ಪ್ರತಿಯೊಬ್ಬ ವ್ಯಕ್ತಿಯ ಒಳಗೆ ಅದ್ಭುತ ಶಕ್ತಿಯಿದೆ: ಪಟ್ಟಡ ಶಿವಕುಮಾರ್

| Published : Sep 22 2024, 01:54 AM IST

ಪ್ರತಿಯೊಬ್ಬ ವ್ಯಕ್ತಿಯ ಒಳಗೆ ಅದ್ಭುತ ಶಕ್ತಿಯಿದೆ: ಪಟ್ಟಡ ಶಿವಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

1855ನೇ ವದ್ಯವರ್ಜನ ಶಿಬಿರ ಎಲ್ಲರ ಸಹಕಾರ ಮತ್ತು ಸಹಭಾಗಿತ್ವದೊಂದಿಗೆ ಯಶಸ್ವಿಯಾಗಿ ನಡೆಯುತ್ತಿದೆ. ಉಪನ್ಯಾಸಕರಾದ ಪಟ್ಟಡ ಶಿವಕುಮಾರ್‌ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ಕನ್ನಡ ಪ್ರಭ ವಾರ್ತೆ ನಾಪೋಕ್ಲು

ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಮಡಿಕೇರಿ ತಾಲೂಕು ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಬೆಟ್ಟಗೇರಿ ವಲಯದ ಕಾರುಗುಂದ ಗ್ರಾಮದ ಗೌಡ ಸಮಾಜದಲ್ಲಿ ನಡೆಯುತ್ತಿರುವ 1855ನೇ ಮದ್ಯವರ್ಜನ ಶಿಬಿರ ಎಲ್ಲರ ಸಹಕಾರ ಮತ್ತು ಸಹಭಾಗಿತ್ವದೊಂದಿಗೆ ಯಶಸ್ವಿಯಾಗಿ ನಡೆಯುತ್ತಿದೆ.

5ನೇ ದಿನದ ಗುಂಪು ಸಲಹೆ ಕಾರ್ಯಕ್ರಮದಲ್ಲಿ ಚಾಮರಾಜ ಜೋಡಿ ರಸ್ತೆ ಮೈಸೂರು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾದ ಪಟ್ಟಡ ಶಿವಕುಮಾರ್ ಶನಿವಾರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ಒಳಗೆ ಅದ್ಭುತ ಶಕ್ತಿಯಿದೆ. ಅದನ್ನು ಅರಿತು ಕಾರ್ಯೋನ್ಮುಖವಾದರೆ ಅಭಿವೃದ್ಧಿ ಹೊಂದಲು ಸಾಧ್ಯ. ಆದರೆ ಮದ್ಯ ವ್ಯಸನಿಗಳು ಮದ್ಯದಲ್ಲಿ ಶಕ್ತಿಯಿದೆ ಎಂಬ ಭ್ರಮೆಯಿಂದ ಜೀವನ ಹಾಳು ಮಾಡಿಕೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟರು. ಮದ್ಯ ಬಿಡುವವರು ಕುಂಟು ನೆಪಗಳನ್ನು ಹೇಳುತ್ತ ಮುಂದಕ್ಕೆ ಹಾಕುವ ಬದಲು ತಕ್ಷಣವೇ ಮದ್ಯ ತ್ಯಜಿಸಿ, ತಮ್ಮ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಿ ಬದುಕಿ ಎಂದು ಶಿಬಿರಾರ್ಥಿಗಳಿಗೆ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬಿದರು.

ಕಾರ್ಯಕ್ರಮದಲ್ಲಿ ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಗೌರವ ಅಧ್ಯಕ್ಷ ಟಿ. ಎಂ. ಅಯ್ಯಪ್ಪ, ಕಾರ್ಯಾಧ್ಯಕ್ಷ ಬೆಳ್ಯನ ರವಿ, ಶಿಬಿರಾಧಿಕಾರಿ ಪಟ್ಟಡ ನಂದಕುಮಾರ್, ರಾಜ ರಾಜೇಶ್ವರಿ ವಿದ್ಯಾಲಯದ ಮುಖ್ಯೋಪಾಧ್ಯಾಯ ಕುದುಪಜೆ ಕವನ್‌ ಮತ್ತಿತರರು ಉಪಸ್ಥಿತರಿದ್ದು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.