ಪ್ರತಿಯೊಬ್ಬರು ಕಾನೂನು ಅರಿತು ನಡೆಯಿರಿ

| Published : Dec 21 2023, 01:16 AM IST

ಸಾರಾಂಶ

ಬೈಕ್‌ ಸೇರಿದಂತೆ ಇನ್ನಿತರ ವಾಹನ ಚಾಲನೆ ಮಾಡುವವರು ಕಡ್ಡಾಯವಾಗಿ ಲೈಸನ್ಸ್‌ ಹೊಂದಬೇಕು. ವಾಹನಗಳಿಗೆ ವಿಮಾ ಹಾಗೂ ರಜಿಸ್ಟರ್‌ ತಪ್ಪದೇ ಮಾಡಿಸಿರಬೇಕು.ಇನ್ನೂ ಸಾಲ ಪಡೆಯುವಾಗ ಚೆಕ್‌ ಕೊಡುವವರು ಜಾಗೃತಿ ವಹಿಸಿ ವ್ಯವಹರಿಸುವುದು ಅಗತ್ಯ. ಬಾಲ್ಯ ವಿವಾಹ ಕಾನೂನಿಗೆ ವಿರುದ್ಧ ಎಂದು ತಿಳಿದಿದ್ದರೂ ಸಹ ಕೆಲವರು ಬಾಲ್ಯ ವಿವಾಹ ಮಾಡಲು ಮುಂದಾಗುತ್ತಾರೆ, ಇದರಿಂದ ಕಾನೂನು ಕ್ರಮಕ್ಕೆ ಒಳಗಾಗುವುದಲ್ಲದೆ ಮಕ್ಕಳ ಭವಿಷ್ಯ ಹಾಳು ಮಾಡುತ್ತಾರೆ

ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ನ್ಯಾ. ಕೆ. ಗುರುಪ್ರಸಾದ

ಮುಳಗುಂದ: ನಿತ್ಯದ ಬದುಕಿನಲ್ಲಿ ಸಾಮಾನ್ಯ ಕಾನೂನುಗಳು ಬಳಕೆ ಇದ್ದು, ಅವುಗಳ ಬಗ್ಗೆ ಪ್ರತಿಯೊಬ್ಬ ನಾಗರಿಕರು ತಿಳಿದು ಅರಿತು ನಡೆಯಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಹೇಳಿದರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ ಸಮುದಾಯ ಭವನದಲ್ಲಿ ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪಪಂ ಹಾಗೂ ಪಟ್ಟಣ ಮಾರಾಟ ಸಮಿತಿ ಸಹಯೋಗದಲ್ಲಿ ನಡೆದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೈಕ್‌ ಸೇರಿದಂತೆ ಇನ್ನಿತರ ವಾಹನ ಚಾಲನೆ ಮಾಡುವವರು ಕಡ್ಡಾಯವಾಗಿ ಲೈಸನ್ಸ್‌ ಹೊಂದಬೇಕು. ವಾಹನಗಳಿಗೆ ವಿಮಾ ಹಾಗೂ ರಜಿಸ್ಟರ್‌ ತಪ್ಪದೇ ಮಾಡಿಸಿರಬೇಕು.ಇನ್ನೂ ಸಾಲ ಪಡೆಯುವಾಗ ಚೆಕ್‌ ಕೊಡುವವರು ಜಾಗೃತಿ ವಹಿಸಿ ವ್ಯವಹರಿಸುವುದು ಅಗತ್ಯ. ಬಾಲ್ಯ ವಿವಾಹ ಕಾನೂನಿಗೆ ವಿರುದ್ಧ ಎಂದು ತಿಳಿದಿದ್ದರೂ ಸಹ ಕೆಲವರು ಬಾಲ್ಯ ವಿವಾಹ ಮಾಡಲು ಮುಂದಾಗುತ್ತಾರೆ, ಇದರಿಂದ ಕಾನೂನು ಕ್ರಮಕ್ಕೆ ಒಳಗಾಗುವುದಲ್ಲದೆ ಮಕ್ಕಳ ಭವಿಷ್ಯ ಹಾಳು ಮಾಡುತ್ತಾರೆ ಎಂದರು.

ವಕೀಲ ಎನ್.ಬಿ. ನದಾಫ್ ಮಾತನಾಡಿ, ೨೦೧೪ರಲ್ಲಿ ಸರ್ಕಾರವು ಬೀದಿ ಬದಿ ವ್ಯಾಪಾರಿಗಳಿಗೆ ಜೀವನೋಪಾಯ ಸಂರಕ್ಷಣೆ ಕಾಯ್ದೆ ಜಾರಿಗೆ ತಂದಿದೆ, ಅದರಲ್ಲಿ ಅವರ ಹಕ್ಕು ಮತ್ತು ಕರ್ತವ್ಯಗಳನ್ನು ಸ್ಪಷ್ಟವಾಗಿ ತಿಳಿಸಿದೆ. ಬೀದಿ ಬದಿ ವ್ಯಾಪಾರಿಗಳು ತಮ್ಮ ಹಕ್ಕುಗಳನ್ನು ಕೇಳಿ ಪಡೆದುಕೊಳ್ಳಬೇಕು. ಅದೆ ರೀತಿ ತಮ್ಮ ಕರ್ತವ್ಯಗಳನ್ನು ಸಹ ಪಾಲನೆ ಮಾಡುವದು ಮುಖ್ಯವಾಗಿದೆ ಎಂದರು.

ಈ ವೇಳೆ ಪಪಂ ಸದಸ್ಯರಾದ ಕೆ.ಎಲ್. ಕರೇಗೌಡ್ರ, ಮಹಾದೇವಪ್ಪ ಗಡಾದ, ಬಸವರಾಜ ಹಾರೋಗೇರಿ, ಉಮಾ ಮಟ್ಟಿ, ನೀಲಮ್ಮ ಅಸುಂಡಿ, ಮಲ್ಲಪ್ಪ ಚವ್ಹಾಣ, ಮುಖ್ಯಾಧಿಕಾರಿ ಮಂಜುನಾಥ ಗುಳೇದ, ಸಮುದಾಯ ಸಂಘಟನಾಧಿಕಾರಿ ವಾಣಿಶ್ರೀ ನಿರಂಜನ, ಬೀದಿಬದಿ ವ್ಯಾಪಾರ ಸಮಿತಿ ಸದಸ್ಯ ಭೀಮಪ್ಪ ಕೋಳಿ, ಮಹಾಂತವ್ವ ಭಜಂತ್ರಿ, ದಾದಾಖಲಂದ ಮುಜಾವರ, ಜಗದೀಶ ಸಿದ್ದನಗೌಡ್ರ, ಮಾಬೂಸಾಬ್‌ ಅಬ್ಬುನವರ, ಕಾಳಿಂಗಪ್ಪ ಇಟಗಿ, ಆನಂದ ಜೈನರ, ಸುಜಾತ ಮುಳಗುಂದ, ರತ್ನವ್ವ ಭಜಂತ್ರಿ ಮೊದಲಾದವರು ಇದ್ದರು.