ಬಸವಣ್ಣವರ ಜಯಂತಿಗೆ ಎಲ್ಲರೂ ಬರಬೇಕು

| Published : Jul 09 2025, 12:27 AM IST

ಸಾರಾಂಶ

ಅನುಭವ ಮಂಟಪದ ಮೂಲಕ ಎಲ್ಲರಿಗೂ ಸಮಾನ ಅವಕಾಶ ನೀಡಿದ ಬಸವಣ್ಣನವರ ಜಯಂತಿಯನ್ನು ಎಲ್ಲರು ಆಚರಿಸಬೇಕು ಎಂದು ಶಾಸಕ ಡಾ. ರಂಗನಾಥ್‌ ಹೇಳಿದರು.

ಕನ್ನಡ ಪ್ರಭ ವಾರ್ತೆ ಕುಣಿಗಲ್

ಅನುಭವ ಮಂಟಪದ ಮೂಲಕ ಎಲ್ಲರಿಗೂ ಸಮಾನ ಅವಕಾಶ ನೀಡಿದ ಬಸವಣ್ಣನವರ ಜಯಂತಿಯನ್ನು ಎಲ್ಲರು ಆಚರಿಸಬೇಕು ಎಂದು ಶಾಸಕ ಡಾ. ರಂಗನಾಥ್‌ ಹೇಳಿದರು.

ಪಟ್ಟಣದ ಖಾಸಗಿ ಹೊಟೆಲ್‌ನಲ್ಲಿ ತಾಲೂಕು ವೀರಶೈವ ಲಿಂಗಾಯಿತ ಸಮಾಜ, ಕುಣಿಗಲ್ ಟೌನ್ ವೀರಶೈವ ಲಿಂಗಾಯತ ಸಮಾಜ, ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಿದ್ದ ಬಸವ ಜಯಂತಿ, ಪ್ರತಿಭಾ ಪುರಸ್ಕಾರ ಮತ್ತು ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಏಕವ್ಯಕ್ತಿ ಅಧಿಕಾರ ವ್ಯವಸ್ಥೆಯನ್ನು ವಿರೊಧಿಸಿದ ಬಸವಣ್ಣ ಪ್ರತಿಯೊಬ್ಬ ಸಮಾಜದ ಸಮುದಾಯದ ವ್ಯಕ್ತಿಗೂ ಅನುಭವ ಮಂಟಪ ಎಂಬಪರಿಕಲ್ಪನೆಯಲ್ಲಿ ಸ್ಥಾನ ಗೌರವ ಸಮಾನತೆ ನಿರ್ಮಾಣ ಮಾಡಿದ್ದರು. ಪ್ರತಿಯೊಬ್ಬರಿಗೂ ಸಮಾನತೆ ಹಾಗೂ ಎಲ್ಲ ಜಾತಿ ಧರ್ಮಗಳಿಗೂ ಏಕಕಾಲದಲ್ಲಿ ನ್ಯಾಯ ದೊರಕಿಸಿಕೊಟ್ಟ ಬಸವಣ್ಣ ಇಂದಿಗೂ ಕೂಡ ಜೀವಂತವಾಗಿದ್ದಾರೆ ಅಂತಹ ವ್ಯಕ್ತಿಗಳ ಹೆಸರಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಬೆಟ್ಟಹಳ್ಲಿ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಮಠಗಳು ಎಲ್ಲರನ್ನೂ ಕೂಡಿಸಿಕೊಂಡು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ. ಬಸವಣ್ಣ ಹೇಳಿದ ಹಾಗೆ ಎಲ್ಲರೂ ಕೂಡ ಒಂದೇ ಸಮಾನರು ಎಂದು ದಲಿತರನ್ನು ಮೇಲ್ವರ್ಗವನ್ನು ಒಂದೇ ರೀತಿ ನೋಡಿದಂತಹ ಮಹಾಪುರುಷ ಬಸವಣ್ಣ ಆದ್ದರಿಂದ ಅವರ ತತ್ವ ಸಿದ್ಧಾಂತ ವಚನಗಳು ಇಂದಿನ ಮಕ್ಕಳ ಭವಿಷ್ಯ ರೂಪಿಸಲು ಉಪಯೊಗಕಾರಿ ಎಂದರು. ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಪರಮೇಶ ಮಾತನಾಡಿ, ಪ್ರತಿ ಗ್ರಾಮದ ಹಳ್ಳಿಗಳಲ್ಲೂ ಆಷಾಢ ಮಾಸದಲ್ಲಿ ಎಲ್ಲರೂ ಒಟ್ಟಾಗಿ ಒಂದು ಕಡೆ ಸೇರಿ ಬಸವನ ತತ್ವ ಸಿದ್ಧಾಂತಗಳನ್ನು ಆಚರಿಸುವುದರ ಜೊತೆಗೆ ಸಾವಿರಾರು ಮಕ್ಕಳ ಶಿಕ್ಷಣಕ್ಕೆ ಸಹಕಾರಿಯಾಗುವುದು ಉತ್ತಮ ಬೆಳವಣಿಗೆ ಎಂದರು. ಮಾಜಿ ಶಾಸಕ ಡಿ ನಾಗರಾಜಯ್ಯ ಮಾತನಾಡಿ, ಎಲ್ಲಾ ಧರ್ಮ ಸಮುದಾಯವನ್ನು ಒಟ್ಟಾಗಿ ಕರೆದುಕೊಂಡು ಹೋಗುತ್ತಿರುವ ವೀರಶೈವ ಲಿಂಗಾಯತ ಧರ್ಮ ತನ್ನ ಸಮಾಜದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದು ಅಭಿನಂದನಿಯ ಎಂದರು.ನೆಲಮಂಗಲದ ಬಸವಣ್ಣ ದೇವರ ಮಠದ ಸಿದ್ದಲಿಂಗ ಸ್ವಾಮೀಜಿ, ಅಂಕನಹಳ್ಳಿ ಮಠದ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ದಲಿಂಗ ಶಿವಾನಂದ ಸ್ವಾಮೀಜಿ, ಹಿತ್ತಲಹಳ್ಳಿ ಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ಭದ್ರಗಿರಿ ಮಠದ ವೀರಭದ್ರ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಕನ್ನಡ ಚಲನಚಿತ್ರ ನಟ ಚೇತನ್, ಶರಣ ಸಾಹಿತ್ಯ ಪರಿಷತ್ ತುಮಕೂರು ಜಿಲ್ಲಾ ಅಧ್ಯಕ್ಷ ಸಿದ್ದರಾಮಯ್ಯ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಿದ್ದಲಿಂಗಪ್ಪ, ಬಿಜೆಪಿ ಮುಖಂಡ ರಾಜೇಶ್ ಗೌಡ, ವಸಂತ್ ಕುಮಾರ್, ಚೇತನ್ , ಶಿವನಂಜಯ್ಯ ಇದ್ದರು.