ಸಾರಾಂಶ
ರೋಟರಿ ಸಂಸ್ಥೆಯ ಅಧ್ಯಕ್ಷ ಮತ್ತು ಕಾಲೇಜಿನ ಹಿರಿಯ ವಿದ್ಯಾರ್ಥಿ ರೂಪೇಶ್ ಕುಮಾರ್ ಅವರು ಪ್ರತಿಯೊಬ್ಬ ವಿದ್ಯಾರ್ಥಿಗಳು ತಾವು ವಿಧ್ಯಾಭ್ಯಾಸ ಮಾಡಿದ ಕಾಲೇಜಿಗೆ ಸಹಾಯ ಮಾಡುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕನ್ನಡಪ್ರಭ ವಾರ್ತೆ ನಂಜನಗೂಡು
ಪ್ರಥಮ ಚಿಕಿತ್ಸೆಯು ಯಾವುದೇ ವ್ಯಕ್ತಿಗೆ ಸಣ್ಣ ಅಥವಾ ಗಂಭೀರವಾದ ಅನಾರೋಗ್ಯ ತಕ್ಷಣದ ಸಹಾಯವಾಗುತ್ತದೆ, ಜೀವವನ್ನು ಸಂರಕ್ಷಿಸಲು ಮತ್ತು ಸ್ಥಿತಿಯನ್ನು ಹದಗೆಡದಂತೆ ತಡೆಯಲು ಅಥವಾ ವೈದ್ಯಕೀಯ ಸೇವೆಗಳು ಬರುವವರೆಗೆ ಚೇತರಿಕೆ ಉತ್ತೇಜಿಸಲು ಕಾಳಜಿ ಒದಗಿಸಲಾಗುತ್ತದೆ ಎಂದು ಡಾ. ಧರ್ಮರಾಜ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಪಟ್ಟಣದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರೋಟರಿ ಸಂಸ್ಥೆ ವತಿಯಿಂದ ಪ್ರಥಮ ಚಿಕಿತ್ಸೆ ಮತ್ತು ಹೃದಯ ಸಂಬಂಧಿ ಅರೋಗ್ಯ ಅರಿವಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಮತ್ತು ಕಾಲೇಜಿನ ಹಿರಿಯ ವಿದ್ಯಾರ್ಥಿ ರೂಪೇಶ್ ಕುಮಾರ್ ಅವರು ಪ್ರತಿಯೊಬ್ಬ ವಿದ್ಯಾರ್ಥಿಗಳು ತಾವು ವಿಧ್ಯಾಭ್ಯಾಸ ಮಾಡಿದ ಕಾಲೇಜಿಗೆ ಸಹಾಯ ಮಾಡುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೆ ಮೊಬೈಲ್ ಗೆ ವಿರುದ್ಧವಾಗಿ ಪುಸ್ತಕದ ಕಡೆಗೆ ಗಮನಹರಿಸಿದರೆ ಖಂಡಿತವಾಗಿಯೂ ಸಾಧನೆ ಮಾಡಲು ಸಾದ್ಯ ಎಂದು ಹೇಳಿದರು.ಡಾ.ಪ್ರಿಯಾ ಅವರು ಹೃದಯಘಾತ, ಅಪಘಾತ ಹಾಗೂ ಇನ್ನಿತರ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಅನಾರೋಗ್ಯ ಪಿಡೀತರನ್ನು ರಕ್ಷಣೆ ಮಾಡಬೇಕು ಎಂಬುದರ ಬಗ್ಗೆ ಪ್ರತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಿ.ಆರ್. ದಿನೇಶ್ ಮಾತನಾಡಿ, ಪ್ರಥಮ ಚಿಕಿತ್ಸಾ ಸಾಮಾನ್ಯವಾಗಿ ಮೂಲಭೂತ ವೈದ್ಯಕೀಯ ಅಥವಾ ಮೊದಲ ಪ್ರತಿಕ್ರಿಯೆ ತರಬೇತಿ ಹೊಂದಿರುವ ಯಾರಾದರೂ ಸರಿಯಾಗಿ ನಿರ್ವಹಿಸದರೆ ಅವರ ಜೀವನವನ್ನು ರಕ್ಷಣೆ ಮಾಡಬಹುದು ಎಂದು ಹೇಳಿದರು.ಚೇತನ್, ಹಿರಿಯ ಉಪನ್ಯಾಸಕ ಅಶ್ವಥ್ ನಾರಾಯಣ್ ಗೌಡ, ಲಿಂಗಣ್ಣಸ್ವಾಮಿ, ರಂಗಸ್ವಾಮಿ, ಟಿ.ಕೆ. ರವಿ, ಸ್ವಾಮಿಗೌಡ, ಡಾ. ಸುಮಾ, ಮೀನಾ, ಪ್ರಕಾಶ್ ಅದಿಲ್, ರೂಪ, ರಾಮನುಜ, ನಾಗರಾಜ್ ರೆಡ್ಡಿ, ದಿನೇಶ್, ವಸಂತಕುಮಾರಿ, ಹರೀಶ್, ಪದ್ಮ, ವತ್ಸಲ, ಎನ್. ನಾಗರಾಜ್, ಸುಮಿತ್ರ ಇದ್ದರು.