ಜಗತ್ತಿನಲ್ಲಿ ಎಲ್ಲರೂ ಸಮಾನರು

| Published : Mar 16 2025, 01:45 AM IST

ಸಾರಾಂಶ

ಭದ್ರಾವತಿ: ಜಗತ್ತಿನಲ್ಲಿ ಯಾರು ದೊಡ್ಡವರಲ್ಲ ಎಲ್ಲರೂ ಸಮಾನರು. ನಮ್ಮ ಸೃಷ್ಟಿಕರ್ತ ಮಾತ್ರ ದೊಡ್ಡವನು. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಈ ಉದ್ದೇಶದಿಂದ ಇಫ್ತಾರ್ ಕೂಟ ಆಯೋಜಿಸಲಾಗುತ್ತದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಸಂಚಾಲಕ ಜನಾಬ್ ಅಕ್ರಮ್ ಉಲ್ಲಾ ಷರೀಬ್ ತಿಳಿಸಿದರು.

ಶನಿವಾರ ಪಾವನ ಮಾಸ ರಂಜಾನ್ ಪ್ರಯುಕ್ತ ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಘಟಕದ ವತಿಯಿಂದ ನಗರದ ಡಾ.ರಾಜ್‌ಕುಮಾರ್ ರಸ್ತೆ (ಬಿ.ಎಚ್ ರಸ್ತೆ) ಆಯಿಷಾ ಮಸೀದಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಸ್ಲಿಂ ಸಮುದಾಯದವರು ನಮ್ಮ ಸೃಷ್ಟಿಕರ್ತ ಒಬ್ಬನೆ. ಆತ ಮಾತ್ರ ನಮ್ಮೆಲ್ಲರಿಗೂ ದೊಡ್ಡವನು ಎಂಬುದನ್ನು ಅರಿಯಬೇಕು. ಈ ನಿಟ್ಟಿನಲ್ಲಿ ೫ ಕರ್ಮಗಳನ್ನು ಕಡ್ಡಾಯವಾಗಿ ಆಚರಿಸಬೇಕು. ಆಗ ಮಾತ್ರ ನಮ್ಮಲ್ಲಿ ಒಳ್ಳೆಯ ಗುಣಗಳನ್ನು ರೂಪುಗೊಳ್ಳಲು ಸಾಧ್ಯ ಎಂದರು.

ಜಾತಿ-ಧರ್ಮ, ಬಡವ-ಶ್ರೀಮಂತ ಯಾವುದೇ ಭಾವಿಸದೆ ಎಲ್ಲರನ್ನು ಒಂದಾಗಿ ನೋಡುವ ಸಮಾನತೆ ಮನೋಭಾವನ್ನು ನಾವು ಬೆಳೆಸಿಕೊಳ್ಳಬೇಕು. ಇಫ್ತಾರ್ ಕೂಟ ಇದನ್ನು ತಿಳಿಸುವ ಉದ್ದೇಶವಾಗಿದೆ ಎಂದರು. ನಗರಸಭೆ ಸದಸ್ಯ ಜಾರ್ಜ್, ಮುಖಂಡರಾದ ತೀರ್ಥೇಶ, ಮಂಜುನಾಥ್, ರಾಜು, ಮಹಮದ್ ರಫಿ(ಟೈಲರ್), ಖದೀರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.