ಸಾರಾಂಶ
ಚಿತ್ರದುರ್ಗ: ಶತ್ರುಗಳನ್ನು ಸದೆಬಡಿದು ಗಂಡುಮೆಟ್ಟಿನ ನಾಡು ಐತಿಹಾಸಿಕ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿ ಎಲ್ಲರ ಪ್ರಾಣ, ಮಾನ ಕಾಪಾಡಿದ ರಾಜಾವೀರ ಮದಕರಿನಾಯಕನನ್ನು ಪ್ರತಿಯೊಬ್ಬರು ಸ್ಮರಿಸಿಕೊಳ್ಳಬೇಕು ಎಂದು ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಶಿವಣ್ಣ ಹೇಳಿದರು.
ಚಿತ್ರದುರ್ಗ ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ರಾಜ ವೀರ ಮದಕರಿ ನಾಯಕರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಆಂಧ್ರದ ಶ್ರೀಶೈಲದ ಬಳಿಯ ಜಡಿಕಲ್ಲು ಗುಡ್ಡದಲ್ಲಿದ್ದ ರಾಜವೀರ ಮದಕರಿ ನಾಯಕ ವಂಶಸ್ಥರು, ವಿಜಯನಗರ ರಾಜರ ಬಳಿ ಆಶ್ರಯ ಪಡೆದು ತದ ನಂತರ ಅವರಿಂದ ಚಿತ್ರದುರ್ಗ ಸೇರಿದಂತೆ ಇತರೆ ಜಿಲ್ಲೆಗಳನ್ನು ಬಳುವಳಿಯಾಗಿ ಪಡೆದು ತಮ್ಮ ರಾಜ್ಯವನ್ನು ಸ್ಥಾಪನೆ ಮಾಡಿದರು. ತಮ್ಮ ಆಧಿಕಾರ ಅವಧಿಯಲ್ಲಿ ಉತ್ತಮವಾದ ಆಡಳಿತವನ್ನು ಜನರಿಗೆ ನೀಡಿದ್ದಲ್ಲದೆ, ಕೆರೆ ಕಟ್ಟೆಗಳನ್ನು ನಿರ್ಮಿಸಿ ಕೃಷಿ ಸೇರಿದಂತೆ ನೀರಿನ ಸಮಸ್ಯೆಗೆ ಪರಿಹಾರ ನೀಡಿದರು ಎಂದು ತಿಳಿಸಿದರು.
ಸಂಘ ಪರಿವಾರದ ಸಾಮರಸ್ಯ ಸಂಘಟಕ ವಾದಿರಾಜ್.ಜಿ ಮದಕರಿ ನಾಯಕ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್. ರಾಜ್ಯ ಕಾರ್ಯಕಾರಣಿ ಮಾಜಿ ಸದಸ್ಯ ಪಾಪೇಶ್ ನಾಯಕ ಮಾತನಾಡಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಾಳೇಕಾಯಿ ರಾಮ್‌ದಾಸ, ಸಂಪತ್ ಕುಮಾರ್. ಚಳ್ಳಕೆರೆ ಕ್ಷೇತ್ರ ಮುಖಂಡ ಕೆ.ಟಿ.ಕುಮಾರಸ್ವಾಮಿ, ಎಸ್ಟಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಕವನ, ರಾಜ್ಯ ಯುವ ಮೋರ್ಚಾ ಮಾಜಿ ಕಾರ್ಯದರ್ಶಿ ಮಂಜುನಾಥ್, ಗ್ರಾಮಾಂತರ ಮಂಡಲ ಅಧ್ಯಕ್ಷ ಕಲ್ಲೇಶಯ್ಯ, ಚಿತ್ರ ನಾಯಕ ಸಂಘದ ಅಧ್ಯಕ್ಷ ಪ್ರಶಾಂತ್, ಕೂಲಿಕಾರ್ ಯುವ ಮುಖಂಡ ಸೋಮು ರೈತ ಮಾರುತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರಮ್ಮನಹಳ್ಳಿ ನಾಗರಾಜ್, ಬೋಸೆರಂಗಸ್ವಾಮಿ, ನಾಯಕನಹಟ್ಟಿ ಮಂಡಲ ಅಧ್ಯಕ್ಷ ಶಿವಪ್ರಸಾದ್ ಪಾರ್ವತಯ್ಯ ಮತ್ತಿತರರಿದ್ದರು.