ಕ್ಷೇತ್ರದ ಪ್ರತಿಯೊಬ್ಬರಿಗೂ ನನ್ನ ಅಭಿವೃದ್ಧಿ ಕಾರ್ಯ ಗೊತ್ತು: ಸಂಸದ ಬಿ.ವೈ.ರಾಘವೇಂದ್ರ

| Published : Mar 22 2024, 01:06 AM IST

ಕ್ಷೇತ್ರದ ಪ್ರತಿಯೊಬ್ಬರಿಗೂ ನನ್ನ ಅಭಿವೃದ್ಧಿ ಕಾರ್ಯ ಗೊತ್ತು: ಸಂಸದ ಬಿ.ವೈ.ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಅವಧಿಯಲ್ಲಾದ ಅಭಿವೃದ್ಧಿ ಕೆಲಸದ ಬಗ್ಗೆ ಕರಪತ್ರದ ಮೂಲಕ ಮನೆ ಮನೆಗೆ ಈಗಾಗಲೇ ತಲುಪಿಸಲಾಗಿದೆ. ಮೊದಲು ಕಾಂಗ್ರೆಸ್‍ ನವರು ಅದನ್ನು ಓದಿಕೊಳ್ಳಲಿ. ಅಭಿವೃದ್ಧಿ ಕಾರ್ಯಗಳ ಬಗ್ಗೆ, ಯುವಕರಿಗಾಗಿ ಏನು ಮಾಡಿದ್ದೇನೆ ಎಂದು ಇಡೀ ಕ್ಷೇತ್ರದ ಪ್ರತಿಯೊಬ್ಬರಿಗೂ ಗೊತ್ತಿದೆ. ಅಭಿವೃದ್ಧಿ ಎಂದರೆ ಏನೆಂದು ಗೊತ್ತಿಲ್ಲದ ಇವರಿಗೆ ನನ್ನ ಬಗ್ಗೆ ಮಾತನಾಡುವ ಯಾವ ನೈತಿಕತೆಯು ಅವರಿಗಿಲ್ಲ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಹಾಗೂ ಕಾಂಗ್ರೆಸ್‍ ನ ಕೆಲ ನಾಯಕರು ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರಿಗೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವರ ಹೇಳಿಕೆ ಗಮನಿಸಿದಾಗ ನನಗೆ ನಗು ಬರುತ್ತದೆ. ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ, ವಿಐಎಸ್‍ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿಗೆ 5 ವರ್ಷದಲ್ಲಿ ಸಂಸದ ರಾಘವೇಂದ್ರ ಏನು ಮಾಡಿದ್ದಾರೆ, ಸದನದಲ್ಲಿ ಎಷ್ಟು ಬಾರಿ ಮಾತನಾಡಿದ್ದಾರೆ ಎಂದು ಸಚಿವರು ಗೇಲಿ ಮಾಡಿದ್ದಾರೆ. ಅವರು ನನ್ನ ಹೆಸರಿನ ಸಾಮಾಜಿಕ ಜಾಲತಾಣದಲ್ಲಿ ಹೋದರೆ ನಾನು ಮೂರು ಬಾರಿ ಸಂಸದನಾದಾಗ ಏನೇನು ಮಾಡಿದ್ದೇ ಎಂಬ ಸಂಪೂರ್ಣ ವಿವರ ಅದರಲ್ಲಿದೆ. ತೆಗೆದುಕೊಂಡು ಓದಲಿ ಎಂದು ತಿರುಗೇಟು ನೀಡಿದರು.

ನಮ್ಮ ಅವಧಿಯಲ್ಲಾದ ಅಭಿವೃದ್ಧಿ ಕೆಲಸದ ಬಗ್ಗೆ ಕರಪತ್ರದ ಮೂಲಕ ಮನೆ ಮನೆಗೆ ಈಗಾಗಲೇ ತಲುಪಿಸಲಾಗಿದೆ. ಮೊದಲು ಕಾಂಗ್ರೆಸ್‍ ನವರು ಅದನ್ನು ಓದಿಕೊಳ್ಳಲಿ. ಅಭಿವೃದ್ಧಿ ಕಾರ್ಯಗಳ ಬಗ್ಗೆ, ಯುವಕರಿಗಾಗಿ ಏನು ಮಾಡಿದ್ದೇನೆ ಎಂದು ಇಡೀ ಕ್ಷೇತ್ರದ ಪ್ರತಿಯೊಬ್ಬರಿಗೂ ಗೊತ್ತಿದೆ. ಅಭಿವೃದ್ಧಿ ಎಂದರೆ ಏನೆಂದು ಗೊತ್ತಿಲ್ಲದ ಇವರಿಗೆ ನನ್ನ ಬಗ್ಗೆ ಮಾತನಾಡುವ ಯಾವ ನೈತಿಕತೆಯು ಅವರಿಗಿಲ್ಲ ಎಂದು ತಿರುಗೇಟು ನೀಡಿದರು.

ಮತದಾರರಿಂದ ಉತ್ತರ ಸಿಗಲಿದೆ:

ಕೆ.ಎಸ್. ಈಶ್ವರಪ್ಪನವರ ಹೇಳಿಕೆಗಳಿಗೆ ಮತದಾರರು ಉತ್ತರ ನೀಡುತ್ತಾರೆ. ನನ್ನ ತಮ್ಮ ವಿಜಯೇಂದ್ರ ರಾಜ್ಯಾಧ್ಯಕ್ಷನಾಗುತ್ತಾನೆ ಎಂದು ನಮ್ಮ ಕುಟುಂಬದವರು ಯಾರು ಭಾವಿಸಿರಲಿಲ್ಲ. ಅವರ ಕ್ರಿಯಾಶೀಲತೆ ಗಮನಿಸಿ, ಪಕ್ಷವನ್ನು ಸದೃಢವಾಗಿ ಬೆಳೆಸುತ್ತಾರೆ ಎಂಬ ವಿಶ್ವಾಸ ಕೇಂದ್ರ ನಾಯಕರಿಗೆ ಬಂದಿದ್ದರಿಂದ ಅವರನ್ನು ರಾಜ್ಯಾಧ್ಯಕ್ಷರಾಗಿ ಮಾಡಿದ್ದಾರೆ ಎಂದು ಹೇಳಿದರು.

ಹಣೆಯಲ್ಲಿ ಬರೆದಿದ್ದು ತಪ್ಪಿಸಲಾಗಲ್ಲ

ಕೆ.ಎಸ್‌. ಈಶ್ವರಪ್ಪ ಕೂಡ ನಾಲ್ಕೈದು ಬಾರಿ ಶಾಸಕರಾದ್ದರಿಂದ ಶಿವಮೊಗ್ಗ ನಗರದಲ್ಲಿ ಸಹಜವಾಗಿ ಬಿಜೆಪಿ ಕಾರ್ಯಕರ್ತರ ವಿಶ್ವಾಸ ಗಳಿಸಿದ್ದಾರೆ. ಹಾಗಾಗಿ ಅವರೊಂದಿಗೆ ಭಾಗವಹಿಸುವುದು ತಪ್ಪೇನು ಅಲ್ಲ. ಯಾರ ಹಣೆಯಲ್ಲಿ ಏನೇನು ಬರೆದಿದೆಯೋ ಅದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ.

ಬಿ.ವೈ.ರಾಘವೇಂದ್ರ, ಸಂಸದ