ಈಗ್ಲೂ ನಮಗೆ ಸಿದ್ದರಾಮಯ್ಯರೇ ಸಿಎಂ, ಸುಪ್ರೀಂ ಕೋರ್ಟ್‌ಗೆ ಹೋಗ್ತೀವಿ

| Published : Sep 25 2024, 12:51 AM IST

ಈಗ್ಲೂ ನಮಗೆ ಸಿದ್ದರಾಮಯ್ಯರೇ ಸಿಎಂ, ಸುಪ್ರೀಂ ಕೋರ್ಟ್‌ಗೆ ಹೋಗ್ತೀವಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಡಾ ನಿವೇಶನ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ತಡೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾ ಆದರೇನಂತೆ? ಸುಪ್ರೀಂ ಕೋರ್ಟ್‌ ಇದೆ, ನಾವು ಅಲ್ಲಿಗೆ ಹೋಗುತ್ತೇವೆ ಎಂದು ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಪ್ರಾಸಿಕ್ಯೂಷನ್‌ಗೆ ತಡೆ ವಿಚಾರ ಕಾನೂನಾತ್ಮಕವಾಗಿ ಫೇಸ್ ಮಾಡ್ತೀವಿ: ಸಚಿವ ಎಸ್‌.ಎಸ್.ಮಲ್ಲಿಕಾರ್ಜುನ ಹೇಳಿಕೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಮುಡಾ ನಿವೇಶನ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ತಡೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾ ಆದರೇನಂತೆ? ಸುಪ್ರೀಂ ಕೋರ್ಟ್‌ ಇದೆ, ನಾವು ಅಲ್ಲಿಗೆ ಹೋಗುತ್ತೇವೆ ಎಂದು ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಅನುಮಾನ ಬೇಡ, ನಾವು ಫೈಟ್ ಮಾಡುತ್ತೇವೆ. ನಾವು ಸ್ವಚ್ಛವಾಗಿದ್ದೇವೆ. ಪ್ರಾಮಾಣಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದಾರೆ. ಜಯಶೀಲರಾಗಿ ಬರುತ್ತೇವೆ. ಸದ್ಯಕ್ಕೆ ನೀವೇನೂ ಕ್ರಿಯೇಟ್ ಮಾಡಬೇಡಿ. ಈಗಲೂ ನಮಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ. ಅವರ ವ್ಯಕ್ತಿತ್ವಕ್ಕೆ ಕಪ್ಪುಚುಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ದೂರಿದರು.

ಸಿದ್ದರಾಮಯ್ಯ ಪರ ನಾವೆಲ್ಲರೂ ನಿಲ್ಲುತ್ತೇವೆ. ಬುಧವಾರವಿಂದು ಬೆಳಗ್ಗೆ ಕ್ಯಾಬಿನೆಟ್ ಸಭೆ ಇದೆ. ಅಲ್ಲಿ ನಾವು ಚರ್ಚೆ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಆದರೆ, ನಾವು ಕೇ‍ಳಿದವರ ವಿರುದ್ಧ ಪ್ರಾಸಿಕ್ಯೂಷನ್ ಜಾರಿ ಮಾಡಿಲ್ಲ. ಕೇವಲ ಕಾಂಗ್ರೆಸ್ಸಿನವರ ವಿರುದ್ಧ ಮಾತ್ರವೇ ಪ್ರಾಸಿಕ್ಯೂಷನ್ ಜಾರಿ ಮಾಡಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

- - - ಬಾಕ್ಸ್‌

* ಶಾಂತಿಗೆ ಭಂಗ ತಂದರೆ ಒಳ ಹಾಕ್ತೀವಿ ದಾವಣಗೆರೆ: ದಾವಣಗೆರೆಯಲ್ಲಿ 1991-1992 ರಿಂದಲೂ ಶಾಂತಿ, ಸಾಮರಸ್ಯ ಕಾಪಾಡಿಕೊಂಡು ಬಂದಿದ್ದು, ಯಾರೇ ಕಿಡಿಗೇಡಿಗಳು ಇದಕ್ಕೆ ಭಂಗ ತರಲು ಪ್ರಯತ್ನಿಸಿದರೆ ಜಿಲ್ಲಾಡಳಿತ, ನಾವು ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಅಂತಹವರನ್ನು ಮುಲಾಜಿಲ್ಲದೇ ಒಳಗೆ ಹಾಕುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಎಚ್ಚರಿಸಿದರು.

ಜಿಲ್ಲಾ ಕೇಂದ್ರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಎಲ್ಲರೂ ಒಳ್ಳೆಯ ರೀತಿಯಿಂದ ಹಬ್ಬ ಮಾಡುವಂತೆ ಹೇಳುತ್ತೇವೆ. ಘಟನೆಯು ಸ್ವಲ್ಪ ಹೊಗೆ ಆಡುತ್ತಿರುವಾಗಲೇ ಬೆಂಕಿ ಕೆರೆಯುವುದು, ಸೀಮೆಣ್ಣೆ ಹಾಕುವುದು ಯಾರೂ ಮಾಡಬಾರದು. ಯಾರೇ ಕಿಡಿಗೇಡಿಗಳೂ ಶಾಂತಿ, ಸಾಮರಸ್ಯಕ್ಕೆ ಧಕ್ಕೆ ತಂದರೆ ಕಠಿಣ ಕ್ರಮ ನಿಶ್ಚಿತ ಎಂದು ಪುನರುಚ್ಛರಿಸಿದರು.

- - - -24ಕೆಡಿವಿಜಿ5, 6: ಎಸ್.ಎಸ್.ಮಲ್ಲಿಕಾರ್ಜುನ