ಸಾರಾಂಶ
ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ನಡೆಸುವಲ್ಲಿ ಪಂಚ ಗ್ಯಾರಂಟಿ ಯೋಜನೆ ಮೂಲಕ ಜನರಿಗೆ ಅವಕಾಶ ಒದಗಿಸಿದ್ದು ಸ್ವಾಗತಾರ್ಹ. ಆದರೆ ಮೂರು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿಯಾಗದೇ ತೀವ್ರ ಹಿಂದುಳಿಯುವಂತಾಗಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಸರ್ಕಾರದ ವಿರುದ್ಧ ತೀಕ್ಷ್ಣವಾಗಿ ಹರಿಹಾಯ್ದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ನಡೆಸುವಲ್ಲಿ ಪಂಚ ಗ್ಯಾರಂಟಿ ಯೋಜನೆ ಮೂಲಕ ಜನರಿಗೆ ಅವಕಾಶ ಒದಗಿಸಿದ್ದು ಸ್ವಾಗತಾರ್ಹ. ಆದರೆ ಮೂರು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿಯಾಗದೇ ತೀವ್ರ ಹಿಂದುಳಿಯುವಂತಾಗಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಸರ್ಕಾರದ ವಿರುದ್ಧ ತೀಕ್ಷ್ಣವಾಗಿ ಹರಿಹಾಯ್ದರು.ಬನಹಟ್ಟಿ ಬಸ್ ನಿಲ್ದಾಣದಲ್ಲಿ ಸೋಮವಾರ ಶಕ್ತಿ ಯೋಜನೆಯಡಿ ೫೦೦ ಕೋಟಿ ಮಹಿಳಾ ಪ್ರಯಾಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಕ್ತಿ ಯೋಜನೆ ಚುನಾವಣೆಗೂ ಮೊದಲ ಕೊಟ್ಟ ಭರವಸೆಗಳು ಜನತೆಗೆ ಪೂರಕವಾಗುವ ದೃಷ್ಟಿಕೋನ ಸ್ವಾಗತಾರ್ಹ. ಸಾರಿಗೆಯಲ್ಲಿ ಉಚಿತ ಪ್ರಯಾಣ ಒಂದು ಸಾಧನೆಯಾಗಿದೆ. ಕಡುಬಡವರಿಗಾಗಿ ಒಂದೇ ಒಂದು ಮನೆ ನಿರ್ಮಾಣ ಮಾಡುವತ್ತ ಇಂದಿನ ಆಡಳಿತ ಅವಧಿಯಲ್ಲಿ ಸಾಧ್ಯವಾಗಿಲ್ಲವೆಂದು ಸವದಿ ಬೇಸರ ವ್ಯಕ್ತಪಡಿಸಿದರು.
ಪಂಚ ಗ್ಯಾರಂಟಿ ಯೋಜನೆಯ ಆರ್ಥಿಕ ಹೊರೆಯ ಬಗ್ಗೆ ಜನತೆಗೆ ಮನವರಿಕೆ ಮಾಡುತ್ತ, ದೈನಂದಿನ ವಸ್ತುಗಳ ಮೇಲೂ ಸಾಕಷ್ಟು ತೆರಿಗೆ ವಿಧಿಸುವ ಮೂಲಕ ಗ್ಯಾರಂಟಿ ಹಣ ಹೊಂದಾಣಿಕೆ ಮಾಡಲು ಹೆಣಗಾಡುತ್ತಿರುವ ಸರ್ಕಾರ ಅಭಿವೃದ್ಧಿಗಾಗಿ ಯಾವುದೇ ಹಣ ಮೀಸಲಿಡದಿರುವುದು ವಿಪರ್ಯಾಸ. ಇನ್ನೆರಡು ವರ್ಷಗಳ ಕಾಲ ಗ್ಯಾರಂಟಿಯ ನೆಪ ಹೇಳುತ್ತ ಯಾವದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಲೂಟಿ ಸರ್ಕಾರ ಕಾಲಹರಣ ಮಾಡುವುದು ಖಚಿತ ಎಂದು ಸವದಿ ಟೀಕಿಸಿದರು.ಸಾರಿಗೆ ನಿಯಂತ್ರಿಕರಾದ ಗಿರೀಶ ಮರನೂರ, ಆನಂದ ಮೈಗೂರ, ರಾಚಪ್ಪ ಹಿಪ್ಪರಗಿ, ಮಲ್ಲಿಕಾರ್ಜುನ ಬೋಲರಡ್ಡಿ, ರಮೇಶ ಮಹಿಷವಾಡಗಿ, ಸಚಿನ್ ಕ್ಷೀರಸಾಗರ, ನದಾಫ್ ಸೇರಿದಂತೆ ಅನೇಕರಿದ್ದರು.