ಅಂಬಿಗರ ಚೌಡಯ್ಯನವರ ಸಂದೇಶ, ಶ್ರೇಷ್ಠ ವಚನಗಳನ್ನು ಪ್ರತಿಯೊಬ್ಬರು ಪಾಲಿಸಬೇಕು

| Published : Feb 21 2025, 12:49 AM IST

ಅಂಬಿಗರ ಚೌಡಯ್ಯನವರ ಸಂದೇಶ, ಶ್ರೇಷ್ಠ ವಚನಗಳನ್ನು ಪ್ರತಿಯೊಬ್ಬರು ಪಾಲಿಸಬೇಕು
Share this Article
  • FB
  • TW
  • Linkdin
  • Email

ಸಾರಾಂಶ

Everyone should follow Chowdary's philosophy: Umesh

-ಚೌಡಯ್ಯನವರ ತತ್ವಾದರ್ಶ ಪ್ರತಿಯೊಬ್ಬರು ಪಾಲಿಸಿ: ಉಮೇಶ್

-----

ಕನ್ನಡಪ್ರಭ ವಾರ್ತೆ ವಡಗೇರಾ

ನಿಜಶರಣ ಅಂಬಿಗರ ಚೌಡಯ್ಯನವರು ಅರಿವೇ ತನಗೆ ಗುರು ಎಂದು ಹೇಳಿದ ಅವರ ಸಂದೇಶ ಶ್ರೇಷ್ಠ ವಚನಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕೆ. ಮುದ್ನಾಳ ಹೇಳಿದರು.

ತಾಲೂಕಿನ ಕ್ಯಾತನಾಳ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಸಂಘದ ವತಿಯಿಂದ ನಡೆದ ನೂತನ ಚೌಡಯ್ಯನವರ ನಾಮಫಲಕ ಲೋಕಾರ್ಪಣೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜ ಬಾಂಧವರು ಚೌಡಯ್ಯನವರ ತತ್ವಾದರ್ಶಗಳು ಪಾಲನೆ ಮಾಡುವುದರ ಜೊತೆಗೆ ಮೂಢನಂಬಿಕೆಗಳಿಂದ ದೂರವಿರಬೇಕು. ಯುವಕರು ದುಶ್ಚಟಗಳಿಗೆ ಬಲಿಯಾಗದೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಸಮಾಜ ಮುಖ್ಯವಾಹಿನಿಗೆ ಬರಲು ಎಲ್ಲರೂ ಶ್ರಮಿಸಬೇಕೆಂದರು.

ಸಾನಿಧ್ಯವಹಿಸಿದ್ದ ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ಆರ್ಶೀವಚನ ನೀಡಿದರು. ಭೀಮಣ್ಣಗೌಡ ದಳಪತಿ ಧ್ವಜಾರೋಹಣ ನೆರವೇರಿಸಿದದರು

ಅಂಬ್ರಣ್ಣಗೌಡ ಪೊಲೀಸ್ ಪಾಟೀಲ್, ಹಣಮಂತ್ರಾಯಗೌಡ ಪೊಲೀಸ್ ಪಾಟೀಲ್, ಬಸ್ಸು ಶಹಾಪುರ, ಮಲ್ಲೇಶಿ, ಮಲ್ಲಿಕಾರ್ಜುನ ಠಾಣಗುಂದಿ, ನಾಡಗೌಡ ಟಿ. ಪಾಟೀಲ್, ಮಹಾದೇವಪ್ಪ ಸಾಹುಕಾರ, ಮಹಾದೇವಪ್ಪ ವಿಶ್ವಕರ್ಮ, ಹುಸೇನಸಾಬ ನಾಯ್ಕೋಡಿ, ಮಲ್ಲಯ್ಯ ಮಡಗಣಿ, ದೇವಪ್ಪ ಮೇಸ್ತ್ರಿ, ಆದಪ್ಪ ಮಡಗಾಣಿ, ವಿಜಯಕುಮಾರ ಹುಡೇದ, ಬಾಪುಗೌಡ ಬಿ ಪಾಟೀಲ್ ಇದ್ದರು. ನಬೀಸಾಬ ನಾಯ್ಕೋಡಿ ನಿರೂಪಿಸಿದರು. ಬಸವರಾಜ ಎನ್. ಸ್ವಾಗತಿಸಿದರು. ನಾಡಗೌಡ ವರದಿಸಿದರು.

-----ಫೋಟೊ: ವಡಗೇರಾ ತಾಲೂಕಿನ ಕ್ಯಾತನಾಳ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಸಂಘದ ವತಿಯಿಂದ ನೂತನ ಚೌಡಯ್ಯನವರ ನಾಮಫಲಕ ಲೋಕಾರ್ಪಣೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ನಡೆಯಿತು.

20ವೈಡಿಆರ್2