ಭ್ರಷ್ಟಾಚಾರ ಮುಕ್ತ ಸುಳ್ಯ ತಾಲೂಕಿಗೆ ಎಲ್ಲರೂ ಕೈ ಜೋಡಿಸಿ: ಶಾಸಕಿ ಭಾಗೀರಥಿ ಮುರುಳ್ಯ

| Published : Aug 16 2025, 12:02 AM IST

ಭ್ರಷ್ಟಾಚಾರ ಮುಕ್ತ ಸುಳ್ಯ ತಾಲೂಕಿಗೆ ಎಲ್ಲರೂ ಕೈ ಜೋಡಿಸಿ: ಶಾಸಕಿ ಭಾಗೀರಥಿ ಮುರುಳ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸುಳ್ಯ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಸುಳ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲೂಕು ಸ್ವಾತಂತ್ರ್ಯೋತ್ಸವ ದಿನಾಚರಣಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಸುಳ್ಯ

ಸ್ವಾತಂತ್ರ್ಯ ಸಂಗ್ರಾಮದಲ್ಲಿ ತ್ಯಾಗ, ಬಲಿದಾನ ಮಾಡಿದವರನ್ನು ನಾವು ಈ ದಿನ ಸ್ಮರಣೆ ಮಾಡಿಕೊಂಡು ಈ ದೇಶಕ್ಕೆ ನಾನೇನು ಕೊಡಲು ಸಾಧ್ಯ ಎನ್ನುವ ಕುರಿತು ಚಿಂತನೆ ನಡೆಸಬೇಕು. ಹಾಗೆಯೇ ಭ್ರಷ್ಟಾಚಾರ ಮುಕ್ತ ಸುಳ್ಯ ತಾಲೂಕು ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಸುಳ್ಯ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಸುಳ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ತಾಲೂಕು ಸ್ವಾತಂತ್ರ್ಯೋತ್ಸವ ದಿನಾಚರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಮಂಜುಳಾ, ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಸುಳ್ಯ ತಾಲೂಕಿನ ಕೊಡುಗೆ ಅವಿಸ್ಮರಣೀಯ ಎಂದರು.ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷೆ

ಶಶಿಕಲಾ ಎ. ನೀರಬಿದಿರೆ, ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ.ಮುಸ್ತಫಾ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ.ಚಿದಾನಂದ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ನಗರ ಪಂಚಾಯಿತಿ ಮಾಜಿ ಅಧ್ಯಕ್ಷರಾದ ವಿನಯಕುಮಾರ್ ಕಂದಡ್ಕ, ಎಂ.ವೆಂಕಪ್ಪ ಗೌಡ, ನಗರ ಪಂಚಾಯಿತಿ ಉಪಾಧ್ಯಕ್ಷ ಬುದ್ಧ ನಾಯ್ಕ್, ಸದಸ್ಯರಾದ ಸುಧಾಕರ ಕುರುಂಜಿಭಾಗ್, ಉಮ್ಮರ್ ಕೆ.ಎಸ್., ಶೀಲಾ ಕುರುಂಜಿ, ಶಿಲ್ಪಾ ಸುದೇವ್, ಸುಶೀಲಾ ಕಲ್ಲುಮುಟ್ಲು, ಡೇವಿಡ್ ಧೀರಾ ಕ್ರಾಸ್ತ, ನಾಮನಿರ್ದೇಶನ ಸದಸ್ಯರಾದ ರಾಜು ಪಂಡಿತ್, ಸಿದ್ದೀಕ್ ಕೊಕ್ಕೊ, ಮುಖ್ಯಾಧಿಕಾರಿ ಬಸವರಾಜು, ಸುಳ್ಯ ಸ.ಪ.ಪೂ. ಕಾಲೇಜು ಪ್ರಾಂಶುಪಾಲ ಮೋಹನ್ ಗೌಡ ಬೊಮ್ಮೆಟ್ಟಿ, ಉಪಪ್ರಾಂಶುಪಾಲ ಪ್ರಕಾಶ ಮೂಡಿತ್ತಾಯ, ಸರ್ಕಲ್ ಇನ್‌ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್ ಮೊದಲಾದವರು ಇದ್ದರು. ಸಮಾರಂಭದಲ್ಲಿ ನಿವೃತ್ತ ಸೈನಿಕರಾದ ಉತ್ತಪ್ಪ ಗೌಡ ಮುಂಡೋಡಿ ಹಾಗೂ ಚೆನ್ನಪ್ಪ ಗೌಡ ಬಿ. ಅವರನ್ನು ಸನ್ಮಾನಿಸಲಾಯಿತು. ಉತ್ತಪ್ಪ ಗೌಡರ ಪರವಾಗಿ ಮಾಜಿ ಸೈನಿಕ ಸಂಘದ ಕಾರ್ಯದರ್ಶಿ ಗುರು ಪ್ರಸಾದ್ ರೈ ಸನ್ಮಾನ ಸ್ವೀಕರಿಸಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಇ.ಒ. ರಾಜಣ್ಣ ಸ್ವಾಗತಿಸಿದರು. ಶಿಕ್ಷಣ ಸಂಯೋಜಕಿ ಸಂಧ್ಯಾ ಶೈಕ್ಷಣಿಕ ಸಾಧಕರನ್ನು ಪರಿಚಯಿಸಿದರು. ಶಿಕ್ಷಕಿ ಚಂದ್ರಮತಿ ಕಾರ್ಯಕ್ರಮ ನಿರೂಪಿಸಿದರು. ಬಿಇಒ ಶೀತಲ್ ಯು.ಕೆ. ವಂದಿಸಿದರು.ಎಸ್.ಐ. ಸಂತೋಷ್ ಪಥಸಂಚಲನದ ನೇತೃತ್ವ ವಹಿಸಿದ್ದರು. ಪೊಲೀಸ್, ಗೃಹರಕ್ಷಕ, ನಿವೃತ್ತ ಸೈನಿಕರ ಸಂಘ, ಎನ್‌ಸಿಸಿ, ಸ್ಕೌಟ್ ಗೈಡ್ಸ್, ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.