ಪ್ರತಿಯೊಬ್ಬರಿಗೂ ಯೋಗಾಸನ, ಪ್ರಾಣಾಯಾಮದ ಅವಶ್ಯಕ ಇದೆ

| Published : Sep 13 2024, 01:50 AM IST

ಸಾರಾಂಶ

ಹರಿಹರದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಕರ್ನಾಟಕ ಶ್ರೀ ಪತಂಜಲಿ ಯೋಗ ಫೌಂಡೇಶನ್ ದಾವಣಗೆರೆ ಇವರ ಆಶ್ರಯದಲ್ಲಿ ಬುಧವಾರ ಸಂಜೆ ಯೋಗ ತರಬೇತಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಹೇಶ್‌ ಅಭಿಪ್ರಾಯ

ಕನ್ನಡಪ್ರಭ ವಾರ್ತೆ ಹರಿಹರ

ಪ್ರಸ್ತುತ ದಿನಮಾನಗಳಲ್ಲಿ ಪ್ರತಿಯೊಬ್ಬರಿಗೂ ಯೋಗಾಸನ ಪ್ರಾಣಾಯಾಮದ ಅವಶ್ಯಕತೆ ಇದೆ ಎಂದು ಶಿಭಾರ ವೃತ್ತದ ಮೈಲಾರಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ವೈ.ಎನ್. ಮಹೇಶ್ ತಿಳಿಸಿದರು.

ನಗರದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ಪತಂಜಲಿ ಯೋಗ ಶಿಕ್ಷಣ ಸಮಿತಿ, ಕರ್ನಾಟಕ ಪತಂಜಲಿ ಯೋಗ ಫೌಂಡೇಶನ್ ದಾವಣಗೆರೆ ಇವರ ಆಶ್ರಯದಲ್ಲಿ ಬುಧವಾರ ಸಂಜೆ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯ ಆರೋಗ್ಯವಂತನಾಗಿ, ಮಾನಸಿಕ ಸದೃಢರಾಗಲು, ಶಾರೀರಿಕ, ಮಾನಸಿಕ, ಭೌದ್ಧಿಕವಾಗಲು ಯೋಗ, ಪ್ರಾಣಾಯಾಮ, ಧ್ಯಾನ ಮುಂತಾದವುಗಳ ಅವಶ್ಯಕತೆ ಇದೆ. ಇಲ್ಲಿನ ಸುತ್ತಮುತ್ತಲಿನ ಜನಕ್ಕೆ ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ಕೆ ಪತಂಜಲಿ ಸಂಸ್ಥೆ ಮುಂದಾಗಿರುವದು ಸಂತೋಷಕರ ವಿಷಯ. ಸಂಸ್ಥೆಯ ಯಾವುದೇ ಕಾರ್ಯಕ್ಕೂ ಸಂಪೂರ್ಣ ಸಹಕಾರವನ್ನು ದೇವಸ್ಥಾನದ ಸಮಿತಿ ಮಾಡುತ್ತದೆ ಎಂದು ಭರವಸೆ ನೀಡಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ಪೂರ್ವಾಚಾರಿ, ದೇಶದ ಪ್ರತಿಯೊಬ್ಬರಲ್ಲಿಯೂ ದೇಶಭಕ್ತಿ, ಮಾತೃಭಕ್ತಿ ಇರಬೇಕಾದ ಅವಶ್ಯಕತೆ ಇದೆ. ಅದಕ್ಕೆ ಯೋಗಾಸನ, ಪ್ರಾಣಾಯಾಮ, ಆಧ್ಯಾತ್ಮಿಕತೆ, ಧ್ಯಾನ, ಭಜನೆ, ಸಂಸ್ಕಾರ, ಸಂಘಟನೆ, ಸೇವೆ ಮುಂತಾದವುಗಳು ಮೆಟ್ಟಿಲುಗಳಿದ್ದಂತೆ ಇವುಗಳಲ್ಲಿ ಪರಿಪೂರ್ಣನಾದ ವ್ಯಕ್ತಿ ದೇಶ ಭಕ್ತಿಯ ಜತೆಗೆ ಸುಮಧುರ ಜೀವನ ನಡೆಸಲು ಬೇಕಾದ ಶರೀರ, ಮಾನಸಿಕ, ನೈತಿಕ, ಭೌದ್ಧಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ವೃದ್ಧಿಗೊಳಿಸುತ್ತಾನೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತಂಜಲಿ ಯೋಗ ಶಿಕ್ಷಣ ಸಮಿತಿ ಪಶ್ಚಿಮ ವಲಯ ಸಂಚಾಲಕ ಡಾ.ರಾಮಚಂದ್ರಣ್ಣ ಮಾತನಾಡಿ, ಸಂಸ್ಥೆ ಕಳೆದ 44 ವರ್ಷಗಳಿಂದ ಸಂಸ್ಥೆ ಸಾರ್ವಜನಿಕರಿಗೆ ಉಚಿತ ಧ್ಯಾನ, ತರಬೇತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಈ ಮೂಲಕ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ 1400 ಕ್ಕೂ ಹೆಚ್ಚು ಶಾಖೆಗಳನ್ನು ಹೋಂದಿದೆ. 2008 ರಲ್ಲಿ ದಾವಣಗೆರೆ ನಗರದಲ್ಲಿ ಪ್ರಾರಂಭವಾದ ಶಾಖೆ ನಗರದ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಉಚಿತವಾಗಿ ಯೋಗ ಶಿಕ್ಷಣ ನೀಡುತ್ತಾ ಬಂದಿದೆ. ದಾವಣಗೆರೆಯಲ್ಲಿ 40ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. 41ದಿನಗಳ ಕಾಲ ಪ್ರತಿದಿನ ಬೆಳಗ್ಗೆ 5.30 ರಿಂದ 7ರ ವರೆಗೆ ನಡೆಯುವ ತರಬೇತಿ ಶಿಬಿರದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ದೇವಸ್ಥಾನದ ಕಮಿಟಿಯ ಕಾರ್ಯದರ್ಶಿ ಜಗದೀಶ್, ಖಜಾಂಚಿ ಅಣ್ಣಪ್ಪ ಶಾವಿ, ಸದಸ್ಯರಾದ ಎರೆಸೀಮಿ ಪಾಲಾಕ್ಷ ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.