ಸಾರಾಂಶ
ಪಾಂಬೂರು ಮಾನಸ ವಿಶೇಷ ಚೇತನರ ಶಾಲೆಯಲ್ಲಿ ಆಟಿಸಂ ತರಬೇತಿ ಕೇಂದ್ರದ ಉದ್ಘಾಟನೆಕನ್ನಡಪ್ರಭ ವಾರ್ತೆ ಕಾಪು
ವಿಶೇಷ ಚೇತನ ಮಕ್ಕಳ ಆರೈಕೆಯು ಒಂದು ಸವಾಲಿನ ಹಾಗೂ ಜವಾಬ್ದಾರಿಯುತ ಕೆಲಸವಾಗಿದ್ದು, ಉತ್ತಮ ಆರೈಕೆ, ಪ್ರೋತ್ಸಾಹ ಮತ್ತು ಬೆಂಬಲದಿಂದ ಇಂತಹ ಮಕ್ಕಳು ತಮ್ಮ ಜೀವನದಲ್ಲಿ ಯಶಸ್ಸಿನ ಮೆಟ್ಟಿಲನ್ನು ಏರಲು ಸಾಧ್ಯವಿದೆ ಎಂದು ಉದ್ಯಮಿ, ದಾನಿ ಮೈಕಲ್ ಡಿಸೋಜ ಹೇಳಿದರು.ಅವರು ಶನಿವಾರ ಇಲ್ಲಿನ ಪಾಂಬೂರು ಮಾನಸ ವಿಶೇಷ ಚೇತನ ಶಾಲೆಯಲ್ಲಿ ಆಟಿಸಂ ವಿಭಾಗದ ಪ್ರಾಥಮಿಕ ತರಬೇತಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ವಿಶೇಷ ಚೇತನ ಮಕ್ಕಳು ಸಮಾಜದ ಆಸ್ತಿ. ಅವರನ್ನು ಆರೈಕೆ ಮಾಡುವುದು, ಅವರ ಶೈಕ್ಷಣಿಕ ಚಟುವಟಿಕೆಗೆ ಪ್ರೇರಣೆ ನೀಡುವುದು ಪುಣ್ಯದ ಕೆಲಸ. ಮಾನಸ ಸಂಸ್ಥೆ ಕಳೆದ 28 ವರ್ಷಗಳಿಂದ ನಿರಂತರವಾಗಿ ಈ ಕೆಲಸ ಮಾಡಿಕೊಂಡು ಬಂದಿದೆ. ದೈಹಿಕವಾಗಿ ಸರಿ ಇರುವ ಮಕ್ಕಳನ್ನು ನಿಭಾಯಿಸುವುದೇ ಕಷ್ಟಕರವಾಗಿರುವಾಗ ವಿಶೇಷ ಚೇತನ ಮಕ್ಕಳಿಗೆ ಶಿಕ್ಷಣ ನೀಡಿ ಅವರನ್ನು ಆರೈಕೆ ಮಾಡುತ್ತಿರುವ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಶಿಕ್ಷಕರ ಪಾತ್ರ ಸಮಾಜಕ್ಕೆ ಅನುಕರಣೀಯವಾದದ್ದು ಎಂದರು.ನೂತನ ಕೇಂದ್ರವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೋ ಉದ್ಘಾಟಿಸಿ, ಆಶೀರ್ವಚನ ನೀಡಿದರು.ಆಟಿಸಂ ವಿಭಾಗದ ಪ್ರಾಥಮಿಕ ತರಬೇತಿ ಕೇಂದ್ರದ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡಿದ ಮೈಕಲ್ ಫ್ಲಾವಿಯಾ ಡಿಸೋಜ ದಂಪತಿಯನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ, ನಿವೃತ್ತ ಯೋಧ ಕಮೋಡರ್ ಜೆರೊಮ್ ಕ್ಯಾಸ್ತಲಿನೋ ಮೂಡುಬೆಳ್ಳೆ, ಮಾನಸ ಸಂಸ್ಥೆಯ ಪ್ರಾಂಶುಪಾಲರಾದ ಸಿಸ್ಟರ್ ವಿನ್ನಿಗೊನ್ಸಾಲ್ವಿಸ್, ಸಹಕಾರ್ಯದರ್ಶಿ ಮೇರಿ ಡಿಸೋಜ, ಕೋಶಾಧಿಕಾರಿ ಜೊಸೇಫ್ ಎಫ್. ನೊರೊನ್ಹಾ ಟ್ರಸ್ಟಿಗಳಾದ ಡಾ.ಎಡ್ವರ್ಡ್ ಲೋಬೊ, ಹೆನ್ರಿ ಮಿನೇಜಸ್, ಕಿರಣ್ ಕ್ರಾಸ್ತಾ, ಸಲಹಾ ಸಮಿತಿ ಸದಸ್ಯರಾದ ವಾಲ್ಟರ್ ಸಿರಿಲ್ ಪಿಂಟೊ, ಜೆರಾಲ್ಡ್ ರೊಡ್ರಿಗಸ್, ಗ್ರೇಸಿ ಲಸ್ರಾದೊ, ಮೈಕಲ್ ಡಿಸೋಜಾ, ಟ್ರಸ್ಟಿನ ಸಲಹಾಸಮಿತಿ ಸದಸ್ಯರಾದ ಓಸ್ವಲ್ಡ್ ರೊಡ್ರಿಗಸ್, ಲೈನಲ್ ಆರಾನ್ಹಾ, ಸ್ಟೀಫನ್ ಪಿಂಟೊ, ಶಾಲೆಯ ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು, ದಾನಿಗಳು ಹಾಗೂ ಇತರರು ಉಪಸ್ಥಿತರಿದ್ದರು.ಮಾನಸ ಟ್ರಸ್ಟ್ ಅಧ್ಯಕ್ಷ ಜೋನ್ ಮಾರ್ಟಿಸ್ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ಜೆರಾಲ್ಡ್ ಪಿಂಟೊ ವಂದಿಸಿದರು. ರೀನಾ ಡಿಸೋಜ, ಲವೀನಾ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))