ಪ್ರತಿಯೊಬ್ಬರೂ ಶೌಚಾಲಯವನ್ನು ಸ್ವಚ್ಛವಾಗಿಡಬೇಕು: ಮಂಜುನಾಥ್‌

| Published : Aug 19 2024, 12:51 AM IST

ಸಾರಾಂಶ

ನರಸಿಂಹರಾಜಪುರ: ಪ್ರತಿಯೊಬ್ಬರೂ ಶೌಚಾಲಯಗಳನ್ನು ಬಳಸಿ ಶುಚಿಯಾಗಿಡಬೇಕು ಎಂದು ಕಡಹಿನಬೈಲು ಗ್ರಾಪಂ ಸದಸ್ಯ ಎ.ಬಿ.ಮಂಜುನಾಥ್ ಹೇಳಿದರು.

ಕಡಹಿನಬೈಲು ಗ್ರಾಪಂ ಗ್ರಂಥಾಲಯದ ನೂತನ ಶೌಚಾಲಯ ಉದ್ಘಾಟನೆನರಸಿಂಹರಾಜಪುರ: ಪ್ರತಿಯೊಬ್ಬರೂ ಶೌಚಾಲಯಗಳನ್ನು ಬಳಸಿ ಶುಚಿಯಾಗಿಡಬೇಕು ಎಂದು ಕಡಹಿನಬೈಲು ಗ್ರಾಪಂ ಸದಸ್ಯ ಎ.ಬಿ.ಮಂಜುನಾಥ್ ಹೇಳಿದರು.ಶೆಟ್ಟಿಕೊಪ್ಪದಲ್ಲಿ ಕಡಹಿನಬೈಲು ಗ್ರಾಪಂ ಗ್ರಂಥಾಲಯದಲ್ಲಿ ತಾಪಂ ಅನುದಾನದಲ್ಲಿ ನಿರ್ಮಾಣವಾದ ನೂತನ ಶೌಚಾಲಯವನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ಕಳೆದ ವರ್ಷ ತಾಪಂ ಅನುದಾನದಲ್ಲಿ ಕಡಹಿನಬೈಲು ಗ್ರಾಪಂ ಗ್ರಂಥಾಲಯದ ಶೌಚಾಲಯ ನಿರ್ಮಾಣಕ್ಕಾಗಿ 3.50 ಲಕ್ಷ ರು. ಮಂಜೂರಾಗಿತ್ತು. ಇದರಲ್ಲಿ ಗ್ರಂಥಾಲಯದ ಶೌಚಾಲಯ ಹಾಗೂ ಗ್ರಂಥಾಲಯದ ಮುಂಭಾಗದಲ್ಲಿ ಇಂಟರ್‌ ಲಾಕ್‌ ಹಾಕಲಾಗಿದೆ ಎಂದರು.ಗ್ರಾಪಂ ಅಧ್ಯಕ್ಷೆ ಶೈಲಾಮಹೇಶ್ ಶೌಚಾಲಯ ಉದ್ಘಾಟಿಸಿ ಮಾತನಾಡಿ, ಗ್ರಾಮಸ್ಥರು ಸ್ವಚ್ಛತೆ ಕಾಪಾಡಬೇಕು. ಅಂಚೆ ಕಚೇರಿ, ಗ್ರಂಥಾಲಯ, ಬಸ್ ನಿಲ್ದಾಣ ಇರುವ ಈ ಸೂಕ್ತ ಸ್ಥಳದಲ್ಲಿಯೇ ಶೌಚಾಲಯ ನಿರ್ಮಾಣ ಮಾಡಲಾಗಿದೆ ಎಂದರು.ಗ್ರಾಪಂ ಉಪಾಧ್ಯಕ್ಷ ಸುನೀಲ್‌ಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷ ಗೇರ್‌ ಬೈಲ್‌ನಟರಾಜ್ ಶಾಸಕರ ಗಮನಕ್ಕೆ ತಂದು ಶೌಚಾಲಯ ನಿರ್ಮಾಣಕ್ಕೆ ಅನುದಾನ ಮೀಸಲಿರಿಸಲು ಸಹಕಾರ ನೀಡಿದ್ದಾರೆ. ನಾವು ಪ್ರಯತ್ನ ಮಾಡಿದ್ದರ ಫಲವಾಗಿ ಇಂದು ಶೌಚಾಲಯ ನಿರ್ಮಾಣವಾಗಿದೆ ಎಂದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಗೇರ್‌ಬೈಲ್‌ ನಟರಾಜ್, ಮೆಸ್ಕಾಂ ಇಂಜಿನಿಯರ್ ಶಶಿಕುಮಾರ್‌, ಕೆಇಬಿ ಲೈನ್ ಮ್ಯಾನ್ ಗಳಾದ ಕಿರಣ್, ಪವನ್‌, ನಿಖಿಲ್‌ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಉಪಾಧ್ಯಕ್ಷ ಸುನೀಲ್‌ಕುಮಾರ್, ಸದಸ್ಯರಾದ ಚಂದ್ರಶೇಖರ್, ಅಶ್ವಿನಿ, ವಾಣಿನರೇಂದ್ರ, ಚಂದ್ರಶೇಖರ್, ಲಿಲ್ಲಿ, ಪೂರ್ಣಿಮಾ, ಮುಖಂಡರಾದ ಎನ್.ಎಂ.ಕಾಂತರಾಜ್, ಮಳಲಿ ಶ್ರೀನಿವಾಸ್, ಕರುಗುಂದ ನಂದೀಶ್, ಪಿಡಿಒ ವಿಂದ್ಯಾ ಇದ್ದರು.ಇದ್ದರು.