ಸಾರಾಂಶ
ಇಂದಿನ ಯುವಕರು ಕನ್ನಡ ತೇರು ಎಳೆಯುವ ಕಾರ್ಯ ಮಾಡಬೇಕು. ಕವಿತೆ ಸಂತೋಷ ನೀಡಬೇಕು. ಒಳ್ಳೆಯ ಸಂದೇಶ ನೀಡಬೇಕು. ಮನೊಲ್ಲಾಸ ನೀಡಬೇಕು. ಉತ್ತಮ ಕವಿತೆಗಳು ಹೊರ ಹೊಮ್ಮಬೇಕು. ನಾವು ಬರೆಯಬೇಕು ಸಾವಿಲ್ಲದ ಕವಿತೆ ಸಾರ್ಥಕತೆ ಕಾಣಬೇಕಾದರೆ ಉತ್ತಮ ಅಂಶಗಳು ಇರಬೇಕು.ಹೆಚ್ಚು ಅಧ್ಯಯನ ಶೀಲರಾಗಿ ಕವಿತೆ ಬರೆಯಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ಕನ್ನಡ ಸಾಹಿತ್ಯ ಬೆಳವಣಿಗೆಗೆ ಎಲ್ಲರ ಸಹಕಾರ ಅವಶ್ಯ ಎಂದು ಮೈಸೂರು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಡ್ಡಿಕೇರೆ ಗೋಪಾಲ್ ಹೇಳಿದರು.ವಿಜಯನಗರದ ಕಸಾಪ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ ಸಾಧಕರ ಶ್ರೀ ಮಾತಾ ಪ್ರಕಾಶನದ ವತಿಯಿಂದ ಭಾನುವಾರ ನಡೆದ ಕನ್ನಡ ಸೇವಾರತ್ನ ಪ್ರಶಸ್ತಿ ಪ್ರದಾನ, ಮೈಸೂರು ಜನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸಾಹಿತ್ಯ ಬೆಳವಣಿಗೆ ಕಸಾಪ ಒಳ್ಳೆಯ ಕಾರ್ಯಕ್ರಮ ಆಯೋಜಿಸುತ್ತಿದೆ. ಸಾಹಿತ್ಯ ನಿಂತ ನೀರಲ್ಲ ಹರಿಯುವ ನದಿಯಾಗಿದೆ. ಇಂದಿನ ಯುವಕರು ಕನ್ನಡ ತೇರು ಎಳೆಯುವ ಕಾರ್ಯ ಮಾಡಬೇಕು ಎಂದರು.
ಮೈಸೂರು ಸಾಹಿತ್ಯ ಲೋಕದ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಮಾತನಾಡಿ, ಕವಿತೆ ಸಂತೋಷ ನೀಡಬೇಕು. ಒಳ್ಳೆಯ ಸಂದೇಶ ನೀಡಬೇಕು. ಮನೊಲ್ಲಾಸ ನೀಡಬೇಕು. ಉತ್ತಮ ಕವಿತೆಗಳು ಹೊರ ಹೊಮ್ಮಬೇಕು. ನಾವು ಬರೆಯಬೇಕು ಸಾವಿಲ್ಲದ ಕವಿತೆ ಸಾರ್ಥಕತೆ ಕಾಣಬೇಕಾದರೆ ಉತ್ತಮ ಅಂಶಗಳು ಇರಬೇಕು.ಹೆಚ್ಚು ಅಧ್ಯಯನ ಶೀಲರಾಗಿ ಕವಿತೆ ಬರೆಯಬೇಕು.ಕವಿತೆಯಲ್ಲಿ ಲೋಕಾನುಭವದ ಕೊರತೆಗಳಿರಬಾರದು. ಕುವೆಂಪು, ಬೇಂದ್ರೆ ಅವರನ್ನು ಮಾಗರ್ಶನದಲ್ಲಿ ಮುನ್ನೆಡೆಯಬೇಕು. ಹುಬ್ಬಳ್ಳಿಯ ಚನ್ನಾಪೂರದ ಅವದೂತ ಮಹರ್ಷಿ ಸಿದ್ದಾರ್ಥ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿದರು.
ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಲಾಯಿತು. ಕಸಾಪ ಜಿಲ್ಲಾ ಉಪಾಧ್ಯಕ್ಷ ಟಿ. ತ್ಯಾಗರಾಜು, ಸಾಹಿತಿ ಮಂಜುಳಾ ಪಾವಗಡ, ಜೂನಿಯರ್ ರವಿಚಂದ್ರನ್ ಚಿನ್ನು ಕೊಪ್ಪಳ, ಸಂಘಟಕರಾದ ನಾಗರಾಜ ತಂಬ್ರಹಳ್ಳಿ, ಕೆ. ಮೆಹಬೂಬ, ವಚನ ಕುಮಾರಸ್ವಾಮಿ, ವಾತ್ಸಲ್ಯ ಸೇವಾ ಟ್ಟಸ್ಟ್ ನ ರವಿಕುಮಾರ, ಸಾಹಿತಿ ಎಚ್.ಎಸ್. ಪ್ರತಿಮಾ ಹಾಸನ್, ಸಮಾಜ ಸೇವಕ ಸುರೇಶ ಗೌಡ, ಸಾಹಿತಿ ಚನ್ನಮಲ್ಲಪ್ಪ ಮೆಣಸಿನಕಾಯಿ, ಗಾಯಕ ವಿಠ್ಠಲ ಎಚ್. ಅಪ್ಪು, ಗಾಯಕ ಟಿ. ನಬಿಸಾಬ್ ಟೆಂಗುಂಟಿ, ಗಾಯಕಿ ಕಾವ್ಯಾಂಜಲಿ, ಅಂಗನವಾಡಿ ಸಂಘದ ಜಿಲ್ಲಾ ಉಪಾದ್ಯಕ್ಷೆ ಕಲಾವತಿ ಕುಲಕರ್ಣಿ, ರಾಜು ಮೋರೆ ಮೊದಲಾದವರು ಇದ್ದರು.