ಸಾರಾಂಶ
ಕನ್ನಡ ಭಾಷೆ ಕಲಿಯುವ ಬಗ್ಗೆ ಕರ್ನಾಟಕದಲ್ಲಿ ನೆಲೆಯೂರಿರುವ ಅನ್ಯ ಭಾಷಿಕರಿಗೆ ಕಾಲಮಿತಿ ನಿಗದಿ ಮಾಡಿ ಕನ್ನಡ ಕಲಿಸುವ ಕೆಲಸವಾಗಬೇಕು.
ಮದ್ದೂರು: ಕನ್ನಡವನ್ನು ಬೆಳೆಸುವ ಕೆಲಸ ಕೇವಲ ಸರ್ಕಾರ ಮಾಡಿದರೆ ಮಾತ್ರ ಸಾಲದು. ಶಿಕ್ಷಣ ಸಂಸ್ಥೆಗಳು ಮತ್ತು ಸಾಂಸ್ಕೃತಿಕ ಸಂಘಗಳು ಕೈ ಜೋಡಿಸಿ ಭಾಷೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಗೊ.ರು.ಚನ್ನಬಸಪ್ಪ ಅಭಿಪ್ರಾಯಪಟ್ಟರು. ಬೆಂಗಳೂರಿನ ತಮ್ಮ ನಿವಾಸದಲ್ಲಿ ಮದ್ದೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಕನ್ನಡ ಭಾಷೆ ಕಲಿಯುವ ಬಗ್ಗೆ ಕರ್ನಾಟಕದಲ್ಲಿ ನೆಲೆಯೂರಿರುವ ಅನ್ಯ ಭಾಷಿಕರಿಗೆ ಕಾಲಮಿತಿ ನಿಗದಿ ಮಾಡಿ ಕನ್ನಡ ಕಲಿಸುವ ಕೆಲಸವಾಗಬೇಕು. ಈ ವಿಚಾರದಲ್ಲಿ ಸರ್ಕಾರ ಅಗತ್ಯ ಕ್ರಮ ವಹಿಸಬೇಕು ಎಂದು ಸಲಹೆ ಮಾಡಿದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಕೆ.ಎಸ್.ಸುನಿಲ್ ಕುಮಾರ್, ಅಪೂರ್ವ ಚಂದ್ರ, ಉಪಾಧ್ಯಕ್ಷ ಕೆ.ಪಿ.ಶ್ರೀಧರ್ , ಮುಖಂಡರಾದ ಡಿ.ಈರಯ್ಯ, ಯು.ಎಸ್. ಶಿವಕುಮಾರ್ ಇದ್ದರು.