ಈ ಬಾರಿಯೂ ಮತದಾರರು ನನ್ನ ಕೈ ಬಿಡಲ್ಲ

| Published : May 13 2024, 01:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಜನರ ಸಮಸ್ಯೆ ಆಲಿಸಿ, ಪರಿಹರಿಸುವುದು ನಮ್ಮ ಪ್ರಥಮ ಆಧ್ಯತೆಯಾಗಿದೆ ಎಂದು ಚಿಕ್ಕೋಡಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಹೇಳಿದರು. ಯಕ್ಸಂಬಾ ಪಟ್ಟಣದಲ್ಲಿ ಭಾನುವಾರ ಜನಸಂಪರ್ಕ ಸಭೆ (ಜನತಾ ದರ್ಶನ) ಆಯೋಜಿಸಿ ಕ್ಷೇತ್ರದ ವಿವಿಧ ಕಡೆಯಿಂದ ಬಂದಿದ್ದ ಸಾರ್ವಜನಿಕರಿಂದ ಮನವಿ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಜನರ ಸಮಸ್ಯೆ ಆಲಿಸಿ, ಪರಿಹರಿಸುವುದು ನಮ್ಮ ಪ್ರಥಮ ಆಧ್ಯತೆಯಾಗಿದೆ ಎಂದು ಚಿಕ್ಕೋಡಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಹೇಳಿದರು. ಯಕ್ಸಂಬಾ ಪಟ್ಟಣದಲ್ಲಿ ಭಾನುವಾರ ಜನಸಂಪರ್ಕ ಸಭೆ (ಜನತಾ ದರ್ಶನ) ಆಯೋಜಿಸಿ ಕ್ಷೇತ್ರದ ವಿವಿಧ ಕಡೆಯಿಂದ ಬಂದಿದ್ದ ಸಾರ್ವಜನಿಕರಿಂದ ಮನವಿ ಸ್ವೀಕರಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 5 ವರ್ಷಗಳಿಂದ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಸಂಸದನಾಗಿ ಕೆಲಸ ಮಾಡಲು ಕ್ಷೇತ್ರದ ಜನರ ಸಹಕಾರವೇ ಕಾರಣ. ಆದ್ದರಿಂದ ಅವರ ಸೇವೆ ಮಾಡಲು ತಾನು ಸದಾ ಸಿದ್ದವಿರುವುದಾಗಿ ಹೇಳಿದರು.ಈ ಸಲದ ಚುನಾವಣೆಯಲ್ಲಿಯೂ ಸಹ ಮತದಾರರು ನನ್ನ ಕೈ ಬಿಡುವುದಿಲ್ಲ ಎಂಬ ವಿಶ್ವಾಸವಿದೆ. ಮತದಾನದ ಬಳಿಕ ಜನರು ನನ್ನೊಂದಿಗೆ ಮತದಾನದ ಕುರಿತು ಚರ್ಚಿಸಿ ಗೆಲ್ಲುವ ನಿರೀಕ್ಷೆ ಹೇಳಿಕೊಂಡಿದ್ದಾರೆ. ಈ ಸಲ ಮತ್ತೆ ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಜನರು ತಮ್ಮ ಕ್ಷೇತ್ರದಲ್ಲಿ ಆಗಬೇಕಾದ ಕೆಲಸ ಹಾಗೂ ಆಯುಷ್ಮಾನ್‌ ಯೋಜನೆಯಡಿ ವೈದ್ಯಕೀಯ ಸೌಲಭ್ಯಕ್ಕಾಗಿ ಅವರು ನೀಡಿರುವ ಅಹವಾಲು ಸ್ವೀಕರಿಸಿ ತಮ್ಮ ಕೆಲಸಗಳನ್ನು ಮಾಡಿ ಕೊಡುವ ಭರವಸೆ ನೀಡಿದರು.ಬಸವಜ್ಯೋತಿ ಯುಥ್ ಪೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಹಾಗೂ ಬಿಜೆಪಿ ಕಾರ್ಯಕರ್ತರು, ಪಕ್ಷದ ಪದಾಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು.ಕೋಟ್‌

ಈ ಸಲದ ಚುನಾವಣೆಯಲ್ಲಿಯೂ ಸಹ ಮತದಾರರು ನನ್ನ ಕೈ ಬಿಡುವುದಿಲ್ಲ ಎಂಬ ವಿಶ್ವಾಸವಿದೆ. ಮತದಾನದ ಬಳಿಕ ಜನರು ನನ್ನೊಂದಿಗೆ ಮತದಾನದ ಕುರಿತು ಚರ್ಚಿಸಿ ಗೆಲ್ಲುವ ನಿರೀಕ್ಷೆ ಹೇಳಿಕೊಂಡಿದ್ದಾರೆ. ಈ ಸಲ ಮತ್ತೆ ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸವಿದೆ.ಅಣ್ಣಾಸಾಹೇಬ್‌ ಜೊಲ್ಲೆ, ಚಿಕ್ಕೋಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ