ಸಾರಾಂಶ
ನಾಗೇಶ್ ಎಜುಕೇಷನ್ ಟ್ರಸ್ಟ್‌ನಿಂದ ಜ್ಞಾನಸಾಗರ ಕನ್ನಡ ಸಪ್ತಾಹ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣನಾವೆಲ್ಲರೂ ಕನ್ನಡ ಭಾಷೆಯನ್ನು ಬಳಕೆ ಮಾಡುತ್ತಿದ್ದರೂ ಸಹ ಇತ್ತೀಚಿನ ದಿಗಳಲ್ಲಿ ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸಲು ಎಲ್ಲಾ ವಿದ್ಯಾರ್ಥಿಗಳು ಕನ್ನಡದ ಕಟ್ಟಾಳುಗಳಾಗಬೇಕು ಎಂಬುದು ಸಂಸ್ಥೆಯ ಉದ್ದೇಶವಾಗಿದೆ ಎಂದು ನಾಗೇಶ್ ಎಜುಕೇಷನ್ ಟ್ರಸ್ಟ್‌ನ ಡಾ.ಕೆ.ನಾಗೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ನಾಗೇಶ್ ಎಜುಕೇಷನ್ ಟ್ರಸ್ಟ್‌ನ ಅಂಗ ಸಂಸ್ಥೆಗಳಾದ ಜ್ಞಾನಸಾಗರ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮತ್ತು ಜ್ಞಾನಸಾಗರ ಪಿಯು ಕಾಲೇಜು ವತಿಯಿಂದ ನಡೆದ ಜ್ಞಾನಸಾಗರ ಕನ್ನಡ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿ ಅಧ್ಯಕ್ಷೀಯ ನುಡಿಯನ್ನು ನುಡಿದ ಡಾ. ಭಾರತಿ ನಾಗೇಶ್ ಮಕ್ಕಳ ದಿನದ ಹಾಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿ ಮಕ್ಕಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ಕಥೆಯ ಮೂಲಕ ಮಕ್ಕಳ ಮನ ಮುಟ್ಟುವಂತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ವೇದಿಕೆ ಕಾರ್ಯಕ್ರಮದ ನಂತರ ಬೋಧಕ ವೃಂದದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಕಲಾಭಾರತಿ ಮಹಾರಾಜ ವತಿಯಿಂದ ನಡೆಸಲಾದ ಚಿತ್ರಕಲೆ ಮತ್ತು ಬರವಣಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಜ್ಞಾನಸಾಗರ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಈಕ್ಷಿತ್ ಆರ್. ಎಂಬ ವಿದ್ಯಾರ್ಥಿ ರಾಷ್ಟ್ರೀಯ ಮಟ್ಟದಲ್ಲಿ ೯ನೇ ಸ್ಥಾನ ಪಡೆದು ಬೆಳ್ಳಿಯ ಪದಕ ಪಡೆದಿದ್ದಾರೆ.
ಕ್ರಾಫ್ಟ್ ವರ್ಕ್, ಕನ್ನಡ ಗೀತೆಗಳ ಗೀತಗಾಯನ, ರಸಪ್ರಶ್ನೆ, ಛದ್ಮವೇಷ, ಪ್ರಬಂಧ, ಕವಿಗಳ ಮಾಹಿತಿ ಸಂಚಿಕೆ ತಯಾರಿಕೆ, ತರಗತಿ ಕೊಠಡಿ ಅಲಂಕಾರ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ವಿಜೇತರಾದರು.ಜ್ಞಾನಸಾಗರ ಶಾಲಾ ಆವರಣದ ವೇದಿಕೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮವು ಸಂಭ್ರಮ ಸಡಗರದಿಂದ ನೆರವೇರಿತು.
ಕಾರ್ಯಕ್ರಮದಲ್ಲಿ ನಾಗೇಶ್ ಎಜುಕೇಷನ್ ಟ್ರಸ್ಟ್‌ನ ನಿರ್ದೇಶಕರಾದ ನಾರಾಯಣ್, ಲಕ್ಷ್ಮೇಗೌಡ, ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಗಳ ಡೀನ್ ಡಾ.ಸುಜಾ ಪಿ.ಎಸ್., ಆಡಳಿತಾಧಿಕಾರಿ ಪಿಲಿಫ್ ಸಿ.ಪಿ., ಸಂಸ್ಥೆಯ ಬೋಧಕ, ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಇದ್ದರು.