ಯಾವುದೇ ಆಹಾರ ವ್ಯಾಪಾರ ಅಥವಾ ಉದ್ಯಮವನ್ನು ಉತ್ಪಾದನೆ, ಮಾರಾಟ, ಸಂಗ್ರಹಣೆ, ಆರಂಭಿಸಲು ಪರವಾನಗಿ ಅಥವಾ ನೋಂದಣಿ ಪಡೆಯುವುದು ಕಡ್ಡಾಯವಾಗಿದೆ.

ಮುಂಡಗೋಡ: ಶೇ. ೮೦ರಷ್ಟು ಸಾಂಕ್ರಾಮಿಕ ರೋಗ ಮತ್ತು ಕಾಯಿಲೆಗಳು ಕಲುಷಿತ ನೀರು ಹಾಗೂ ಕಲುಷಿತ ಆಹಾರದಿಂದ ವೈಯಕ್ತಿಕ ಸ್ವಚ್ಛತೆ ಕೊರತೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತವೆ. ಹಾಗಾಗಿ ಸ್ವಚ್ಛತೆ ಹಾಗೂ ಮುಂಜಾಗ್ರತೆ ಕ್ರಮ ಅತ್ಯಗತ್ಯವಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್ ಹೇಳಿದರು.

ಪಟ್ಟಣದ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹಾಗೂ ಪ್ಲಾಸ್ಟಿಕ್ ನಿಷೇಧ ಕುರಿತು ವರ್ತಕರ ಸಂಘದ ಎಲ್ಲ ಸದಸ್ಯರಿಗೆ ಹಾಗೂ ಹೋಟೆಲ್ ಮಾಲೀಕರ ಸಂಘದ ಸದಸ್ಯರಿಗೆ ಹಾಗೂ ಬೇಕರಿ ಮಾಲೀಕರ ಸದಸ್ಯರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಯಾವುದೇ ಆಹಾರ ವ್ಯಾಪಾರ ಅಥವಾ ಉದ್ಯಮವನ್ನು ಉದಾಹರಣೆಗೆ ಉತ್ಪಾದನೆ, ಮಾರಾಟ, ಸಂಗ್ರಹಣೆ, ಆರಂಭಿಸಲು ಪರವಾನಗಿ ಅಥವಾ ನೋಂದಣಿ ಪಡೆಯುವುದು ಕಡ್ಡಾಯವಾಗಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆ ಕಳಪೆ ಗುಣಮಟ್ಟದ ಕಲುಷಿತಗೊಂಡ ಅಥವಾ ನಕಲಿ ಆಹಾರ ಪದಾರ್ಥಗಳ ಮಾರಾಟವನ್ನು ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷಕುಮಾರ್ ಹಾಲಕಲ್ಲಾಪುರ ಅವರು ಪ್ಲಾಸ್ಟಿಕ್ ನಿಷೇಧ ಕುರಿತು ಹಾಗೂ ಪ್ಲಾಸ್ಟಿಕ್ ಬಳಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು.

ವರ್ತಕರ ಸಮಘದ ಅಧ್ಯಕ್ಷ ಎಸ್.ಎಸ್. ವಾಲಿಶೆಟ್ಟರ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಸ್ವರೂಪರಾಣಿ ಪಾಟೀಲ್, ಆರೋಗ್ಯ ಶಿಕ್ಷಣಾಧಿಕಾರಿಎಸ್ ಎಸ್. ಪಟ್ಟಣಶೆಟ್ಟಿ, ಶ್ರೀರಾಮ ಉಪ್ಪುಂದ, ಆರ್.ಎನ್. ಉರಣಕರ ಸುರೇಶ್ ಐಹೊಳೆ, ಸಿ.ಎಫ್. ಯೆಡಿಯಾಳ ಪ್ರಸಾದ್ ಎ., ಅಶೋಕ್ ಎ., ಶಿವಾನಂದ್ ವಾಲಿಶೆಟ್ಟರ್, ರಮೇಶ್ ಎಚ್. ಕಾಮತ್, ಎಸ್.ಎಂ. ಅಂಕಲಕೋಟಿ ಮುಂತಾದವರು ಉಪಸ್ಥಿತರಿದ್ದರು. ಎಸ್.ಎಸ್. ಪಟ್ಟಣಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.