ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಗ್ರಾಮಿಣ ಭಾಗದ ಬಡ ಮಕ್ಕಳ ಕಲಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಓತ್ತು ನೀಡಿ, ಪ್ರತಿ ವರ್ಷ ಒಂದು ಸರ್ಕಾರಿ ಶಾಲೆಯನ್ನು ದತ್ತುಪಡೆದು ಸಂಪೂರ್ಣ ಪುನರ್ ನಿರ್ಮಾಣ ಮಾಡುವ ಪಣ ತೊಟ್ಟಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಶಿರಾ ತಾಲೂಕು ಗೋಪಿಕುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯನ್ನು ತಮ್ಮ ಕ್ಷೇತ್ರಾನುದಾನ ಮತ್ತು ವೈಯಕ್ತಿಕ ಹಣದಿಂದ ಸುಮಾರು 14 ಕೊಠಡಿಗಳನ್ನು ನಿರ್ಮಿಸಿ ಸುಸಜ್ಜಿತ ಶೌಚಾಲವನ್ನು ನಿರ್ಮಿಸಲಾಗಿದೆ. ಶಾಲೆಯನ್ನು ತಮ್ಮ ಜನ್ಮ ದಿನದಂದು (ಫೆ.03) ಲೋಕಾರ್ಪಣೆ ಮಾಡಲಾಗುವುದು ಎಂದರು. ಶಿರಾ ತಾಲೂಕಿನಲ್ಲಿ ಸಮಾಜಮುಖಿ ಕೆಲಸಮಾಡುವ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಓತ್ತು ನೀಡಲಾಗಿದೆ, ಫೆ. 3 ರಂದು ಬರಗೂರು ಬಸ್ ನಿಲ್ದಾಣದಿಂದ ಗೋಪಿಕುಂಟೆ ಗ್ರಾಮದ ವರೆಗೂ ಸುಮಾರು 2 ಕಿ.ಮೀ. ಶಾರದಾಂಬೆ ಬೆಳ್ಳಿ ರಥದ ಮೆರವಣೆಗೆ ಮೂಲಕ ಸಂಚಾರಿಸಿ ವೇದಿಕೆ ಸೇರಿ ಸರ್ಕಾರಿ ಶಾಲೆ ಉದ್ಟಾಟನಾ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.ಮಾಜಿ ತಾ.ಪಂ. ಸದಸ್ಯರಾದ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ ಮಾತನಾಡಿ ವಿಧಾನಪರಿಷತ್ ಸದಸ್ಯರಾದ ಚಿದಾನಂದ್ ಎಂ.ಗೌಡ ಅವರು ಸರಕಾರಿ ಶಾಲೆಗಳ ಅಭಿವೃದ್ಧಿಯ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದು, ಈ ಹಿಂದೆ ಶಿರಾ ಸರ್ಕಾರಿ ಪ್ರೌಢಶಾಲೆಯನ್ನು ಸುಮಾರು 5 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜಿಗೆ ಸುಮಾರು 50 ಲಕ್ಷ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಿಸಿ ಹೆಣ್ಣು ಮಕ್ಕಳಿಗೆ ಭದ್ರತೆ ಒದಗಿಸಿದ್ದಾರೆ. ಇದೇ ರೀತಿ ನೂರಾರು ಜನ ಹಣವುಳ್ಳವರಿದ್ದು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಎಂದರು. ನಗರ ಬಿಜೆಪಿ ಅಧ್ಯಕ್ಷ ಗಿರಿಧರ್ ಮಾತನಾಡಿ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹುಟ್ಟು ಹಬ್ಬದ ಪ್ರಯುಕ್ತ ಫೆ. 3 ರಂದು ಬೆಳಿಗ್ಗೆ 9 ಗಂಟೆಗೆ ನಗರದ ದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು ಬ್ರೆಡ್ ವಿತರಿಸಲಾಗುವುದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಎಂದರು. ಪತ್ರಿಕಾಗೊಷ್ಠಿಯಲ್ಲಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಈರಣ್ಣ ಪಟೇಲ್, ನಗರಸಭೆ ಮಾಜಿ ಸದಸ್ಯ ಸಂತೇಪೇಟೆ ನಟರಾಜು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೊಟ್ಟ ಡಿಪಿ ರಂಗನಾಥ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಕುಮಾರ್, ಲಕ್ಷ್ಮೀ ನಾರಾಯಣ್, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಕುಮಾರ್, ಗ್ರಾ.ಪಂ. ಸದಸ್ಯರಾದ ಡಿ.ಎಚ್.ಗೌಡ, ಎಂ.ಶಿವಲಿಂಗಯ್ಯ, ಮೂಗನಹಳ್ಳಿ ರಾಮು, ಪದ್ಮ ಮಂಜುನಾಥ್, ಮಂಜುಳಮ್ಮ, ನಾಗರತ್ನಮ್ಮ, ಮುಖಂಡರಾದ ಮುನಿರಾಜು, ಗುರುಲಿಂಗಪ್ಪ, ವಾಸು, ಮಾಜಿ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ್, ಶ್ರೀಧರ ಮೂರ್ತಿ, ಮಂಜು ಮಲಿಕಾಪುರ, ಚಿಕ್ಕನಕೋಟೆ ಕರಿಯಣ್ಣ, ಸೈಯದ್ ಬಾಬಾ, ಗಂಗಾಧರ, ಮಲ್ಲಿಕಾರ್ಜುನ್ ಸೇರಿದಂತೆ ಹಲವರು ಹಾಜರಿದ್ದರು.