ಸಾರಾಂಶ
ಕುಶಾಲನಗರದ ಪುರಸಭೆಯಲ್ಲಿ ಮ್ಯಾನ್ವಲ್ ಸ್ಕಾವೆಂಜರ್‌ಗಳಿಗೆ ಅರಿವು ಮೂಡಿಸುವ ಸಂಬಂಧ ಕಾರ್ಯಕ್ರಮ ಹಾಗೂ ಪೌರಕಾರ್ಮಿಕರ ಕುಂದು ಕೊರತೆಗಳ ಸಭೆ ಏರ್ಪಟ್ಟಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಪಟ್ಟಣದ ಸ್ವಚ್ಛತೆಯ ಬಗ್ಗೆ ದಿನನಿತ್ಯ ಶ್ರಮಿಸುತ್ತಿರುವ ಪೌರಕಾರ್ಮಿಕರ ಮತ್ತು ಅವರ ಕುಟುಂಬ ಸದಸ್ಯರ ಏಳಿಗೆ ಹಾಗೂ ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕಾಗಿದೆ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಜಿ ಆರ್ ರಾಜು ಅಭಿಪ್ರಾಯಪಟ್ಟಿದ್ದಾರೆ.ಕುಶಾಲನಗರದ ಪುರಸಭೆಯಲ್ಲಿ ನಡೆದ ಮ್ಯಾನ್ವಲ್ ಸ್ಕಾವೆಂಜರ್‌ಗಳಿಗೆ ಅರಿವು ಮೂಡಿಸುವ ಸಂಬಂಧ ಕಾರ್ಯಕ್ರಮ ಹಾಗೂ ಪೌರಕಾರ್ಮಿಕರ ಕುಂದು ಕೊರತೆಗಳ ಸಭೆಯಲ್ಲಿ ಅವರು ಮಾತನಾಡಿದರು.ಪುರಸಭೆ ಆರೋಗ್ಯ ಅಧಿಕಾರಿ ಉದಯಕುಮಾರ್ ಮಾತನಾಡಿ, ಕುಶಾಲನಗರ ಪುರಸಭೆಯಲ್ಲಿ ಪೌರಕಾರ್ಮಿಕರಿಗೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಜೊತೆಗೆ ಕುಟುಂಬ ಸದಸ್ಯರಿಗೆ ಕೂಡ ಸೌಲಭ್ಯ ಕಲ್ಪಿಸಿರುವ ಬಗ್ಗೆ ಮಾಹಿತಿ ಒದಗಿಸಿದರು.
ಕುಶಲನಗರ ಪೌರಕಾರ್ಮಿಕ ಸಂಘದ ಅಧ್ಯಕ್ಷ ಗಣೇಶ್ ಮಾತನಾಡಿ, ರಾಜ್ಯ ಸಂಘದ ಮೂಲಕ ಸ್ಥಳೀಯ ಪೌರಕಾರ್ಮಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸಹಕಾರ ಕೋರಿದರು.ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆ ವತಿಯಿಂದ ಪ್ರಮುಖರನ್ನು ಗೌರವಿಸಲಾಯಿತು. ಪೌರಕಾರ್ಮಿಕರ ರಾಜ್ಯಸಂಘದ ಪ್ರಧಾನ ಕಾರ್ಯದರ್ಶಿ ಎಂ ವಡಿವೇಲು, ಕೊಡಗು ಜಿಲ್ಲಾ ಜಾಗೃತಿ ಸಮಿತಿಯ ವಿಜಿ ಕುಮಾರ್, ಪರಮೇಶ್ ಪೌರಕಾರ್ಮಿಕರ ಸಂಘಟನೆ ಕಾರ್ಯದರ್ಶಿ ಸುರೇಶ್ ಮಹದೇವ, ಲಕ್ಷ್ಮಿ, ದಫೆದಾರ್ ಮೋಹನ್ ಕುಮಾರ್ ಮತ್ತಿತರರು ಇದ್ದರು.