ದೇಶ ನನಗೇನು ಕೊಟ್ಟಿದೆ ಎನ್ನುವ ಬದಲು, ದೇಶಕ್ಕೆ ನಾನೇನು ಕೊಟ್ಟಿದ್ದೇನೆ ಎನ್ನುವುದು ಮುಖ್ಯ.
ನರಗುಂದ: ಸ್ವಾತಂತ್ರ್ಯ ದಿನಾಚರಣೆ ದೇಶದ ಹಬ್ಬವಾಗಿದೆ. ದೇಶಭಕ್ತಿ ಎನ್ನುವುದು ಯಾರೊಬ್ಬರ ಸ್ವತ್ತಲ್ಲ. ಪ್ರತಿಯೊಬ್ಬರೂ ದೇಶಭಕ್ತರಾಗಬೇಕು. ದೇಶದ ಪ್ರತಿ ಮನೆ ಮನೆಗಳ ಮೇಲೆ ಆ. 13ರಿಂದ 15ರ ವರೆಗೆ ತಿರಂಗಾ ಧ್ವಜ ಹಾರಾಡಲಿ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಮಂಗಳವಾರ ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ಹರ್ ಘರ್ ತಿರಂಗಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ದೇಶ ನನಗೇನು ಕೊಟ್ಟಿದೆ ಎನ್ನುವ ಬದಲು, ದೇಶಕ್ಕೆ ನಾನೇನು ಕೊಟ್ಟಿದ್ದೇನೆ ಎನ್ನುವುದು ಮುಖ್ಯ. ದೇಶಕ್ಕಾಗಿ ತ್ಯಾಗ, ಬಲಿದಾನಗೈದ ಮಹಾಪುರುಷರೇ ನಮಗೆ ಸ್ಫೂರ್ತಿದಾಯಕವಾಗಿರಲಿ. ಇವತ್ತಿನ ದಿನಮಾನದಲ್ಲಿ ಎಲ್ಲ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಹೆಚ್ಚಾಗಿ ಜಾಗೃತ ಆಗಬೇಕಾಗಿದೆ ಎಂದರು.ಗ್ರಾಪಂ ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ ಮಾತನಾಡಿ, ದೇಶದ ಎಲ್ಲ ಜನರಲ್ಲೂ ದೇಶಭಕ್ತಿ ಮೂಡಿಸುವ ಉದ್ದೇಶದಿಂದಲೇ ಹರ್ ಘರ್ ತಿರಂಗ ಯಾತ್ರೆಯನ್ನು ಪ್ತಧಾನಿ ಮೋದಿಜಿ ನಡೆಸುತ್ತಿದ್ದಾರೆಂದರು.
ಕಾರ್ಯಕ್ರಮದಲ್ಲಿ ಮಾಜಿ ಯೋಧ ಮಹೇಶ್ವರಯ್ಯ ಸುರೇಬಾನ ಹಾಗೂ ಶಿಕ್ಷಕಿ ಅನ್ನಪೂರ್ಣ ತೇಲಿ ಮಾತನಾಡಿದರು. ಚಿಕ್ಕನರಗುಂದ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಿಂದ ಹೊರಟ ತಿರಂಗಾ ಯಾತ್ರೆ ಗ್ರಾಮದ ಪ್ರಮುಖ ಬೀದಿಯಲ್ಲಿ ಘೋಷಣೆಗಳನ್ನು ಕೂಗುತ್ತಾ ಗ್ರಾಮದ ಮಧ್ಯಭಾಗದಲ್ಲಿನ ಗ್ರಾಮದೇವತೆ ಮಂದಿರಕ್ಕೆ ಪ್ರದಕ್ಷಿಣೆ ಹಾಕಿದ ವಿದ್ಯಾರ್ಥಿಗಳಿಗೆ ಮರಳಿ ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿದರು.ಈ ಸಂದರ್ಭದಲ್ಲಿ ನಾಗನಗೌಡ ತಿಮ್ಮನಗೌಡ್ರ, ರುದ್ರಗೌಡ ರಾಚನಗೌಡ್ರ, ಉಮೇಶಗೌಡ ಪಾಟೀಲ, ಎಸ್.ಎಸ್. ಪಾಟೀಲ, ಸೋಮು ಹೊಂಗಲ, ರಾಚಪ್ಪ ಅಳಗವಾಡಿ, ಗುರುನಾಥ ಆದೆಪ್ಪನವರ, ಎ. ಬಿ. ಜ್ಞಾನೋಪಂಥ, ಬಿ. ಬಿ. ಬ್ಯಾಳಿ, ಎನ್. ಬಿ. ಗಾಣಗೇರ, ಈರಪ್ಪ ಸಾತಣ್ಣವರ, ಮಲ್ಲಪ್ಪ ತೊರಗಲ್ಲ, ಪವಾಡೆಪ್ಪ ವಡ್ಡಿಗೇರಿ, ಬಸಪ್ಪ ಮಳಗಿ, ಸಿದ್ದೇಶ ಹೂಗಾರ ಹಾಗೂ ಸರ್ಕಾರಿ ಪ್ರೌಢಶಾಲೆಯ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.ವಂದೇ ಮಾತರಂ ಗೀತೆಗೆ 150 ವರ್ಷ, ತಿರಂಗಾ ಯಾತ್ರೆ
ಲಕ್ಷ್ಮೇಶ್ವರ: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರ ವಹಿಸಿದ್ದ ಪ್ರಮುಖ ಗೀತೆಗಳಲ್ಲಿ ಒಂದಾಗಿದ್ದ ವಂದೇ ಮಾತರಂ ಗೀತೆಗೆ 150 ವರ್ಷ ಸಂದ ಹಿನ್ನೆಲೆ 150 ಅಡಿ ಉದ್ದದ ರಾಷ್ಟ್ರಧ್ವಜವನ್ನು ಪಟ್ಟಣದಲ್ಲಿ ಮೆರವಣಿಗೆ ಮಾಡಲಾಯಿತು.ಎಬಿವಿಪಿ ಸಂಘಟನೆಯು ತಿರಂಗಾ ಯಾತ್ರೆಯನ್ನು ಹಮ್ಮಿಕೊಂಡಿತ್ತು. ಪಟ್ಟಣದ ಶಿಗ್ಲಿ ಕ್ರಾಸ್‌ನಿಂದ ಆರಂಭವಾದ ತಿರಂಗಾ ಯಾತ್ರೆಯು ಪುರಸಭೆ, ಸೋಮೇಶ್ವರ ಪಾದಗಟ್ಟಿ, ಹಾವಳಿ ಹನುಮಪ್ಪನ ದೇವಸ್ಥಾನ, ವಿದ್ಯಾರಣ್ಯ ವೃತ್ತದ ಮೂಲಕ ಸಾಗಿ ನಂತರ ಮಹಾಕವಿ ಪಂಪ ವೃತ್ತಕ್ಕೆ ಆಗಮಿಸಿ ಸಂಪನ್ನಗೊಂಡಿತು.ತಿರಂಗಾ ಯಾತ್ರೆ ವೇಳೆ ಪಟ್ಟಣದ ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳು ಭಾರತ ಮಾತಾ ಕೀ ಜೈ ಎನ್ನುವ ಘೋಷಣೆಗಳನ್ನು ಕೂಗಿದರು. ಈ ವೇಳೆ ಎಬಿವಿಪಿ ಸಂಘಟನೆಯ ಸದಸ್ಯರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.