ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಎಲ್ಲರಿಗೂ ಸಾಮಾಜಿಕ ಸಮಾನತೆ, ಆರ್ಥಿಕ ಸಮಾನತೆ ಸಿಗಬೇಕಾದರೆ ಪ್ರತಿಯೊಬ್ಬರಿಗೂ ಅವಕಾಶಗಳನ್ನು ಕಲ್ಪಿಸಿ ಕಲ್ಪಿಸಿಕೊಟ್ಟು ಸಾಮಾಜಿಕ, ಆರ್ಥಿಕ ಶಕ್ತಿ ತುಂಬಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಇಲ್ಲಿಗೆ ಸಮೀಪದ ಕೊಟ್ಟಮುಡಿಯ ಮರ್ಕಜುಲ್ ಹಿದಾಯ ಎಜುಕೇಶನ್ ಸೆಂಟರ್ ವತಿಯಿಂದ 6 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಪ್ರಥಮ ದರ್ಜೆ ಕಾಲೇಜು ಹಾಗೂ ಹೆಣ್ಣು ಮಕ್ಕಳ ವಸತಿಗೃಹದ ನೂತನ ಕಟ್ಟಡವನ್ನು ಗುರುವಾರ
ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು .ಶಿಕ್ಷಣ ಯಾವುದೇ ಧರ್ಮ ,ಜಾತಿ, ಭಾಷೆಗೆ ಮೀಸಲಲ್ಲ ಎಂದ ಸಿಎಂ, ನೂರಾರು ವರ್ಷಗಳ ಕಾಲ ಬಹುಸಂಖ್ಯಾತ ಜನ ಶಿಕ್ಷಣದಿಂದ ವಂಚಿತರಾದರು. ಆದ್ದರಿಂದ ಸಮಾಜದಲ್ಲಿ ಅಸಮಾನತೆಯನ್ನು ಕಾಣುತ್ತಿದ್ದೇವೆ. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗುವಂತೆ ಆಗಬೇಕಾದದ್ದು ಇಂದಿನ ಅವಶ್ಯಕತೆ ಎಂದರು. ಸಮಾರಂಭದಲ್ಲಿ ಗೃಹಮಂತ್ರಿ ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜ್, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಯುವಜನ ಮತ್ತು ಕ್ರೀಡಾ ಹಾಗೂ ಪರಿಶಿಷ್ಟ ಬುಡಕಟ್ಟು ಪಂಗಡಗಳ ಅಭಿವೃದ್ಧಿ ಸಚಿವ ಬಿ.ನಾಗೇಂದ್ರ, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಸ್. ಸಿ ಮಹದೇವಪ್ಪ, ಪಶು ಸಂಗೋಪನ ಸಚಿವ ಕೆ. ವೆಂಕಟೇಶ್ ,ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಉದ್ಯಮಿ ಇಮ್ರಾನ್ ಸಿದ್ದಿಕಿ, ಕೆಪಿಸಿಸಿ ಮುಖಂಡ ಸುಹೈಲ್ ಖಾದರ್, ಸಯ್ಯದ್ ಕಿಲ್ಲೂರ್ ತಂಗಳ್, ಅಶ್ರಫ್ ಅಪ್ಸನಿ, ರಾಜ್ಯ ವಕ್ಫ್ ಮಮಡಳಿ ಮಾಜಿ ಅಧ್ಯಕ್ಷ ಶಾಫಿ ಸಅದಿ, ಅಬ್ದುಲ್ ರಶೀದ್,ಜೈನಿ ಕಾಮಿಲ್ ಸಖಾಫಿ ಸುಂಟಿಕೊಪ್ಪ ಲತೀಫ್, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಸ ಕೊಟ್ಟಮುಡಿ, ಕೊಡಗು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಅಶೋಕ್ ಎಸ್. ಆಲೂರು, ಕುಲಸಚಿವ ಡಾ. ಸೀನಪ್ಪ, ಇಲ್ಯಾಸ್ ತಂಗಳ್, ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯ ಮೊಯಿದು, ಹಮೀದ್ ಕಬಡಕೇರಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ, ಕಾರ್ಯದರ್ಶಿ
ಮಹಮ್ಮದ್ ಹಾಜಿ ಕುಂಜಿಲ, ಸಂಸ್ಥೆಯ ಪದಾಧಿಕಾರಿಗಳು, ಧರ್ಮಗುರುಗಳು, ಪಕ್ಷ ಹಾಗೂ ಸಂಘ ಸಂಸ್ಥೆಗಳಪದಾಧಿಕಾರಿಗಳು ಸೇರಿದಂತೆ ಹಲ ಗಣ್ಯರು ಪಾಲ್ಗೊಂಡಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))