ಸಾರಾಂಶ
ಪ್ರತಿಯೊಬ್ಬರೂ ದೇಶ ಸೇವೆ ಮಾಡಲು ಮುಂದಾಗಬೇಕೆಂದು ನಾಗಮಂಗಲದ ಪ್ರೊಬೆಷನರಿ ತಹಸೀಲ್ದಾರ್ ಸುಪ್ರಿತಾ ಹೇಳಿದರು.
ಕನ್ನಡಪ್ರಭ ವಾರ್ತೆ ಕುಣಿಗಲ್ ಪ್ರತಿಯೊಬ್ಬರೂ ದೇಶ ಸೇವೆ ಮಾಡಲು ಮುಂದಾಗಬೇಕೆಂದು ನಾಗಮಂಗಲದ ಪ್ರೊಬೆಷನರಿ ತಹಸೀಲ್ದಾರ್ ಸುಪ್ರಿತಾ ಹೇಳಿದರು.
ಪಟ್ಟಣದ ಜ್ಞಾನಭಾರತಿ ವಿದ್ಯಾಸಂಸ್ಥೆಯಲ್ಲಿ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ, ಎಸ್ಸೆಸ್ಸೆಲ್ಸಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು, ಜ್ಞಾನಭಾರತಿ ಪ್ರೌಢಶಾಲೆಯಲ್ಲಿ ಕಲಿತ ನಂತರ ಸ್ನೇಹಿತರ ಸಲಹೆಯಂತೆ ನಾನು ಇಂಜಿನಿಯರಿಂಗ್ ಪದವಿ ಪಡೆದು ವಿದೇಶದಲ್ಲಿ ವೃತ್ತಿ ಮಾಡುವ ಯೋಜನೆ ಹಾಕಿದ್ದೆ, ಅನಿವಾರ್ಯವಾಗಿ ಒಂದು ದಿನ ಅಮೆರಿಕ ಅಮೆರಿಕ ಕನ್ನಡ ಸಿನಿಮಾ ನೋಡಿದ ನಂತರ ಮನಸ್ಸು ಬದಲಾಯಿತು. ಭಾರತದಲ್ಲಿ ಸೇವೆ ಮಾಡಬೇಕೆಂದು ತೀರ್ಮಾನಿಸಿ ಇಂಜಿನಿಯರಿಂಗ್ ಆಗುವ ಆಸೆಯನ್ನು ಕೈ ಬಿಟ್ಟು ಕೆಎಎಸ್ ಬರೆದು ತಹಸೀಲ್ದಾರ್ ಆಗಿದ್ದೇನೆ. ದೇಶ ಸೇವೆ ಮಾಡುವ ಗುರಿ ಹೊಂದಬೇಕು ಎಂದರು, ಒಕ್ಕಲಿಗ ಸಂಘದ ಅಧ್ಯಕ್ಷ ಬಿಬಿ ರಾಮಸ್ವಾಮಿಗೌಡ ಮಾತನಾಡಿ, ಸಂಘವು ಮಕ್ಕಳಿಗೆ ಬೇಕಾದ ಎಲ್ಲಾ ರೀತಿಯ ಸಹಕಾರಗಳನ್ನು ನೀಡುತ್ತಿದೆ. ಸಂಸ್ಥೆಯ ಮಕ್ಕಳು ಇಂಜಿನಿಯರಿಂಗ್, ಡಾಕ್ಟರ್, ಐಪಿಎಸ್, ಐಎಎಸ್ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಂತಹ ಮಕ್ಕಳಿಗೆ ಸ್ಪೂರ್ತಿ ತರುವ ಉದ್ದೇಶದಿಂದ ಉನ್ನತ ಅಧಿಕಾರಿಗಳನ್ನು ನಮ್ಮಲ್ಲಿ ಕರೆಸಿ ಮಾತನಾಡಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದರು,ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪ್ರಾಧ್ಯಾಪಕ ಡಾ. ಎಂ ಗೋವಿಂದರಾಯ, ಶಿಕ್ಷಣ ಇಲಾಖೆಯ ಸಂಯೋಜಕ ಅಧಿಕಾರಿ ಧನಂಜಯ, ಪ್ರಾಂಶುಪಾಲ ಕಪನಿಪಾಳ್ಯ ರಮೇಶ್, ನಿರ್ದೇಶಕ ಹಾಲ್ಗೆರೆ ಚನ್ನಪ್ಪ, ಗಿರೀಶ್, ಶಿವಣ್ಣಗೌಡ, ಕೆ.ಎಚ್. ಗೌಡ ಸೀತಾರಾಮಯ್ಯ, ಪ್ರಕಾಶ್ ಮೂರ್ತಿ, ಗಂಗಮ್ಮ, ಶ್ರೀನಿವಾಸ್ ಇದ್ದರು.