ಸಾರಾಂಶ
ಬಿಡುವಿಲ್ಲದೆ ದಿನಪೂರ್ತಿ ಕೆಲಸ ಮಾಡುವವರನ್ನು ಗಮನದಲ್ಲಿಟ್ಟುಕೊಂಡು ಸಂಜೆ ಕೆಲಸ ಮುಗಿಸಿದ ನಂತರ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಕುವೆಂಪು ರಸ್ತೆ ನಂಜಪ್ಪ ಆಸ್ಪತ್ರೆಯಲ್ಲಿ ಸಂಜೆ ಕ್ಲಿನಿಕ್ ಸೌಲಭ್ಯವು ಪ್ರಾರಂಭವಾಗಿದೆ.
ಶಿವಮೊಗ್ಗ: ಬಿಡುವಿಲ್ಲದೆ ದಿನಪೂರ್ತಿ ಕೆಲಸ ಮಾಡುವವರನ್ನು ಗಮನದಲ್ಲಿಟ್ಟುಕೊಂಡು ಸಂಜೆ ಕೆಲಸ ಮುಗಿಸಿದ ನಂತರ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಕುವೆಂಪು ರಸ್ತೆ ನಂಜಪ್ಪ ಆಸ್ಪತ್ರೆಯಲ್ಲಿ ಸಂಜೆ ಕ್ಲಿನಿಕ್ ಸೌಲಭ್ಯವು ಪ್ರಾರಂಭವಾಗಿದೆ. ಪ್ರತಿ ದಿನ ಮಧ್ಯಾಹ್ನ 3 ರಿಂದ ರಾತ್ರಿ 8 ಗಂಟೆಯವರೆಗೆ ನುರಿತ ವೈದ್ಯರು ಸಮಾಲೋಚನೆಗೆ ಲಭ್ಯರಿರುತ್ತಾರೆ. ಬೆಳಗಿನ ವೇಳೆಯಲ್ಲಿ ಸಮಯದ ಅಭಾವ ಇರುವ ಕಾರಣ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗದೇ ಇರುವವರನ್ನು ಗಮನದಲ್ಲಿಟ್ಟುಕೊಂಡು ನಂಜಪ್ಪ ಆಸ್ಪತ್ರೆ, ಈ ವಿಶೇಷವಾದಂತಹ ಸಂಜೆ ಕ್ಲಿನಿಕ್ ಸೌಲಭ್ಯವನ್ನು ಪ್ರಾರಂಭಗೊಳಿಸಿದೆ. ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳಲು ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.08182-268000, 223967 ಅನ್ನು ಸಂಪರ್ಕಿಸಬಹುದು.