ಸಾರಾಂಶ
: ಡಾ.ಬಿ.ಆರ್. ಅಂಬೇಡ್ಕರ್ ತತ್ವವನ್ನು ಅಳವಡಿಸಿಕೊಳ್ಳಬೇಕು ಎಂದು ಜಿಪಂ ಮಾಜಿ ಸದಸ್ಯ ರತ್ನಕುಮಾರ್ ಹೇಳಿದರು.
ಗುಬ್ಬಿ: ಡಾ.ಬಿ.ಆರ್. ಅಂಬೇಡ್ಕರ್ ತತ್ವವನ್ನು ಅಳವಡಿಸಿಕೊಳ್ಳಬೇಕು ಎಂದು ಜಿಪಂ ಮಾಜಿ ಸದಸ್ಯ ರತ್ನಕುಮಾರ್ ಹೇಳಿದರು.
ಪಟ್ಟಣದ ಡಾ.ಬಾಬು ಜಗಜೀವ ಭವನದಲ್ಲಿ ಪ್ರೊ. ಬಿ.ಕೃಷ್ಣಪ್ಪ 86ನೇ ಜಯಂತಿ ಹಾಗೂ ಕ.ದ.ಸಂ.ಸ 50ನೇ ವರ್ಷದ, ತಾಲೂಕು ಸಮಿತಿ ಪುನರಚನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈಗಿನ ಯುವ ಪೀಳಿಗೆ ಸಂಘಟನೆಯಲ್ಲಿ ಆಸಕ್ತಿ ವಹಿಸುತ್ತಿಲ್ಲ. ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈಗಿನ ಯುವ ದಲಿತರು ಡಾ.ಅಂಬೇಡ್ಕರ್ ಬರೆದಿರುವ ಪುಸ್ತಕಗಳನ್ನು ಈಗಿನ ವಿದ್ಯಾರ್ಥಿಗಳು ಓದಿ ತಿಳಿದಾಗ ಮಾತ್ರ ಸಂಘಟಿಕರಾಗಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.ಜಿಲ್ಲಾ ಸಮಿತಿಯ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ, ಹಿಂದುಳಿದ, ಧಾರ್ಮಿಕ ಅಲ್ಪಸಂಖ್ಯಾತರ ಹಾಗೂ ಮಹಿಳೆಯರನ್ನು ಶೈಕ್ಷಣಿಕ, ಆರ್ಥಿಕವಾಗಿ ಬಲಿಷ್ಠಗೊಳಿಸಲು ಹೊಸದಾಗಿ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯ ಸದಸ್ಯರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದರು.
ದಲಿತ ಮುಖಂಡ ಜಿ.ವಿ.ಮಂಜುನಾಥ್ ಮಾತನಾಡಿ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸದೃಢಗೊಳಿಸುವ ಹೋರಾಟ ನಿರಂತರ ಮಾಡಲು ತಾಲೂಕು ಸಮಿತಿ ಸಿದ್ಧವಿರಬೇಕು. ಯುವಕರನ್ನು ಹೆಚ್ಚು ತೊಡಗಿಸಿಕೊಂಡು ವಿದ್ಯಾವಂತರ ಸಂಘಟನೆ ಎಲ್ಲಾ ರೀತಿಯ ಶೋಷಿತರ ಪರ ನಿಲ್ಲಬೇಕು. ಅಧಿಕಾರಿಗಳ ಬಳಿ ನಮ್ಮ ಹಕ್ಕು ಪ್ರತಿಪಾದಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ಸಂವಿಧಾನ ಕಾನೂನು ಪಡೆಯಬೇಕು ಎಂದರು.ಜಿಲ್ಲಾ ಸಮಿತಿ ಸಂಘಟನಾ ಕಾರ್ಯದರ್ಶಿ ಹರೀಶ್, ಲಿಂಗ ದೇವರು, ಮುಖಂಡ ರವಿ ಕುಮಾರ್, ಕಲ್ಲೇಶ್, ರಾಘವೇಂದ್ರ, , ಸಂಚಾಲಕರು ಜಿ.ಎನ್. ಪಾಂಡುರಂಗಯ್ಯ, ಎಂ .ಮೂರ್ತಿ, ಚಿಕ್ಕಣ್ಣಯ್ಯ, ನಾಗಭೂಷಣ್ ಭಾಗವಹಿಸಿದ್ದರು.