ಸಾರಾಂಶ
ಪ್ರಕೃತಿ ಸ್ವರೂಪ ಅಮ್ಮನ ಹೆಸರನ್ನು ಅಮರವಾಗಿಸಲು ಪ್ರತಿಯೊಬ್ಬರೂ ಒಂದೊಂದು ಸಸಿ ನೆಟ್ಟು ಪರಿಸರವನ್ನು ಕಾಪಾಡುವಲ್ಲಿ ಪರಿಸರ ಪ್ರೇಮ ಬೆಳೆಸಬೇಕು. ನಗರೀಕರಣದ ಹೆಸರಿನಲ್ಲಿ ಕಾಂಕ್ರೀಟೀಕರಣ ಹೆಚ್ಚಾಗುತ್ತಿದೆ. ಇದರ ನಡುವೆ ಪರಿಸರ ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಕಾಪಾಡಿಕೊಂಡು ಹೋಗಬೇಕಾಗಿದೆ.
ಕನ್ನಡಪ್ರಭ ವಾರ್ತೆ ಹಲಗೂರು
ಪ್ರತಿಯೊಬ್ಬರು ಗಿಡ- ಮರಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಿಸುವ ಜವಾಬ್ದಾರಿ ಹೊಂದಿದ್ದಾರೆ ಎಂದು ತಾಪಂ ಇಒ ಎಚ್.ಜಿ.ಶ್ರೀನಿವಾಸ್ ಹೇಳಿದರು.ಯತ್ತಂಬಾಡಿ ಗ್ರಾಪಂ ವ್ಯಾಪ್ತಿಯ ಅಂತರಹಳ್ಳಿ ಬೆಟ್ಟದ ಆವರಣದಲ್ಲಿ ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ತಾಯಿ ಹೆಸರಿನಲ್ಲಿ ಒಂದು ವೃಕ್ಷ ಎಂಬ ಅಭಿಯಾನದ ಮೂಲಕ ಸಸಿ ನೆಟ್ಟು ಮಾತನಾಡಿ, ಮಳವಳ್ಳಿ ತಾಲೂಕಿನ 39 ಗ್ರಾಪಂಗಳಲ್ಲಿ ಈ ಅಭಿಯಾನ ಹಮ್ಮಿಕೊಂಡಿದೆ. ಇದ್ದರಿಂದ ಪ್ರತಿಯೊಬ್ಬ ತಾಯಿ ಹೆಸರಿನಲ್ಲಿ ನೆನಪಿಗಾಗಿ ಒಂದು ಗಿಡ ನೆಟ್ಟು ಬೆಳೆಸುವಂತೆ ತಿಳಿಸಿದರು.
ಪ್ರಕೃತಿ ಸ್ವರೂಪ ಅಮ್ಮನ ಹೆಸರನ್ನು ಅಮರವಾಗಿಸಲು ಪ್ರತಿಯೊಬ್ಬರೂ ಒಂದೊಂದು ಸಸಿ ನೆಟ್ಟು ಪರಿಸರವನ್ನು ಕಾಪಾಡುವಲ್ಲಿ ಪರಿಸರ ಪ್ರೇಮ ಬೆಳೆಸಬೇಕು. ನಗರೀಕರಣದ ಹೆಸರಿನಲ್ಲಿ ಕಾಂಕ್ರೀಟೀಕರಣ ಹೆಚ್ಚಾಗುತ್ತಿದೆ. ಇದರ ನಡುವೆ ಪರಿಸರ ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಕಾಪಾಡಿಕೊಂಡು ಹೋಗಬೇಕಾಗಿದೆ ಎಂದರು. ತಾಯಿ ಋಣವನ್ನು ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಪರಿಸರವನ್ನು ನಾವು ಹಸಿರಾಗಿಸಿದರೆ ಅದು ನಮಗೆ ಉಸಿರು ನೀಡುತ್ತದೆ ಎಂದರು.ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಪಿಡಿಒ ಲೋಕೇಶ್, ಡಿಆರ್ ಎಫ್ ಒ ಶಿವಕುಮಾರ್, ತಾಲೂಕು ಐಇಸಿ ಸಂಯೋಜಕ ಸುನಿಲ್ ಕುಮಾರ್, ಕಾರ್ಯದರ್ಶಿ ಅಭಿಷೇಕ್, ಗ್ರಾಪಂ ಸದಸ್ಯರು, ಶಾಲಾ ಮಕ್ಕಳು, ಶಿಕ್ಷಕರು, ನರೇಗಾ ಕೂಲಿಕಾರರು, ಸಾರ್ವಜನಿಕರು ಮತ್ತು ಸಿಬ್ಬಂದಿ ಹಾಜರಿದ್ದರು.