ದೇಶದ ಪ್ರತಿಯೊಬ್ಬ ಪ್ರಜೆಯೂ ತನ್ನ ಕರ್ತವ್ಯ, ಜವಾಬ್ದಾರಿ ಅರಿತು, ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ಜಾತಿ, ಧರ್ಮ, ಭಾಷೆ, ಪಕ್ಷ ಮೀರಿ ಕೈಜೋಡಿಸಬೇಕು ಎಂದು ಬಿಜೆಪಿ ಮುಖಂಡ ಎಸ್.ಪಿ.ಚಿದಾನಂದ್ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ತುಮಕೂರುಭಾರತ ಒಕ್ಕೂಟ ವ್ಯವಸ್ಥೆ ಅಸ್ವಿತ್ವಕ್ಕೆ ಬಂದು 77 ವರ್ಷ ತುಂಬಿರುವ ಸಂದರ್ಭದಲ್ಲಿ ಗಣರಾಜ್ಯೋತ್ಸವನ್ನು ದೇಶಾದ್ಯಂತ ಶಿಸ್ತು, ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ತನ್ನ ಕರ್ತವ್ಯ, ಜವಾಬ್ದಾರಿ ಅರಿತು, ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ಜಾತಿ, ಧರ್ಮ, ಭಾಷೆ, ಪಕ್ಷ ಮೀರಿ ಕೈಜೋಡಿಸಬೇಕು ಎಂದು ಬಿಜೆಪಿ ಮುಖಂಡ ಎಸ್.ಪಿ.ಚಿದಾನಂದ್ ಮನವಿ ಮಾಡಿದರು. ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ರಾಜ್ಯ ಸಂಘದಿಂದ ಸೋಮವಾರ ನಗರದ ಕೆ.ಆರ್.ಬಡಾವಣೆಯ ಸಂಘದ ಕಚೇರಿಯಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ರಾಷ್ಟ್ರೀಯ ಹಬ್ಬ, ನಾಡಹಬ್ಬಗಳು ಕೇವಲ ಸರ್ಕಾರ, ಸರ್ಕಾರಿ ಕಚೇರಿಗಳಲ್ಲಿ ಆಚರಣೆಗೆ ಸೀಮಿತವಾಗಬಾರದು, ಪ್ರತಿಯೊಬ್ಬ ಭಾರತೀಯರೂ ಮನೆ ಹಬ್ಬದಂತೆ ಆಚರಣೆ ಮಾಡಿ ದೇಶಪ್ರೇಮ ಮೆರೆಯಬೇಕು. ಸಂಘಸಂಸ್ಥೆಗಳು ಇಂತಹ ಹಬ್ಬಗಳನ್ನು ತಪ್ಪದೇ ಆಚರಣೆ ಮಾಡಬೇಕು ಎಂದು ಹೇಳಿದರು. ಶ್ರಮಜೀವಿ ಬೀದಿ ಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಎಂ.ಗೋಪಿ, ಗೌರವಾಧ್ಯಕ್ಷ ಶಿವಣ್ಣ, ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಜಿ.ರಮ್ಯಾಶ್ರೀ, ನಗರ ಅಧ್ಯಕ್ಷೆ ನಾಗರತ್ನಮ್ಮ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ರಾಜಣ್ಣ, ಉಪಾಧ್ಯಕ್ಷ ಆದಿಲ್ ಬಾಷಾ, ವಿಜಯ್‌ಕುಮಾರ್ ಬುಳ್ಳಾ, ಮುಖಂಡರಾದ ಸಿದ್ದು ಗೋಬಿ, ಕೃಷ್ಣ, ಗಂಗಾಧರ್, ಮಂಜುಳಾ, ನಟರಾಜು, ಕೆಂಪಣ್ಣ, ಶಾಂತಮ್ಮ, ತನುಜಮ್ಮ, ಚಿಕ್ಕರಂಗಯ್ಯ, ವೇಣುಗೋಪಾಲ್ ಮೊದಲಾದವರು ಹಾಜರಿದ್ದರು. ಕನ್ನಡಪರ ಮತ್ತು ಇತರೆ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ಪಿ.ಎನ್.ರಾಮಯ್ಯ ಅತಿಥಿಯಾಗಿ ಭಾಗವಹಿಸಿದ್ದರು. ಗಣರಾಜ್ಯೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.