ಸರ್ವರೂ ಎಸ್.ಬಿ.ಐ ಜೀವ ವಿಮೆ ಸೌಲಭ್ಯ ಪಡೆಯಿರಿ: ತಮ್ಮಯ್ಯ

| Published : Feb 28 2025, 12:46 AM IST

ಸಾರಾಂಶ

ಚಿಕ್ಕಮಗಳೂರು, ಕಾರ್ಮಿಕರಿಂದ ಹಿಡಿದು ಉನ್ನತ ಉದ್ಯೋಗದಲ್ಲಿ ದುಡಿಯುತ್ತಿರುವವರೆಗೂ ಪ್ರಸ್ತುತ ಜೀವವಿಮೆ ತುಂಬಾ ಅತ್ಯವಶ್ಯಕ ಎಂದು ಶಾಸಕ ಎಚ್.ಡಿ ತಮ್ಮಯ್ಯ ತಿಳಿಸಿದರು.

ಎಸ್.ಬಿ.ಐ ಲೈಫ್ ಮಿತ್ರ ಮೆಗಾಮೀಟ್-೨೦೨೫ ಕಾರ್ಯಕ್ರಮ ಉದ್ಘಾಟನೆಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಾರ್ಮಿಕರಿಂದ ಹಿಡಿದು ಉನ್ನತ ಉದ್ಯೋಗದಲ್ಲಿ ದುಡಿಯುತ್ತಿರುವವರೆಗೂ ಪ್ರಸ್ತುತ ಜೀವವಿಮೆ ತುಂಬಾ ಅತ್ಯವಶ್ಯಕ ಎಂದು ಶಾಸಕ ಎಚ್.ಡಿ ತಮ್ಮಯ್ಯ ತಿಳಿಸಿದರು.ಗುರುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಎಸ್.ಬಿ.ಐ ಲೈಫ್ ಮಿತ್ರ ಮೆಗಾಮೀಟ್-೨೦೨೫ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ೧೨ನೇ ಶತಮಾನದಲ್ಲಿ ವಿಶ್ವ ಗುರು ಬಸವಣ್ಣನವರು ಹೇಳಿದಂತೆ ಕಾಯಕವೇ ಕೈಲಾಸ ಯಾರು ಮಾಡುತ್ತಾರೆ ಅವರು ಜೀವನದಲ್ಲಿ ನೆಮ್ಮದಿಯಿಂದ ಬದುಕುತ್ತಾರೆ ಎಂದರು.

ಎಸ್.ಬಿ.ಐ ಲೈಫ್ ಏಜೆಂಟ್ ಆಗಿ ಕಾಯಕ ಮಾಡುತ್ತಿರುವ ನೀವುಗಳು ಕಾರ್ಮಿಕ ಅಥವಾ ಅಧಿಕಾರಿಗಳಿಗೆ ಜೀವನದಲ್ಲಿ ಯಶಸ್ಸು ಸಿಗಬೇಕೆಂಬ ನಿಟ್ಟಿನಲ್ಲಿ ನಿಮ್ಮ ಗುರಿ ಇಟ್ಟುಕೊಂಡಿರುವುದಕ್ಕೆ ಜೀವವಿಮೆ ಅಗತ್ಯ ಎಂದು ಹೇಳಿದರು.ನಿಗದಿತ ಸಮಯಕ್ಕೆ ಪಾಲಿಸಿ ಹಣ ಪ್ರಾಮಾಣಿಕವಾಗಿ ದೊರೆಯುವಂತೆ ಮಾಡಬೇಕಾದ ಬಹುದೊಡ್ಡ ಜವಾಬ್ದಾರಿ ವಿಮಾ ಏಜೆಂಟ್ ರ ಮೇಲಿದೆ. ಈ ನಿಟ್ಟಿನಲ್ಲಿ ೨೦೦೧ ರಲ್ಲಿ ಆರಂಭವಾದ ಎಸ್.ಬಿ.ಐ ವಿಮೆ ಇಂದು ಎಲ್ಲರ ವಿಶ್ವಾಸ ಗಳಿಸಿದ್ದು, ಭಾರತೀಯ ಜೀವ ವಿಮಾ ನಿಗಮ (ಎಲ್.ಐ.ಸಿ) ಯನ್ನು ಮೀರಿಸಿದೆ ಎಂದು ಶ್ಲಾಘಿಸಿದರು.ಎಲ್.ಐ.ಸಿ ೨೭೦೦ ಕೋಟಿ ವಹಿವಾಟು ಇದ್ದರೆ ಪ್ರಸ್ತುತ ಎಸ್.ಬಿ.ಐ ಜೀವ ವಿಮೆ ₹೩೫೦೦ಕೋಟಿ ವಹಿವಾಟು ದಾಖಲಿಸಿದೆ ಎಂಬ ಮಾಹಿತಿ ಇದ್ದು, ಸಮಾಜದಲ್ಲಿ ಸಾವು-ನೋವು ಸಂಭವಿಸಿದಾಗ ಕುಟುಂಬಕ್ಕೆ ಈ ರೀತಿ ಉಳಿತಾಯ ಮಾಡಿದ ಹಣ ಸಂಕಷ್ಟದಲ್ಲಿ ನೆರವಾಗಲಿದೆ ಎಂದು ಹೇಳಿದರು.ಇಂತಹ ಜೀವ ವಿಮಾ ಕಂಪನಿಗಳಲ್ಲಿ ಹಣ ಉಳಿತಾಯ ಮಾಡಿದರೆ, ಮುಂದೆ ಆ ಕುಟುಂಬ ಸಂಕಷ್ಟಗಳನ್ನು ಎದುರಿಸಲು ಆರ್ಥಿಕ ಸ್ವಾವಲಂಭಿ ಆಗುತ್ತದೆ. ಎಸ್.ಬಿ.ಐ ಬ್ಯಾಂಕಿನ ಅಂಗಸಂಸ್ಥೆ ಎಸ್.ಬಿ.ಐ ಜೀವ ವಿಮಾ ಕಂಪನಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.ಎಸ್.ಬಿ.ಐ ಜೀವ ವಿಮೆ ಶಾಖಾ ವ್ಯವಸ್ಥಾಪಕ ವಿಜಯ್‌ಕುಮಾರ್ ಮಾತನಾಡಿ, ಲೈಫ್ ಮಿತ್ರ ಎಂಬ ಪಾಲಿಸಿ ಬಗ್ಗೆ ನಮ್ಮ ಶಾಖೆ ಸಲಹೆಗಾರರು ಕಳೆದ ಡಿಸೆಂಬರ್ ಮಾಹೆಯಲ್ಲಿ ಸುಮಾರು ₹೩೫೦೦ ಕೋಟಿ ಪಾಲಿಸಿ ಮಾಡಿಸಿದ್ದಾರೆ. ಚಿಕ್ಕಮ ಗಳೂರಿನಲ್ಲಿ ₹೬ವರೆ ಕೋಟಿ ವಹಿವಾಟು ನಡೆಸಿ ಪಾಲಿಸಿ ನೀಡಿದ್ದಾರೆ ಎಂದು ವಿವರಿಸಿದರು.ಒಂದು ಕುಟುಂಬವನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಎಸ್.ಬಿ.ಐ ಲೈಫ್ ಹಲವು ಬಗೆಯ ಯೋಜನೆಗಳನ್ನು ರೂಪಿಸಿದೆ. ಗ್ರಾಹಕರು ಪಾವತಿಸಿದ ವಿಮಾ ಹಣವನ್ನು ಶೇ.೧೦೦ ರಷ್ಟು ವಾಪಸ್ಸು ನೀಡುವುದಾಗಿ ಗ್ಯಾರಂಟಿ ನೀಡುತ್ತೇವೆ ಎಂದು ಭರವಸೆ ನೀಡಿದರು.ಒಬ್ಬ ವ್ಯಕ್ತಿ ₹೫ ಲಕ್ಷ ಗಳ ಪಾಲಿಸಿ ಮಾಡಿಸಿದ್ದಲ್ಲಿ ವಾರ್ಷಿಕ ₹೫ ಸಾವಿರ ಪ್ರೀಮಿಯಂ ಕಂತು ಕಟ್ಟಲು ಬರುತ್ತದೆ. ಜಿಲ್ಲೆಯ ಎಲ್ಲ ಎಸ್.ಬಿ.ಐ ಗ್ರಾಹಕರು ಈ ವಿಮಾ ಸೌಲಭ್ಯ ಪಡೆಯಬೇಕೆಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ವಿಭಾಗೀಯ ವ್ಯವಸ್ಥಾಪಕ ಉದಯ ಶೆಟ್ಟಿಗಾರ್, ಗೌತಮ್, ತರಬೇತಿ ಮುಖ್ಯಸ್ಥ ಸಕಲ ಮತ್ತಿತರರು ಉಪಸ್ಥಿತರಿದ್ದರು.

ಕ್ಯಾಪ್ಷನ್‌:

ಚಿಕ್ಕಮಗಳೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಆಯೋಜಿಸಲಾಗಿದ್ದ ಎಸ್.ಬಿ.ಐ ಲೈಫ್ ಮಿತ್ರ ಮೆಗಾಮೀಟ್-೨೦೨೫ ಕಾರ್ಯಕ್ರಮವನ್ನು ಶಾಸಕ ಎಚ್.ಡಿ ತಮ್ಮಯ್ಯ ಉದ್ಘಾಟಿಸಿದರು.