ಸಾರಾಂಶ
ಮಹಿಳೆ ತ್ಯಾಗ ಮತ್ತು ಸೇವೆಯ ಪ್ರತೀಕ ಎಂದು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ತುಮಕೂರುಮಹಿಳೆ ತ್ಯಾಗ ಮತ್ತು ಸೇವೆಯ ಪ್ರತೀಕ ಎಂದು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.ನಗರದ ರೋಟರಿ ಬಾಲಭವನದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ಪ್ರಥಮ ಸಭೆಯಲ್ಲಿ ಮಾತನಾಡಿದರು. ರೋಟರಿ ಸೇವಾಸಂಸ್ಥೆಯು ಒಂದು ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ಸಂಘಟಿತ ಸಂಸ್ಥೆಯಾಗಿದೆ. ತನ್ನ ವಿಶಿಷ್ಟ ಸೇವೆಯಿಂದ ಗುರುತಿಸಿಕೊಂಡಿದ್ದು, ಸಮಾಜದ ಸಂಕಷ್ಟಗಳ ಕಾಲದಲ್ಲಿ ಸಾಮಾಜಿಕ, ಆರ್ಥಿಕವಾಗಿ ಸ್ಪಂದಿಸುವ ಮೂಲಕ ಸೇವೆ ಸಲ್ಲಿಸುತ್ತಿದೆ. ಮಹಿಳೆ ತ್ಯಾಗ ಮತ್ತು ಸೇವೆಯ ಪ್ರತೀಕ ಎಂದರು.
ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಸಿದ್ಧಗಂಗ ಆಸ್ಪತ್ರೆಯ ನಿರ್ದೇಶಕ ಡಾ. ಪರಮೇಶ್ ಮಾತನಾಡಿ, ನಾನು ಸಹ ರೋಟರಿ ತುಮಕೂರಿನ ಸದಸ್ಯನಾಗಿದ್ದು, ರೋಟರಿ ಸಂಸ್ಥೆಯ ಎಲ್ಲಾ ಸೇವಾ ಕಾರ್ಯಗಳಿಗೆ ನಮ್ಮ ಸಹಕಾರವಿರುತ್ತದೆ ಎಂದರು.ಶಿವಣ್ಣ ಮಲ್ಲಸಂದ್ರ ಅವರನ್ನು ಸನ್ಮಾನಿಸಲಾಯಿತು. ಅರ್ಲಿಬರ್ಡ್ಸ್ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಧ್ಯಕ್ಷೆ ರಾಜೇಶ್ವರಿ ರುದ್ರಪ್ಪ, ಸುದರ್ಶನ್, ಪರಮೇಶ್, ಇನ್ನರ್ ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಶೀಲಾ ಮಧು, ಕಾಡದೇವರಮಠ, ಬಸವರಾಜ್ ಹಿರೇಮಠ್, ಎಂ.ಎಸ್.ಉಮೇಶ್ ಉಪಸ್ಥಿತರಿದ್ದರು.