ಅಭಿವೃದ್ಧಿಯ ಮೇಲೆ ಎಲ್ಲರೂ ರಾಜಕಾರಣ ಮಾಡಬೇಕು

| Published : Apr 03 2024, 01:37 AM IST

ಅಭಿವೃದ್ಧಿಯ ಮೇಲೆ ಎಲ್ಲರೂ ರಾಜಕಾರಣ ಮಾಡಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣೆಗೋಸ್ಕರ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಯಾರು ತೇಜೋವದೆ ಮಾಡಬಾರದು ಎಂದು ತುಮಕೂರು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಎಸ್ ಪಿ ಮುದ್ದಹನುಮೇಗೌಡ ತಿಳಿಸಿದರು.

ಕನ್ನಡ ಪ್ರಭ ವಾರ್ತೆ ಗುಬ್ಬಿ

ಚುನಾವಣೆಗೋಸ್ಕರ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಯಾರು ತೇಜೋವದೆ ಮಾಡಬಾರದು ಎಂದು ತುಮಕೂರು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಎಸ್ ಪಿ ಮುದ್ದಹನುಮೇಗೌಡ ತಿಳಿಸಿದರು. ತಾಲೂಕಿನ ಹೇರೂರು ಬಾಲಾಜಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನ ಹಲವು ಮುಖಂಡರ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು

ಅಭಿವೃದ್ಧಿಯ ಮೇಲೆ ಎಲ್ಲರೂ ರಾಜಕಾರಣ ಮಾಡಬೇಕು ಅದನ್ನು ಬಿಟ್ಟು ರಾಜಕೀಯ ಕೆಸರೆರೆಚಾಟ ಮಾಡಬಾರದು. ಈ ಹಿಂದೆ ಸಂಸದರಾಗಿದ್ದಾಗ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಜಿಲ್ಲೆಯಲ್ಲಿ ಅತ್ಯಂತ ಪ್ರಬುದ್ಧ ಮತದಾರರಿದ್ದಾರೆ ಎಂದ ಅವರು ಬಿಜೆಪಿ ಜೆಡಿಎಸ್ ನ ಹಲವು ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಪಕ್ಷಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ತುಮಕೂರು ಲೋಕಸಭಾ ಕ್ಷೇತ್ರವನ್ನು ಗೆಲ್ಲಿಸಬೇಕು. ಎಂದು ಮನವಿ ಮಾಡಿದರು.

ಶಾಸಕ ಎಸ್ಆರ್ ಶ್ರೀನಿವಾಸ್ ಮಾತನಾಡಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದು ಅವರ ಕೈ ಬಲಪಡಿಸಬೇಕಾದರೆ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಬೇಕು. ಪ್ರತಿ ಚುನಾವಣೆಯಲ್ಲಿ ನನ್ನನ್ನು ಸೋಲಿಸಬೇಕು ಎನ್ನುತ್ತಾರೆ. ಆದರೆ ಮತದಾರರು ನನ್ನನ್ನು ಗೆಲ್ಲಿಸಿಕೊಂಡು ಬರುತ್ತಿದ್ದಾರೆ. ಯಾರು ಕ್ಷೇತ್ರದಲ್ಲಿ ಅಭಿವೃದ್ಧಿ ಪರವಾಗಿ ಕೆಲಸಗಳನ್ನು ಮಾಡುತ್ತಾರೋ, ಮತದಾರರು ಅವರ ಕೈ ಹಿಡಿಯುತ್ತಾರೆ.

ಬಿಜೆಪಿ ಜೆಡಿಎಸ್‌ನಿಂದ ನಮ್ಮ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿರುವವರು ಯಾವುದೇ ರೀತಿಯ ಬೇಸರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ, ನನಗೆ ಮತ ನೀಡಿಲ್ಲ ಎಂಬ ಬೇಸರ ನನಗಿಲ್ಲ. ಬೇರೆ ಪಕ್ಷದಿಂದ ಯಾರೇ ಬಂದರೂ ನಾವು ಅವರನ್ನು ಸ್ವಾಗತಿಸುತ್ತೇವೆ. ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡರು ತುಮಕೂರಿನವರು ಆದರೆ ಬಿಜೆಪಿ ಅಭ್ಯರ್ಥಿ ಸೋಮಣ್ಣ ಬೆಂಗಳೂರಿನವರು ಹೊರಗಿನವರು ಜಿಲ್ಲೆಯಲ್ಲಿ ಗೆದ್ದ ಇತಿಹಾಸವಿಲ್ಲ. ಮುದ್ದಹನುಮೇಗೌಡರು ಜಿಲ್ಲೆಯಲ್ಲಿ ಎಲ್ಲರ ಕೈಗೆ ಸಿಗುವಂತಹ ಅಭ್ಯರ್ಥಿಯಾಗಿದ್ದಾರೆ ಲೋಕಸಭೆಯಲ್ಲಿ ಜಿಲ್ಲೆಯ ಬಗ್ಗೆ ಮಾತನಾಡುವ ಧೈರ್ಯ ಇರುವುದು ಮುದ್ದಹನುಮೇಗೌಡರಿಗೆ ಮಾತ್ರ. ಹೊರಗಿನಿಂದ ಬಂದ ದೇವೇಗೌಡರನ್ನೇ ನೀವೆಲ್ಲರೂ ಸೋಲಿಸುತ್ತೀರಾ ಅಂದರೆ ಸೋಮಣ್ಣನವರ ಸೋಲು ಖಂಡಿತ. ಬಿಜೆಪಿ ದೇಶದ ಜನತೆಗೆ ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬರುತ್ತಿದೆ ಈ ಬಾರಿ ಅದು ನಡೆಯುವುದಿಲ್ಲ ಎಂದರು.

ಏಪ್ರಿಲ್ 4 ರ ಗುರುವಾರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡರು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು ನೀವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಜೆಡಿಎಸ್ ನ ಹಲವು ಮುಖಂಡರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.

ಈ ವೇಳೆ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಕೆ ಆರ್ ವೆಂಕಟೇಶ್, ಬಾಲಾಜಿ ಕುಮಾರ್, ಎಚ್ ನರಸಿಂಹಯ್ಯ, ಸಲೀಂಪಾಷ, ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.