ಗಣಪತಿಯ ಒಂದೊಂದು ಅಂಗವೂ ಹಿಂದುತ್ವದ ಶಕ್ತಿ: ರವೀಂದ್ರ

| Published : Sep 09 2024, 01:32 AM IST

ಸಾರಾಂಶ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ೫೮ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ನಡೆಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಜಗತ್ತು ಉಳಿಯಲು ಹಿಂದುತ್ವ ಉಳಿಯಲೇ ಬೇಕು. ಇದನ್ನು ಉಳಿಸಲು ನಮಗೆ ಗಣಪತಿಯೇ ಬುದ್ಧಿ ಕೊಡಬೇಕು. ಗಣಪತಿಯ ಒಂದೊಂದು ಅಂಗವು ಹಿಂದುತ್ವದ ಶಕ್ತಿಯಾಗಿದೆ. ಈ ನಿಟ್ಟಿನಲ್ಲಿ ಬಾಲಗಂಗಾಧರ ತಿಲಕರು ಸ್ವಾತಂತ್ರ‍್ಯದ ಕಿಚ್ಚನ್ನು ಹರಡಲು ಗಣೇಶೋತ್ಸವನ್ನು ಸಾರ್ವಜನಿಕವಾಗಿ ಆಚರಿಸಿದ್ದರು ಎಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಅಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ. ಹೇಳಿದರು.ಅವರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆಯುವ ೫೮ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದಲ್ಲಿ ಭಗವಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಈ ವರ್ಷ ೧೪೦ ಕೋಟಿ ಭಾರತೀಯರ ಕನಸು ಸಾಕಾರಗೊಳಿಸಿದ ವರ್ಷ. ಅಯೋಧ್ಯೆಯಲ್ಲಿ ಶ್ರೀ ರಾಮನ ಮಂದಿರ ಸಾಕಾರಗೊಂಡಿದೆ. ಇನ್ನಷ್ಟು ಹಿಂದು ಮಂದಿರಗಳು ಇನ್ನೂ ಉಳಿದಿದೆ. ನಾವು ಎಲ್ಲಿಗೆ ತಲುಪಬೇಕೋ ಅಲ್ಲಿಗೆ ತಲುಪಬೇಕು. ಇನ್ನು ನಮ್ಮನ್ನು ಮುಟ್ಟಲು ಬಂದರೆ ದೇವರ ಕೈಯಲ್ಲಿ ಆಯುಧ ಯಾಕೆ ಕೊಟ್ಟದು ಎಂದು ನೆನಪಿಸಬೇಕು ಎಂದರು. ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ಶ್ರೀ ಗಣೇಶನ ವಿಗ್ರಹ ಪ್ರತಿಷ್ಠೆ ಮಾಡುವ ಮೂಲಕ ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆ ನೀಡಿದರು.ಈ ಸಂದರ್ಭ ಗಣೇಶೋತ್ಸ ಸಮಿತಿ ಗೌರವಾಧ್ಯಕ್ಷ ಡಾ. ಎಂ.ಕೆ. ಪ್ರಸಾದ್, ಅಧ್ಯಕ್ಷ ಸುಜೀಂದ್ರ ಪ್ರಭು, ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು, ವಿಶ್ವನಾಥ ಗೌಡ ಬನ್ನೂರು, ಜೊತೆ ಕಾರ್ಯದರ್ಶಿ ನೀಲಂತ್ ಬೊಳುವಾರು, ಕೋಶಾಧಿಕಾರಿ ಶ್ರೀನಿವಾಸ ಮೂಲ್ಯ, ವಿಶ್ವಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಪ್ರಖಂಡ ಅಧ್ಯಕ್ಷ ದಾಮೋದರ್ ಪಾಟಾಳಿ, ಬಜರಂಗದಳದ ಹರೀಶ್ ದೋಳ್ಪಾಡಿ, ಉದಯ ಎಚ್., ಸುಧೀರ್ ಶೆಟ್ಟಿ, ರಾಜೇಶ್ ಬನ್ನೂರು, ರಾಮಚಂದ್ರ ಕಾಮತ್, ವಿದ್ಯಾ ಗೌರಿ, ಅಜಿತ್ ರೈ ಹೊಸಮನೆ, ರೂಪೇಶ್, ಕಿರಣ್ ಶಂಕರ್ ಮಲ್ಯ, ವಿಶ್ವನಾಥ ನಾಕ್ ಹಾರಾಡಿ, ಮಾದವ ಪೂಜಾರಿ, ವಿಶ್ವನಾಥ ಕುಲಾಲ್, ದಿನೇಶ್ ಪಂಜಿಗ, ಪೂವಪ್ಪ, ಸುಜೀರ್ ಕುಮಾರ್, ಮಲ್ಲೇಶ್ ಆಚಾರ್ಯ, ಚಂದ್ರಶೇಖರ್, ಗೋಪಾಲಕೃಷ್ಣ, ಗೋಪಾಲ್ ನಾಯ್ಕ್‌, ದೇವಿಪ್ರಸಾದ್ ಮಲ್ಯ, ಶ್ರೀಧರ ಪಟ್ಲ, ದಯಾನಂದ, ನಾಗೇಶ್ ಟಿ.ಎಸ್., ರಾಮಕೃಷ್ಣ, ಅಪ್ಪಯ್ಯ ಮಣಿಯಾಣಿ, ಚಂದ್ರಶೇಖರ್ ರಾವ್ ಬಪ್ಪಳಿಗೆ ಮತ್ತಿತರರು ಉಪಸ್ಥಿತರಿದ್ದರು.ಹಿರಿಯರಾದ ರಾಮಚಂದ್ರ ಕಾಮತ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಗರಸಭೆ ಮಾಜಿ ಉಪಾಧ್ಯಕ್ಷೆ ವಿದ್ಯಾ ಗೌರಿ ಸ್ವಾಗತಿಸಿದರು. ಪೂವಪ್ಪ ನಾಯ್ಕ್ ವಂದಿಸಿದರು.