ಸಾರಾಂಶ
ರಂಗತೋರಣ ಸಂಸ್ಥೆ ರಂಗಕಲೆಗಳನ್ನು ಉಳಿಸುವ ದಿಸೆಯಲ್ಲಿ ನಿರಂತರ ನಾಟಕೋತ್ಸವ ಆಯೋಜಿಸುವ ಮೂಲಕ ರಂಗಪ್ರೇಮ ಮೆರೆಯುತ್ತಿದೆ ಎಂದು ಹಿರಿಯ ಮುಖಂಡ ಕೆ.ಎ. ರಾಮಲಿಂಗಪ್ಪ ಹೇಳಿದರು.
ಬಳ್ಳಾರಿ: ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ರಂಗಭೂಮಿಯ ಆಸಕ್ತಿ ಹಾಗೂ ಅಭಿರುಚಿ ಉಳಿದಿದೆ ಎಂದು ಹಿರಿಯ ಮುಖಂಡ ಕೆ.ಎ. ರಾಮಲಿಂಗಪ್ಪ ತಿಳಿಸಿದರು.
ಕಪ್ಪಗಲ್ಲು ಗ್ರಾಮದಲ್ಲಿ ಸೆ. 5ರಿಂದ 8ರ ವರೆಗೆ ನಡೆಯುತ್ತಿರುವ ಕಪ್ಪಗಲ್ಲು ನಾಟಕೋತ್ಸವದ ಎರಡನೇ ದಿನದ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.ರಂಗತೋರಣ ಸಂಸ್ಥೆ ರಂಗಕಲೆಗಳನ್ನು ಉಳಿಸುವ ದಿಸೆಯಲ್ಲಿ ನಿರಂತರ ನಾಟಕೋತ್ಸವ ಆಯೋಜಿಸುವ ಮೂಲಕ ರಂಗಪ್ರೇಮ ಮೆರೆಯುತ್ತಿದೆ.
ನಗರ ಪ್ರದೇಶಗಳಲ್ಲಿ ಸೀಮಿತಗೊಳ್ಳುತ್ತಿರುವ ನಾಟಕೋತ್ಸವವನ್ನು ಕಪ್ಪಗಲ್ಲು ಗ್ರಾಮದಲ್ಲಿ ಆಯೋಜಿಸುತ್ತಿರುವ ರಂಗತೋರಣ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎ. ಬಸವನಗೌಡ, ನಿವೃತ್ತ ಅಧಿಕಾರಿ ಬಿ. ಕಟ್ಟೇಗೌಡ, ಗ್ರಾಮದ ಮುಖಂಡರಾದ ದ್ಯಾವಣ್ಣ, ಕೋರಿಬಸಪ್ಪ, ಉಪ್ಪಾರ ಬಸವರಾಜ, ಗೋವಿಂದಪ್ಪ, ವೀರೇಶ ಹಾಗೂ ಖ್ಯಾತ ಕಲಾವಿದೆ ಪದ್ಮಶ್ರೀ ಮಂಜಮ್ಮ ಜೋಗತಿ ಅವರು ನಾಟಕ ವೀಕ್ಷಿಸಲು ಬಂದು ವೇದಿಕೆಯಲ್ಲಿದ್ದರು.ಸನ್ಮಾರ್ಗ ಕನ್ನಡ ಬಂಧು ಚಂದ್ರಶೇಖರ ಆಚಾರ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಮೆಹತಾಬ್ ಸರ್ ಕಾರ್ಯಕ್ರಮ ನಿರೂಪಿಸಿದರು. ಕಪ್ಪಗಲ್ಲು ನಾಟಕೋತ್ಸವ ಸಂಚಾಲಕ ಅನಿಲಕುಮಾರ ಅಂಗಡಿ ಇದ್ದರು.
ಕಾರ್ಯಕ್ರಮದ ನಂತರ ಗದುಗಿನ ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂಡಿತ ಪುಟ್ಟರಾಜ ಗವಾಯಿಗಳ ಕಂಪನಿಯಿಂದ ‘ಗಡಗಿ ಜ್ವಾಕಿ ತಂಗಿ’ ಎನ್ನುವ ಸುಂದರ ಸಾಮಾಜಿಕ ನಡೆಯಿತು. ವಿಜಯಪುರದ ಹಾನಗಲ್ ಕುಮಾರೇಶ್ವರ ನಾಟ್ಯ ಸಂಘದ ರಂಗ ಸಜ್ಜಿಕೆಯಿಂದ ನಾಟಕ ಪೂರ್ಣ ಕಳೆಗಟ್ಟಿತ್ತು. ಸ್ವಲ್ಪ ಮಳೆ ಬಂದರೂ ಜನ ಕದಲದೇ ನಾಟಕ ಪೂರ್ಣ ನೋಡಿದ ಗ್ರಾಮಸ್ಥರ ಕಲಾಭಿರುಚಿಗೆ ಸಾಕ್ಷಿಯಾಗಿತ್ತು.