಡುಗಡೆ ಮಾಡಿಲ್ಲ ಎಂದು ವ್ಯಂಗ್ಯವಾಡಿದರು.
ಪೊಟೋ೧೦ಸಿಪಿಟಿ೧:ಚನ್ನಪಟ್ಟಣದಲ್ಲಿ ಕೃಷಿ ಚಲುವರಾಯಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.