ಸೊಪ್ಪುಗಳ ಸೇವಿಸುವ ಮೂಲಕ ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳಿ

| Published : Oct 06 2024, 01:16 AM IST

ಸಾರಾಂಶ

ಆಧುನಿಕ ಜೀವನ ಶೈಲಿಯ ಆಹಾರ ಪದ್ಧತಿಗೆ ಮರುಳಾಗಿ ಆರೋಗ್ಯ ಹಾಳು ಮಾಡಿಕೊಳ್ಳದೇ, ಆರೋಗ್ಯಕ್ಕೆ ಪುಷ್ಟಿ ನೀಡುವ ವಿವಿಧ ರೀತಿಯ ಸೊಪ್ಪುಗಳನ್ನು ಸೇವಿಸುವ ಮೂಲಕ ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ನುಡಿದರು.

ಹಾವೇರಿ: ಆಧುನಿಕ ಜೀವನ ಶೈಲಿಯ ಆಹಾರ ಪದ್ಧತಿಗೆ ಮರುಳಾಗಿ ಆರೋಗ್ಯ ಹಾಳು ಮಾಡಿಕೊಳ್ಳದೇ, ಆರೋಗ್ಯಕ್ಕೆ ಪುಷ್ಟಿ ನೀಡುವ ವಿವಿಧ ರೀತಿಯ ಸೊಪ್ಪುಗಳನ್ನು ಸೇವಿಸುವ ಮೂಲಕ ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ನುಡಿದರು. ನಗರದ ಹೊಸಮಠದ ಬಸವೇಶ್ವರ ಸಮುದಾಯ ಭವನದಲ್ಲಿ ಶನಿವಾರ ಸಹಜ ಸಮೃದ್ಧಿ ಹಾಗೂ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಸೊಪ್ಪು ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸೊಪ್ಪಿನಲ್ಲಿ ಅಪಾರ ಪೋಷಕಾಂಶ ಇವೆ. ಇಂಥ ಸೊಪ್ಪಿನ ಲೋಕದ ಅನಾವರಣವನ್ನು ಹಾವೇರಿಯಲ್ಲಿ ಮೊದಲ ಬಾರಿಗೆ ಮಾಡಿರುವುದು ಸಂತಸದ ಸಂಗತಿ. ಕೇವಲ ನಾಲ್ಕೈದು ಬಗೆಯ ಸೊಪ್ಪುಗಳು ಜನಪ್ರಿಯವಾಗಿದ್ದು, ನಿಸರ್ಗದಲ್ಲಿ ಸಿಗುವ ಇನ್ನಿತರ ಸೊಪ್ಪುಗಳನ್ನು ಸಹ ಸೇವನೆಗೆ ಬಳಸಿಕೊಂಡು ಆರೋಗ್ಯ ವೃದ್ಧಿ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಎಂ.ವೈ.ಮೀಶಿ ಮಾತನಾಡಿ, ಆರೋಗ್ಯ ಸಂರಕ್ಷಣೆ ದೃಷ್ಟಿಯಿಂದ ಸೊಪ್ಪುಗಳ ಬಳಕೆ ಅನಿವಾರ್ಯವಾಗಿದೆ. ಪೌಷ್ಟಿಕಾಂಶಭರಿತ ಸೊಪ್ಪುಗಳು, ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ ಎಂದರು. ಉಪ ಕೃಷಿ ನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ಕಡಿಮೆ ಖರ್ಚಿನಲ್ಲಿ ಅಧಿಕ ಆದಾಯ ತಂದುಕೊಡುವ ಸೊಪ್ಪುಗಳು ಆರೋಗ್ಯಕ್ಕೆ ಬಹಳ ಮುಖ್ಯ. ಕಡಿಮೆ ಜಮೀನಿನಲ್ಲಿ ನಿಗದಿತವಾಗಿ ಸತತ ಆದಾಯ ಪಡೆಯುವ ರೈತರ ಯಶಸ್ವಿ ಪ್ರಯೋಗವನ್ನು ಉಳಿದ ರೈತರೂ ಅನುಸರಿಸಬೇಕು ಎಂದು ಸಲಹೆ ನೀಡಿದರು. ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿ ವಿಜಯಲಕ್ಷ್ಮಿ ಮಾತನಾಡಿ, ಬಗೆಬಗೆಯ ಸೊಪ್ಪುಗಳಿಂದ ರುಚಿಯಾದ ಅಡುಗೆ ಹಾಗೂ ತಿಂಡಿ ತಿನಿಸು ಮಾಡಲು ಸಾಧ್ಯ. ಇಂದಿನ ಯುವಪೀಳಿಗೆಯು ಜಂಕ್ ಫುಡ್ ಬಿಟ್ಟು, ದೇಸಿ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಎಚ್.ಡಿ ಕೋಟೆಯ ಜೇನುಕುರುಬ ಸಮುದಾಯದ ನಾಯಕಿ ಪಾರ್ವತಿ ಅವರು, ಬುಡಕಟ್ಟು ಸಮುದಾಯಗಳು ಈಗಲೂ ಬಳಸುವ ಕಾಡಿನ ಸೊಪ್ಪುಗಳ ಬಗ್ಗೆ ಅನುಭವ ಹಂಚಿಕೊಂಡರು.ಇದೇ ಸಂದರ್ಭದಲ್ಲಿ ‘ಸಖತ್ ಸೊಪ್ಪು'''''''' ಪುಸ್ತಕ ಬಿಡುಗಡೆ ಮಾಡಲಾಯಿತು. ರಾಣಿಬೆನ್ನೂರ ತಾಲೂಕಿನ ಇಟಗಿಯ ಸಾವಯವ ಕೃಷಿಕ ರೇವಣೆಪ್ಪ ಪೂಜಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ದೇಸಿ ತಳಿ ಸಂರಕ್ಷಕ ಶ್ರೇಣಿಕರಾಜ್ ಅಧ್ಯಕ್ಷತೆ ವಹಿಸಿದ್ದರು. ಸಹಜ ಸಮೃದ್ಧ ಕಾರ್ಯದರ್ಶಿ ಆನಂದತೀರ್ಥ ಪ್ಯಾಟಿ ಪ್ರಾಸ್ತಾವಿಕ ಮಾತಾಡಿದರು. ಅಭಿಷೇಕ್ ಸ್ವಾಗತಿಸಿದರು. ಶಾಂತಕುಮಾರ್ ನಿರೂಪಿಸಿದರು. ಶ್ರೀದೇವಿ ಬಿ. ವಂದಿಸಿದರು.ನೂರಕ್ಕೂ ಹೆಚ್ಚು ವಿವಿಧ ಸೊಪ್ಪುಗಳ ಪ್ರದರ್ಶನ: ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗವು ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಜೊತೆಗೂಡಿ ಆಯೋಜಿಸಿದ್ದ ‘ಸೊಪ್ಪಿನ ಮೇಳ''ದಲ್ಲಿ ನೂರಕ್ಕೂ ಹೆಚ್ಚಿನ ವಿವಿಧ ಸೊಪ್ಪುಗಳ ಪ್ರದರ್ಶನ ಗಮನ ಸೆಳೆಯಿತು. ಧಾರವಾಡ, ಹಾವೇರಿ, ಬೆಳಗಾವಿ, ಮೈಸೂರು ಮತ್ತು ತುಮಕೂರು ಭಾಗಗಳ ರೈತರು ಬಗೆ ಬಗೆಯ ಸೊಪ್ಪು ಮತ್ತು ಸೊಪ್ಪಿನ ಮೌಲ್ಯವರ್ಧಿತ ಪದಾರ್ಥಗಳನ್ನು ಪ್ರದರ್ಶನ- ಮತ್ತು ಮಾರಾಟ ಮಾಡಿದರು. ದಿನ ಬಳಕೆಯ ಸೊಪ್ಪು, ಔಷಧೀಯ ಸೊಪ್ಪು, ಸಾಗುವಳಿ ಮಾಡದ ನಿಸರ್ಗದತ್ತ ಸೊಪ್ಪು, ಕಾಡಿನ ಸೊಪ್ಪು, ಬಳ್ಳಿ ಸೊಪ್ಪು, ಮರಾಧಾರಿತ ಸೊಪ್ಪು ಮತ್ತು ವಿದೇಶಿ ಸೊಪ್ಪುಗಳನ್ನು ಈ ಪ್ರದರ್ಶನಕ್ಕೆ ಇಡಲಾಗಿತ್ತು. ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯರು, ಮಕ್ಕಳು ಮೇಳಕ್ಕೆ ಆಗಮಿಸಿ ವಿವಿಧ ತರಹದ ಸೊಪ್ಪುಗಳನನ್ನು ವೀಕ್ಷಿಸಿ ಅದರ ಬಗ್ಗೆ ಮಾಹಿತಿ ಪಡೆದುಕೊಂಡರು. ವಿಶೇಷವಾಗಿ ತಾರಸಿ ತೋಟ ಹಾಗೂ ಹಿತ್ತಿಲು ಜಾಗದಲ್ಲಿ ಕೈತೋಟ ಮಾಡುವವರಿಗೆ ಬಿತ್ತನೆ ಬೀಜಗಳನ್ನು ಈ ಮೇಳದಲ್ಲಿ ಮಾರಾಟಕ್ಕೆ ಇಡಲಾಗಿತ್ತು.ಸೊಪ್ಪು ಮೇಳದಲ್ಲಿ ಇಂದು: ಅ.6ರಂದು ಬೆಳಗ್ಗೆ ಸೊಪ್ಪಿನಿಂದ ಮಾಡುವ ಅಡುಗೆ ಕುರಿತು ಅಜ್ಜಿಯ ಮಡಿಲು- ಸೊಪ್ಪಿನ ಕಡಲು'''''''' ಎಂಬ ಕಾರ್ಯಕ್ರಮವನ್ನು ತುಮಕೂರಿನ ಮುರಳೀಧರ ಗುಂಗುರಮಳೆ ನಡೆಸಿಕೊಡಲಿದ್ದಾರೆ.ಕ್ರಾಪ್ಸ್4ಎಚ್''''ಡಿ ಯೋಜನೆ ಆಶ್ರಯದಲ್ಲಿ ಮಧ್ಯಾಹ್ನ 12 ಗಂಟೆಗೆ `ಸೊಪ್ಪಿನ ಅಡುಗೆ ಸ್ಪರ್ಧೆ'' ಏರ್ಪಡಿಸಲಾಗಿದೆ. ವಿವಿಧ ಬಗೆಯ ಸೊಪ್ಪುಗಳನ್ನು ಬಳಸಿ ತಯಾರಿಸಿದ ಸಾಂಪ್ರದಾಯಿಕ ಅಥವಾ ಹೊಸ ಬಗೆಯ ಅಡುಗೆಗಳನ್ನು ತಯಾರಿಸಿ ಮೇಳಕ್ಕೆ ತರಬಹುದು. ನಿರ್ಲಕ್ಷ್ಯಕ್ಕೆ ಗುರಿಯಾದ ಮತ್ತು ಹೆಚ್ಚು ಪ್ರಚಲಿತದಲ್ಲಿಲ್ಲದ ಸೊಪ್ಪುಗಳನ್ನು ಬಳಸಿ ಮಾಡಿದ ಅಡುಗೆಗಳಿಗೆ ವಿಶೇಷ ಪ್ರಾಶಸ್ತ್ಯ ನೀಡಲಾಗುತ್ತದೆ. ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ. ಇದರ ಜತೆಗೆ, ಬೆಳಗ್ಗೆ 10 ಗಂಟೆಗೆ 5ರಿಂದ 12 ವರ್ಷದ ಮಕ್ಕಳಿಗಾಗಿ `ಸೊಪ್ಪು- ನಾ ಕಂಡಂತೆ'''''''' ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ.