ಸಾರಾಂಶ
ಕೆ.ಆರ್.ಪೇಟೆ ತಾಲೂಕಿನಲ್ಲಿ ಜೆಡಿಎಸ್ ಪಡೆ ಬಲಿಷ್ಠವಾಗಿದೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತದಾರರ ಮನವೊಲಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಶ್ರಮಿಸಬೇಕು. ಕೆಳಹಂತದ ಕಾರ್ಯಕರ್ತರ ಮಾತಿಗೆ ಮನ್ನಣೆ ನೀಡಬೇಕು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಅಭ್ಯರ್ಥಿಗಳು ಯಾರೇ ಆಗಲಿ ಅವರ ಗೆಲುವಿಗೆ ಟೊಂಕಕಟ್ಟಿ ನಿಂತು ಗೆಲ್ಲಿಸಿಕೊಂಡು ಬರುವುದು ಮುಖಂಡರು ಹಾಗೂ ನನ್ನ ಆದ್ಯ ಕರ್ತವ್ಯ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಮುಂಬರುವ ಎಂಡಿಸಿಸಿ ಬ್ಯಾಂಕ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಕುರಿತು ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿ, ಸಹಕಾರ ಸಂಘಗಳ ಚುನಾವಣೆಯಲ್ಲಿ ಮುಖಂಡರು ಎಲ್ಲಾ ಭಿನ್ನಾಭಿಪ್ರಾಯ ಬಿಟ್ಟು ಒಗ್ಗಟ್ಟಿನಿಂದ ಚುನಾವಣೆ ನಡೆಸಬೇಕು ಎಂದರು.ತಾಲೂಕಿನಲ್ಲಿ ಜೆಡಿಎಸ್ ಪಡೆ ಬಲಿಷ್ಠವಾಗಿದೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತದಾರರ ಮನವೊಲಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಶ್ರಮಿಸಬೇಕು. ಕೆಳಹಂತದ ಕಾರ್ಯಕರ್ತರ ಮಾತಿಗೆ ಮನ್ನಣೆ ನೀಡಬೇಕು ಎಂದು ಮುಖಂಡರಿಗೆ ಸಲಹೆ ನೀಡಿದರು.
ಸಭೆಯಲ್ಲಿ ಸಹಕಾರ ಮಹಾ ಮಂಡಳದ ನಿರ್ದೇಶಕ ಚೋಳೇನಹಳ್ಳಿ ಪುಟ್ಟಸ್ವಾಮಿಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಂ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ದಿಶಾ ಸಮಿತಿ ಸದಸ್ಯ ನರಸ ನಾಯಕ, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ, ತಾಪಂ ಮಾಜಿ ಸದಸ್ಯರಾದ ಸಂಜೀವಪ್ಪ ಮಲ್ಲೇನಹಳ್ಳಿ ಮೋಹನ್, ಮುಖಂಡರಾದ ಅಕ್ಕಿಹೆಬ್ಬಾಳು ಶ್ರೀನಿವಾಸ್ ತೋಟಪ್ಪಶೆಟ್ಟಿ, ಸಂತೆಬಾಚಹಳ್ಳಿರವಿ, ಬಲ್ಲೇನಹಳ್ಳಿ ನಂದೀಶ್, ನಾಟನಹಳ್ಳಿಮಹೇಶ್, ಗುತ್ತಿಗೆದಾರ ಬಲರಾಮ್, ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.ಮಾ.೧ರಿಂದ ಶ್ರೀ ಶನೇಶ್ವರಸ್ವಾಮಿ ಜಾತ್ರಾ ಮಹೋತ್ಸವ
ಕನ್ನಡಪ್ರಭ ವಾರ್ತೆ ಮಂಡ್ಯತಾಲೂಕಿನ ಕಚ್ಚೀಗೆರೆ ಗ್ರಾಮದ ಶ್ರೀಶನೇಶ್ವರ ಸ್ವಾಮಿ ದೇವಸ್ಥಾನದಿಂದ ಜಾತ್ರಾ ಮಹೋತ್ಸವವನ್ನು ಮಾ.೧ ಮತ್ತು ೨ರಂದು ಏರ್ಪಡಿಸಲಾಗಿದೆ.
ಮಾ.೧ರಂದು ಬೆಳಗ್ಗೆ ೭.೩೦ಕ್ಕೆ ಶ್ರೀಶನೇಶ್ವರಸ್ವಾಮಿ ಸನ್ನಿಧಿಯಲ್ಲಿ ಸಂಕಲ್ಪ ಗಣಪತಿ ಆರಾಧನೆ, ರಕ್ಷಾಬಂಧನ ನವಗ್ರಹ ಹೋಮ, ಮಹಾ ಪೂರ್ಣಾಹುತಿ, ಸ್ವಾಮಿಗೆ ಪಂಚಾಮೃತಾಭಿಷೇಕ, ವಸ್ತ್ರಧಾರಣೆ, ಬೆಳ್ಳಿ ಕವಚಧಾರಣೆ, ವಿವಿಧ ಪುಷ್ಪಾಲಂಕಾರ ಏರ್ಪಡಿಸಲಾಗಿದೆ.ಮಧ್ಯಾಹ್ನ ೨ ರಿಂದ ೫ ಗಂಟೆಯವರೆಗೆ ವೈಭವ ಮಹಾಲಕ್ಷ್ಮೀ ಪೂಜೆ, ಸಂಜೆ ೫ ರಿಂದ ೭.೩೦ರವರೆಗೆ ವಿವಿಧ ವೀರಗಾಸೆ ವಾದ್ಯ ಮೆರವಣಿಗೆ ಮೂಲಕ ಮೀಸಲು ನೀರು ತರುವುದು. ಸಂಜೆ ೬ ಗಂಟೆಯಿಂದ ರಾತ್ರಿ ೧೧.೩೦ರ ವರೆಗೆ ಕಚ್ಚೀಗೆರೆಯ ಶ್ರೀವಿನಾಯಕ ಗೆಳೆಯರ ಬಳಗದಿಂದ ಸುಗಮ ಸಂಗೀತ ಭಕ್ತಿ ಗೀತೆಗಳು, ಗಿಚ್ಚಿ ಗಿಲಿಗಿಲಿ ಹಾಸ್ಯ ಕಲಾವಿದರಾದ ಚಂದ್ರಪ್ರಭ. ವಿನೋದ್ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ೧೧ ಗಂಟೆಯಿಂದ ಬೆಳಗ್ಗೆ ೫ ಗಂಟೆಯವರೆಗೆ ಬೆಳ್ಳಿಗಿಂಡಿ ಪೂಜೆ, ಶ್ರೀಶನೇಶ್ವರಸ್ವಾಮಿ ಬೆಳ್ಳಿ ರಥೋತ್ಸವ, ಶ್ರೀ ಮಲೆ ಮಹದೇಶ್ವರ ಸ್ವಾಮಿ ಹುಲಿವಾಹನೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಬಳಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.