ಕನ್ನಡಪ್ರಭ ವಾರ್ತೆ ದೇವನಹಳ್ಳಿ
ಪ್ರತಿಯೊಬ್ಬ ಪತ್ರಕರ್ತರ ನಡೆ- ನುಡಿ ಎಲ್ಲವನ್ನೂ ಸಾರ್ವಜನಿಕರು ಗಮನಿಸುತ್ತಿರುತ್ತಾರೆ, ಸಾಧ್ಯವಾದರೆ ಧನಾತ್ಮಕವಾಗಿ ಸ್ಫೂರ್ತಿಯಾಗಬೇಕೆ ಹೊರತು ದುರ್ನಡತೆಗೆ ಪ್ರೇರಣೆಯಾಗಬಾರದು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಹೇಳಿದರು.ದೇವನಹಳ್ಳಿ ಪಟ್ಟಣದ ಸೂಲಿಬೆಲೆ ರಸ್ತೆಯಲ್ಲಿರುವ ಬ್ರಿಗೇಡ್ ಆರ್ಚಡ್ಸ್ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ೨೦೨೫- ೨೦೨೮ನೇ ಸಾಲಿಗೆ ಆಯ್ಕೆಯಾದ ನೂತನ ಪದಾಧಿಕಾರಿಗಳು ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರ ಪದವಿ ಸ್ವೀಕಾರ ಸಮಾರಂಭವನ್ನುಉದ್ಘಾಟಿಸಿ ಮಾತನಾಡಿದರು.
ರಾಜ್ಯಾದ್ಯಂತ ಪದಗ್ರಹಣ ಸಮಾರಂಭಗಳಿಗೆ ಪ್ರವಾಸ ಮಾಡಿದ್ದೇನೆ, ಇತರೆ ಜಿಲ್ಲೆಗಳಲ್ಲಿ ಸೋಲು- ಗೆಲುವು ಸಮಾನವಾಗಿ ಸ್ವೀಕರಿಸಿದ್ದಾರೆ, ಆದರೆ ಬೆಂಗಳೂರು ಗ್ರಾಮಾಂತರದಲ್ಲಿ ಇನ್ನೂ ಸೋಲಿನ ನೋವು ಮಾಸಿಲ್ಲ, ಭಿನ್ನಾಭಿಪ್ರಾಯಗಳಿಂದ ಎದ್ದು ಕಾಣುತ್ತಿದೆ. ಇವೆಲ್ಲಾ ಆದಷ್ಟು ಬೇಗ ಸರಿಪಡಿಸಿಕೊಳ್ಳಿ, ಚುನಾವಣೆಯ ಮುಂಚೆ ಗುಂಪುಗಾರಿಕೆ ಇದ್ದರೂ ಚುನಾವಣೆಯ ನಂತರ ಎಲ್ಲರೂ ಸಂಘದ ಅಡಿಯಲ್ಲೇ ಬರುತ್ತಾರೆ, ಸಂಘದ ಯಾವುದೇ ಕಾರ್ಯ ಚಟುವಟಿಕೆಗಳಲ್ಲಿ ಒಗ್ಗಟ್ಟಾಗಿ ಭಾಗಿಯಾಗಿ ಸಹಕಾರದಿಂದ ಸಂಘವನ್ನು ಮುನ್ನಡೆಸಿ ಎಂದು ಸಲಹೆ ನೀಡಿ, ಬೀದರ್ ಸಮಾವೇಶವು ಮುಖ್ಯಮಂತ್ರಿಗಳ ದಿನಾಂಕ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದರು.ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ದೇವನಹಳ್ಳಿ ತಾಲೂಕಿನಲ್ಲಿ ಪತ್ರಕರ್ತರು ಇದೇ ಮೊದಲ ಬಾರಿಗೆ ಕ್ರೀಡೆ ಆಯೋಜಿಸಿದ್ದು, ಕ್ರೀಡೆಗಳಲ್ಲಿ ಸೋಲು- ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳಬೇಕು, ಇಂತಹ ಕ್ರೀಡಾಕೂಟಗಳು ಮುಂದೆಯೂ ಸಹ ಇನ್ನೂ ಹೆಚ್ಚಾಗಿ ನಡೆಯಲಿ, ತಮ್ಮ ಒತ್ತಡದ ಕಾರ್ಯ ಚಟುವಟಿಕೆಯ ನಡುವೆಯೂ ಆರೋಗ್ಯದ ಕಡೆ ಗಮನ ನೀಡಲು ಇಂತಹ ದೈಹಿಕ ಕ್ರೀಡೆಗಳಲ್ಲಿ ಹೆಚ್ಚಾಗಿ ಭಾಗವಹಿಸಿ ಎಂದರು.
ಜಿಲ್ಲಾಧ್ಯಕ್ಷ ಜಿ. ಶ್ರೀನಿವಾಸ್ ಮಾತನಾಡಿ, ಸಂಘದ ಸದಸ್ಯರೆಲ್ಲರೂ ಸ್ಪರ್ಧಾ ಮನೋಭಾವದಿಂದ ಆಟವಾಡಿದ್ದಾರೆ, ಎಲ್ಲಾ ಸದಸ್ಯರಿಗೂ ಅಭಿನಂದನೆಗಳು ಹಾಗೂ ಮುಂದಿನ ದಿನಗಳಲ್ಲಿಯೂ ಸಹ ಒಗ್ಗಟ್ಟಾಗಿ ಸಂಘದ ಬೆಳವಣಿಗೆಗೆ ಶ್ರಮಿಸಬೇಕು ಎಂದು ಹೇಳಿದರು.
೨೦೨೫- ೨೦೨೮ನೇ ಸಾಲಿಗೆ ಆಯ್ಕೆಯಾದ ನೂತನ ಪದಾಧಿಕಾರಿಗಳು ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಪದವಿ ಸ್ವೀಕಾರ ಮಾಡಿದರು.
ಕ್ರಿಕೆಟ್ ಪಂದ್ಯಾವಳಿಯಲ್ಲಿ ಶಿಕ್ಷಕರ ವರ್ಗಕ್ಕೆ ಪ್ರಥಮ ಬಹುಮಾನ ,ಬೆಸ್ಕಾಂ ಇಲಾಖೆಗೆ ದ್ವಿತೀಯ ಬಹುಮಾನ, ಗುಂಡು ಎಸೆತದಲ್ಲಿ ಪ್ರಥಮ: ಮಲ್ಲೇನಹಳ್ಳಿ ವಿನಯ್, ದ್ವಿತೀಯ: ಮಂಜುನಾಥ್ ಡಿ.ಕೆ ., ತೃತೀಯ: ವಿನಯ್. ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪ್ರಥಮ ವಿನಯ್, ದ್ವಿತೀಯ ಜಗದೀಶ್ . ಕೇರಂ ಆಟದಲ್ಲಿ ಪ್ರಥಮ ಕೆಂಪೇಗೌಡ, ದ್ವಿತೀಯ ಹರೀಶ್, ಲೆಮನ್ ಆ್ಯಂಡ್ ಸ್ಪೂನ್ ಸ್ಪರ್ಧೆಯಲ್ಲಿ ಪ್ರಥಮ: ಮಂಜುನಾಥ್ ಬಿ. ಎಲ್., ದ್ವಿತೀಯ: ಮಂಜುನಾಥ್ ಡಿ.ಕೆ.. ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಪ್ರಥಮ ಅಶ್ವಿನಿ, ದ್ವಿತೀಯ ನಿರ್ಮಲ. ಎನ್. ವಿಜೇತ ಸ್ಪರ್ಧಾಳುಗಳಿಗೆ ಮುಖ್ಯ ಅತಿಥಿಗಳು ಪ್ರಶಸ್ತಿ ಪ್ರದಾನ ಮಾಡಿದರು.ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಸಿ .ಜಗನ್ನಾಥ್, ಪ್ರಧಾನ ಕಾರ್ಯದರ್ಶಿ ರಮೇಶ್, ರಾಜ್ಯ ಸಮಿತಿ ಸದಸ್ಯ ಮಂಜುನಾಥ್, ಖಜಾಂಚಿ ಮುನಿರಾಜು, ಚುನಾವಣಾಧಿಕಾರಿಯಾದ ಹೊನ್ನಮ್ಮ, ಕ್ರೀಡಾ ಆಯೋಜಕರಾದ ವಿನಯ್ ಮತ್ತು ಜಗದೀಶ್, ಉಪಾಧ್ಯಕ್ಷರು, ನಿರ್ದೇಶಕರು ಮತ್ತು ಪದಾಧಿಕಾರಿಗಳು, ಸದಸ್ಯರು ಭಾಗಿಯಾಗಿದ್ದರು.
--------ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತ ಸ್ಪರ್ಧಾಳುಗಳಿಗೆ ಮುಖ್ಯ ಅತಿಥಿಗಳು ಪ್ರಶಸ್ತಿ ಪ್ರದಾನ ಮಾಡಿದರು.