ಸಾರಾಂಶ
ಹಿರೇಕೆರೂರು: ವ್ಯಕ್ತಿ ತಮ್ಮ ಜೀವಿತಾವಧಿಯಲ್ಲಿ ಯಾವುದೇ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಕೆಲವು ಸಮಯವನ್ನು ಸಾಮಾಜಿಕ ಕಾರ್ಯಗಳಿಗೆ ಮಿಸಲಿಡಬೇಕು. ಅಂದಾಗ ಮಾತ್ರ ಜೀವನ ಪರಿಪೂರ್ಣವಾಗುತ್ತದೆ ಎಂದು ಸ್ಥಾಪನಾ ಅಧಿಕಾರಿ, ಎಂಜೆಎಫ್, ಲಯನ್ ಎಸ್.ಎಚ್. ಕಬ್ಬಿಣಕಂತಿಮಠ ತಿಳಿಸಿದರು.ಪಟ್ಟಣದ ತಾಪಂ ಸಭಾಭವನದಲ್ಲಿ ಲಯನ್ಸ್ ಕ್ಲಬ್ ಹಿರೇಕೆರೂರು ಪರಿವಾರ ಇದರ 3ನೇ ಸಂಸ್ಥಾಪನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಬಹಳ ವರ್ಷಗಳ ಇತಿಹಾಸ ಹೊಂದಿರುವ ಲಯನ್ಸ್ ಕ್ಲಬ್, ಸಾಮಾಜಿಕ ಕಾರ್ಯಗಳಲ್ಲಿ ತನ್ನ ಸೇವೆ ಮಾಡುತ್ತಾ ಬಂದಿದ್ದು, ಸಾರ್ವಜನಿಕರಿಗೆ ಆರೋಗ್ಯ, ವಿದ್ಯಾರ್ಥಿಗಳ ಶಿಕ್ಷಣಕ್ಕೆ, ರಕ್ತದಾನ ಶಿಬಿರ ಹೀಗೆ ವಿವಿದ ಕ್ಷೇತ್ರಗಳಲ್ಲಿ ಕ್ಲಬ್ ಹೆಸರಿನಲ್ಲಿ ಅತ್ಯಂತ ಮಹತ್ವವುಳ್ಳ ಕಾರ್ಯಗಳನ್ನು ಮಾಡುತ್ತಿದೆ ಎಂದರು.ನೂತನ ಅಧ್ಯಕ್ಷ ಡಾ. ನಿರಂಜನ ಮಾನಿಬಣಕಾರ ಮಾತನಾಡಿ, ಎಲ್ಲ ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ ಉತ್ತಮ ಸೇವೆ ಸಲ್ಲಿಸುತ್ತೇನೆ ಎಂದರು.ನೂತನ ಅಧ್ಯಕ್ಷ ಡಾ. ನಿರಂಜನ ಮಾನಿಬಣಕಾರ, ಉಪಾಧ್ಯಕ್ಷ ಶಂಭುಲಿಂಗ ತಂಬಾಕದ, ಕಾರ್ಯದರ್ಶಿ ಡಾ. ಮನು ಮಾಗನೂರ, ಖಜಾಂಚಿ ಮಂಜುನಾಥ ಕಳ್ಳಿಹಾಳ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಡಾ. ಸುನಿತಾ ಮಾನಿಬಣಕಾರ, ಗಾಯಿತ್ರಿ ತಂಬಾಕದ, ಕೋಮಲ್ ಮಾಗನೂರ, ಲತಾ ಗೌಡರ, ಪಾರ್ವತಿ ಕಳ್ಳಿಹಾಳ, ಗೀತಾವಾಣಿ ಸಂಗನಗೌಡ್ರ, ಸುಶೀಲಾ ಜೋಗಿಹಳ್ಳಿ, ದೀಪಿಕಾ ಕಲಾಲ್, ವರ್ಷಾ ಕಲಾಲ್, ವೀಣಾ ಉಪ್ಪಾರ, ರೇಖಾ ಸಿದ್ದಪ್ಪಗೌಡ್ರ, ಲಕ್ಷ್ಮಿ ವೈಶ್ಯರ, ರೂಪಾ ಹೆಡಿಯಾಲ, ಸುರೇಶ ವೈಶ್ಯರ, ಹರೀಶ ಕಲಾಲ್, ಜಗದೀಶ ಹೆಡಿಯಾಲ, ಪ್ರಕಾಶ ಶಿರಗಂಬಿ ಇದ್ದರು.ನಾಳೆ ಆಟೋ ಚಾಲಕರು, ಮಾಲೀಕರಿಗೆ ಅಭಿನಂದನಾ ಸಮಾರಂಭ
ರಾಣಿಬೆನ್ನೂರು: ಸ್ಥಳೀಯ ಎಪಿಎಂಸಿ ಮಾಜಿ ಸದಸ್ಯ ಪರಮೇಶಪ್ಪ ಗೂಳಣ್ಣನವರ ಅವರ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿ ಬಳಗದ ವತಿಯಿಂದ ಜು. 22ರಂದು ಬೆಳಗ್ಗೆ 11ಕ್ಕೆ ನಗರದ ಸಿದ್ಧೇಶ್ವರ ಸಮುದಾಯ ಭವನದಲ್ಲಿ ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದ ಆಟೋ ಚಾಲಕರು, ಮಾಲೀಕರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಹಿರಿಯರಿಗೆ, ಚುನಾಯಿತ ಪ್ರತಿನಿಧಿಗಳಿಗೆ ಗೌರವ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ.ಚಿಕ್ಕಮಗಳೂರ ಬಸವತತ್ವ ಪೀಠ, ಶಿವಮೊಗ್ಗ ಬಸವ ಕೇಂದ್ರದ ಬಸವ ಮುರಳಸಿದ್ದ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಗೌರಮ್ಮ ಗೂಳಣ್ಣನವರ ಅಧ್ಯಕ್ಷತೆ ವಹಿಸುವರು. ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು.ಶಾಸಕ ಪ್ರಕಾಶ ಕೋಳಿವಾಡ, ಮಾಜಿ ಸಚಿವ ಬಿ.ಸಿ. ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಸಂಚಾರ ನಿಯಮಗಳು ಹಾಗೂ ಕಾನೂನು ಸೂಚನೆಗಳ ಕುರಿತು ಶಹರ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ ಮಾಹಿತಿ ನೀಡುವರು. ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ಶಿವರಾಜ ಸಜ್ಜನರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ, ಉಪಾಧ್ಯಕ್ಷ ನಾಗರಾಜ ಪವಾರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ.ಬಸವರಾಜ ಕೇಲಗಾರ, ವರ್ತಕ ಮಲ್ಲೇಶಪ್ಪ ಅರಕೇರಿ, ಬಿಜೆಪಿ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ, ಕೆ.ಶಿವಲಿಂಗಪ್ಪ, ಭರಮಪ್ಪ ಪೂಜಾರ ಇನ್ನಿತರರು ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.